(ಲೇಖನ -91)ಸಮುದ್ರದೊಳಗಿನ ಕಸವಾಗುವುದಕ್ಕಿಂತ ಬಾವಿಯೊಳಗಿನ ಕಪ್ಪೆಯಾಗುವುದೇ ಲೇಸು, ಪ್ರಪಂಚ ಬಹಳ ದೊಡ್ಡದು,

(ಲೇಖನ -91) ಸಮುದ್ರದೊಳಗಿನ  ಕಸವಾಗುವುದಕ್ಕಿಂತ  ಬಾವಿಯೊಳಗಿನ  ಕಪ್ಪೆಯಾಗುವುದೇ ಲೇಸು, ಪ್ರಪಂಚ ಬಹಳ ದೊಡ್ಡದು, ಯಾವುದು ಸರಿ ಯಾವುದು ತಪ್ಪು ಅನ್ನೋದನ್ನ  ಕಲಿಯುವಷ್ಟರಲ್ಲಿ  ನಮ್ಮ ಜೀವನವೇ  ಮುಗಿದು ಹೋಗುತ್ತದೆ. ಕೆಲವರ ಬದುಕು ಅಲ್ಪಸಮಯ, ಕೆಲವರ ಬದುಕು  ದೀರ್ಘವಾಗಿ ನಡೆಯುತ್ತಿರುತ್ತದೆ, ಆದರೆ ಜೀವನದಲ್ಲಿ ಮಾಡುವ  ಚಿಕ್ಕ ಸಾಧನೆ  ಅಥವಾ ದೊಡ್ಡ ಸಾಧನೆ ಆ ವ್ಯಕ್ತಿಯ ಜೀವನವನ್ನು  ಸಾರ್ಥಕಗೊಳಿಸುತ್ತದೆ. ಸಾಧನೆ ಎಂಬ ನೆಪದಲ್ಲಿ ಅವ್ಯವಹಾರಗಳಲ್ಲಿ  ತೊಡಗಿಸಿಕೊಂಡು  ಮಾಡುವ ಸಾಧನೆ ಒಂದೆಡೆಯಾದರೆ, ಯಾವುದೇ  ಬಯಕೆಗಳಿರದೇ  ನಿಸ್ವಾರ್ಥವಾಗಿ  ಮಾಡುವ ಸಾಧನೆಗಳು  ಇನ್ನೊಂದು ಕಡೆ ಇರುತ್ತದೆ. ತಾನು ಸಾಧಿಸಿದ್ದೇನೆ  ಎಂದು ತೋರ್ಪಡಿಸಿಕೊಳ್ಳುವವರು ಒಂದು ಸಂದರ್ಭದಲ್ಲಿದ್ದರೆ, ಎಷ್ಟು ದೊಡ್ಡ ಸಾಧನೆ ಮಾಡಿದರೂ ನಾನು ಮಾಡಿರುವ ಕೆಲಸ ಏನೂ ಅಲ್ಲ ಹೇಳುವ ಮಹಾನ್ ವ್ಯಕ್ತಿಗಳು ಕೂಡ ಈ ಸಮಾಜದಲ್ಲಿದ್ದಾರೆ. ನಮ್ಮ ಪ್ರಪಂಚವನ್ನು ನಾವೇ ಸೃಷ್ಟಿ ಮಾಡಿಕೊಳ್ಳುವ  ಕಲೆಯನ್ನು ಕಲಿಯಬೇಕು ಇಲ್ಲವಾದಲ್ಲಿ ನಕಾರಾತ್ಮಕ ಜನ ಮತ್ತು ಘಟನೆಗಳ ನಡುವೆ ಬದುಕು ದುಸ್ತರವಾಗುತ್ತದೆ. ಜೀವನ ಹರಿಯುವ ನದಿಯಂತೆ ಇರಬೇಕೆಂದು ಬಯಸಿದರೂ ಒಮ್ಮೊಮ್ಮೆ ಇರಲಾಗುವುದಿಲ್ಲ, ಸುಮ್ಮನೆ ಜೀವನದಿ ಹರಿಯುತ್ತಿದ್ದಂತೆ ಬದುಕನ್ನು ನಿಲ್ಲಿಸುವ ಪ್ರಯತ್ನಕ್ಕೆ ಕೈ ಹಾಕುವ ಜನರು ಜೀವನದ ಹಾದಿಯಲ್ಲಿ ಸಿಗುತ್ತಾ ಇರುತ್ತಾರೆ. ಬಹುತೇಕ ಅಸೂಯೆವುಳ್ಳ ಮನುಷ್ಯರು ಅನ್ಯರ ಕಾಳೆಳೆಯುವುದನ್ನೇ ತನ್ನ ಕಾಯಕವಾಗಿ ತೊಡಗಿಸಿಕೊಂಡಿರುತ್ತಾರೆ.



             ವೈರಿಗಳು ನಮ್ಮ ಉದ್ದಾರಕ್ಕಾಗಿ ಬಹು ಅಗತ್ಯ, ಅವರಿಲ್ಲದೇ ಇದ್ದರೆ ಬದುಕಿನಲ್ಲಿ ಸ್ವಾರಸ್ಯವೇ ಇರುವುದಿಲ್ಲ, ನೀವುಗಳು ಮೇಲೆದ್ದು ಬರಬೇಕಿದ್ದರೆ ವೈರಿಗಳ ಸವಾಲುಗಳೇ ನಮಗೆ ಅಡಿಪಾಯ. ವೈರಿಗಳಿದ್ದರೆ ನಮ್ಮ ಬುದ್ದಿಯೂ ಚುರುಕಾಗಿ ಇರುತ್ತದೆ, ವೈರಿಗಳಿಗೆ ನಮ್ಮ ಚಲವಲನ ನೋಡುವ ಬಹಳ ದೊಡ್ಡ ಕೆಲಸವನ್ನು ಕೊಟ್ಟಹಾಗೆ ಆಗುತ್ತದೆ, ಏನೂ ಮಾಡಲು ಆಗದೇ ಇದ್ದಾಗ ಒಂದಷ್ಟು ಸುಳ್ಳುಗಳನ್ನು ಹಬ್ಬಿಸಿ ನಿಮ್ಮ ಮಾನ ಹಾನಿಗೆ ಅಥವಾ ಇಲ್ಲದ ಕಟ್ಟುಕಥೆ ಹಂಚಲು ಆರಂಭಿಸುತ್ತಾನೆ. ಅದೂ ಕೂಡ ನಡೆಯದೆ ಇದ್ದಾಗ ನಿಮ್ಮ ಸ್ನೇಹಿತ ವರ್ಗ, ಹತ್ತಿರದವರನ್ನು ನಿಮ್ಮ ವೈರಿಯೇ ಗೆಳೆಯನಾಗಲು ಪ್ರಯತ್ನಿಸಿ ಅದೇ ಚಾಳಿಯನ್ನು ಮುಂದುವರಿಸುತ್ತಾನೆ. ಇದೆಲ್ಲವೂ ಸರ್ವೇ ಸಾಮಾನ್ಯವಾಗಿ ನಡೆಯುವಂತಹ ವಿಚಾರಗಳು. ಆದರೆ ಇದನ್ನೆಲ್ಲವನ್ನು ಎದುರಿಸುವ ಶಕ್ತಿ ನಿಜವಾದ ಸತ್ಯವಂತನಿಗೆ ಮಾತ್ರ ಇರುತ್ತದೆ. ಕಳ್ಳನಾದವನಿಗೆ ಯಾವತ್ತೂ ಹೆದರಿಕೆ ಅನ್ನುವುದು ಇದ್ದೇ ಇರುತ್ತದೆ, ಕಳ್ಳನು ಸಿಕ್ಕಿ ಬೀಳದೆ ಇರುವುದು ಬಹಳ ಕಡಿಮೆ. ಒಂದಲ್ಲ ಒಂದು ದಿನ ತನ್ನ ಹೆಗಲನ್ನು ನೋಡುತ್ತಾ ಓಡಾಡುತ್ತಾನೆ.

       ನಿಮ್ಮ ಜೀವನದಲ್ಲಿ ಅದೇನು ಕಷ್ಟ ಬಂದರೂ ಸುಖ ಬಂದರೂ ಧೈರ್ಯವಾಗಿ ಎದುರಿಸಲು ಕಲಿಯಬೇಕು ಇಲ್ಲವಾದಲ್ಲಿ ದುಷ್ಟರ ಪ್ರಪಂಚದಲ್ಲಿ ಬದುಕೆನ್ನುವುದು ಕಷ್ಟ ವಾಗಿ ಬಿಡುತ್ತದೆ. ಬೆನ್ನು ಹತ್ತುವವರು ಬೆನ್ನ ಹತ್ತಲಿ, ಬಾಣ ಬಿಡುವವರು ಬಾಣವನ್ನು ಬಿಡಲಿ, ಕತ್ತಿ ಬೀಸುವವರು ಕತ್ತಿ ಬೀಸಲಿ ಆದರೆ ನಾವು ನಡೆಯುವ ದಾರಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಊರಿಗೆಲ್ಲ ಉಪದೇಶ ಕೊಡುತ್ತ ತನ್ನ ಕಾಲ ಬುಡದ ಕಸವನ್ನು ಸ್ವಚ್ಛ ಮಾಡದೇ ಬದುಕುವ ಜನವಂತು ಆಗಲೇ ಬೇಡ.

       ಸಜ್ಜನರ ಸಂಘ ನಮ್ಮ ಬದುಕನ್ನು ಉಜ್ವಲಗೊಳಿಸುತ್ತದೆ, ದುರ್ಜನರ ಸಂಘ ನಮ್ಮ ಬದುಕನ್ನು ಆರಿಸುತ್ತದೆ, ನಮ್ಮ ಆಯ್ಕೆಗೆ ತಕ್ಕಂತೆ ಪ್ರಪಂಚವನ್ನು ಸೃಷ್ಟಿಮಾಡಿಕೊಳ್ಳಹುದು, ಪ್ರಪಂಚವೆಂದರೆ ವಿವಿಧ ವಿಚಾರ ಚಿಂತನೆ ಗುರಿಯನ್ನು ಹೊಂದಿರುವವರ ಸಂಘ, ಹೇಗಾದರೂ ಆಯ್ಕೆ ನಮ್ಮದಾಗಿರುತ್ತದೆ. ಏರುಪೆರಿನ ದಿನಗಳಲ್ಲಿ ಕೆಟ್ಟದು ಒಳ್ಳೆಯದು ಎರಡೂ ಸ್ವೀಕಾರ ಮಾಡಲೇ ಬೇಕಾಗುತ್ತದೆ. ಅಂತ್ಯದಲ್ಲಿ ನಾವುಗಳು ಮಾಡಿದ ಒಳಿತು ಕೆಡುಕಿನ ಲೆಕ್ಕಾಚಾರವನ್ನೂ ಮಾಡಬೇಕಾಗುತ್ತದೆ.

           ಬಿದ್ದವನನ್ನು ನೋಡಿ ನಗಬೇಡ, ನಾಳೆ ನೀನೂ ಬೀಳುತ್ತೀಯ, ಕದ್ದವನನ್ನು ಹೊಗಳಬೇಡ ನಾಳೆ ನಿನ್ನ ಮನೆಯನ್ನು ಕದಿಯಬಹುದು, ಯಾವಾಗಲೂ ಹೊಗಳುವವನನ್ನು ನಂಬಬೇಡ ನಾಳೆ ಹೊಗಳುವವನೆ ತೆಗಳಬಹುದು.

              ✍️ಮಾಧವ. ಕೆ ಅಂಜಾರು 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.