(ಲೇಖನ -90)ರಾಜ್ಯದ ಜನತೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ವ್ಯವಸ್ಥೆಯ ಅವ್ಯವಸ್ಥೆಯಿಂದ ಭರವಸೆಯನ್ನು ಕಳೆದುಕೊಳ್ಳುತ್ತಾ ಇದ್ದಾರೆಯೇ?
(ಲೇಖನ -90) ರಾಜ್ಯದ ಜನತೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ವ್ಯವಸ್ಥೆಯ ಅವ್ಯವಸ್ಥೆಯಿಂದ ಭರವಸೆಯನ್ನು ಕಳೆದುಕೊಳ್ಳುತ್ತಾ ಇದ್ದಾರೆಯೇ? ಎಲ್ಲಿಗೆ ಹೋದರೂ ಅನ್ಯಾಯಗಳ ನಡುವೆ ನ್ಯಾಯವೆಂಬುದು ದುರ್ಬಲರಿಗೆ ಮರೀಚಿಕೆಯಾಗುತ್ತಿದೆಯೇ? ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ನಮ್ಮ ವ್ಯವಸ್ಥೆಗಳು ಅಲ್ಲೋಲಕಲ್ಲೋಲವಾಗುತ್ತಿದೆಯಾ? ಅನ್ಯಾಯಕ್ಕೆ ಒಳಗಾದ ಜನರು ನ್ಯಾಯದ ಮೆಟ್ಟಿಲು ಹತ್ತಿದಾಗ ನ್ಯಾಯ ಸಿಗುತ್ತಿಲ್ಲವೇ? ಅಧಿಕಾರಿಗಳಿಗೆ ಗುಣಮಟ್ಟದ ಯೋಚನೆಗಳ ಕೊರತೆ ಇದೆಯೇ? ಸರ್ಕಾರಿ ಸಂಬಳ ಹೊರತಾಗಿ ಇನ್ನಷ್ಟು ಹಣದಾಸೆಗೆ ಅಡ್ಡ ದಾರಿ ಹಿಡಿಯುವವರ ಸಂಖ್ಯೆ ಶೇಕಡಾ ಎಂಬತ್ತಕ್ಕಿಂತಲೂ ಜಾಸ್ತಿ ಆಗಿದೆಯೇ? ಭ್ರಷ್ಟಾಚಾರ ಬುಡಮೇಲಿಂದ ಕಿತ್ತು ಹಾಕುವ ಬದಲು ಭ್ರಷ್ಟಾಚಾರವೇ ಹೆಮ್ಮರವಾಗಿ ಬೆಳೆದು ಬಿಟ್ಟಿದೆ ಅನಿಸುತ್ತಿಲ್ಲವೇ? ಸಾಮಾನ್ಯ ಜನರು ಈ ಎಲ್ಲಾ ತೊಂದರೆಗಳಿಗೆ ಬಲಿಯಾಗಿ ತಮ್ಮ ಜೀವನದಲ್ಲಿ ಎಷ್ಟು ಕಷ್ಟ ಪಟ್ಟಿರಬಹುದು ಅಲ್ಲವೇ? ಹುಟ್ಟಿನಿಂದ ಸಾಯುವವರೆಗೂ ವಿವಿಧ ತರಹದ ದಬ್ಬಾಳಿಕೆ, ಬೇಡಿಕೆ, ಸುಲಿಗೆ, ಬೆದರಿಕೆಗಳಿಗೆ ಒಳಗಾಗಿ ಬೇಸತ್ತು ಊರು ಬಿಟ್ಟ ಜನಗಳ ಲೆಕ್ಕ ಸಿಗಲು ಸಾಧ್ಯವಿದೆಯೇ? ನಂಬಿಕೆಗಳನ್ನು ವ್ಯಾಪಾರಿಕರಣ ಮಾಡಿ ಜನರನ್ನು ಇನ್ನಷ್ಟು ತೊಂದರೆಗಳಿಗೆ ಸಿಲುಕಿಸಿ, ಅಲ್ಲಿ ದೇವರುಗಳು ಕಾಪಾಡದೆ ಇಲ್ಲಿ ವ್ಯವಸ್ಧೆಗಳು ಕೂಡ ಕಾಪಾಡದೆ ಅದೆಷ್ಟು ಬಡ ಜೀವಗಳು ನಶಿಸಿ ಹೋಗಿರಬಹುದು ಅಲ್ಲವೇ? ಇದಕ್ಕೆಲ್ಲ ಹೊಣೆ ಯಾರು ಹೇಳುತ್ತೀರಾ? ಹಾಗೆ ಹೇಳಬೇಕಾಗಿಲ್ಲ, ಯಾಕೆಂದರೆ. ಜವಾಬ್ದಾರಿಯುತ ಪ್ರಜೆಗಳ ಕೊರತೆ ನಮ್ಮಲ್ಲಿ ಕಾಣುತ್ತಿದೆ ಅಲ್ಲವೇ? ಈ ಎಲ್ಲಾ ಅವ್ಯವಸ್ಥೆಯನ್ನು ಪ್ರಶ್ನಿಸುವ ಕೆಲವೇ ಕೆಲವು ಮಂದಿ! ನಿಮ್ಮ ಸುತ್ತಲೂ ನೀವು ನೋಡುತ್ತಿರಬಹುದು, ಗ್ರಾಮ ಮತ್ತು ಪಟ್ಟಣ ಮಟ್ಟದಲ್ಲಿ ನಡೆಯುವ ಸರ್ಕಾರಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಕೆಲವೇ ಜನರಲ್ಲಿ ಎದ್ದು ಮಾತಾನ್ನಾಡುವ ಸಾಮರ್ಥ್ಯ ಕೇವಲವಾಗಿ ಒಂದೋ ಎರಡು ಜನರಿಗೆ ಸೀಮಿತವಾಗಿದ್ದಂತೆ ಕಾಣುತ್ತದೆ. ವಿದ್ಯಾರ್ಥಿಗಳು, ಜ್ಞಾನ ವುಳ್ಳ ಜನರು ಹಿಂಜರಿಕೆ ಮಾಡಿ ಅವಿವೇಕವುಳ್ಳ ಅಧಿಕಾರಿಗಳನ್ನು ಪ್ರಶ್ನಿಸುವ ಧೈರ್ಯ ಕೂಡ ಮಾಡದ ಜನತೆಯ ಕೊರತೆಯಿಂದ ಭ್ರಷ್ಟಾಚಾರ ಹೆಚ್ಚಾಗಿ ಬೆಳೆದು ನಿಲ್ಲುತ್ತಿದೆ ಅನಿಸುತ್ತಿದೆ. ವಿದ್ಯಾರ್ಥಿಗಳು, ಈ ವಿಚಾರದಲ್ಲಿ ಉತ್ತಮವಾದ ಜ್ಞಾನ ಪಡೆದುಕೊಳ್ಳಬೇಕು. ಭವಿಷ್ಯದಲ್ಲಿ ಭ್ರಷ್ಟಾಚಾರಿಗಳಿಗೆ ಜೈಲೂಟ ಮಾಡಿಸಲು ಈಗಲೇ ತಯಾರಿಯಲ್ಲಿ ತೊಡಗಬೇಕು.
ನಮ್ಮ ಕಾಲೇಜು, ಶಾಲೆ ಗಳಲ್ಲಿ ಧೈರ್ಯ, ಶೌರ್ಯದ ಮತ್ತು ಮನಸ್ಸಿನ ಏಕಾಗ್ರತೆ,ಸದೃಢತೆ ಕಾಪಾಡಿಕೊಳ್ಳುವ ಮತ್ತು ಉತ್ತಮವಾದ ಚಿಂತನೆಯ ಕನಸುಗಳನ್ನು ಕಟ್ಟಿ ಸಮಾಜಕ್ಕೆ ಬಿಡುವ ಕೆಲಸಗಳು ನಡೆಯಬೇಕು. ವಿದ್ಯೆ ಎಂದರೆ ಬರೇ ಸಂಪಾದನೆ ಮಾಡಲು ಸೀಮಿತವಲ್ಲ ಅನ್ನುವ ಭಾವನೆ ಬೆಳೆಸಬೇಕು. ಪ್ರತೀ ವಿದ್ಯಾರ್ಥಿ ಒಂದಲ್ಲ ಒಂದು ರೀತಿಯಲ್ಲಿ ಒಂದಿಷ್ಟು ನಮ್ಮ ದೇಶಕ್ಕಾಗಿ, ಊರಿಗಾಗಿ ಅಳಿಲ ಸೇವೆ ಮಾಡುವ ಕಾರ್ಯವನ್ನು ಇನ್ನಷ್ಟು ಹೇಳಿ ಕೊಡಬೇಕು. ಇಂತಹ ಕೆಲಸಕ್ಕೆ ಉತ್ತಮವಾದ ಅಧಿಕಾರಿಗಳು ಶಾಲೆ ಕಾಲೇಜುಗಳಲ್ಲಿ ವರುಷಕ್ಕೆ ಕನಿಷ್ಟ 4 ಬಾರಿಯಾದರೂ ತಮ್ಮ ಅನುಭವವನ್ನು ಹಂಚಿ ಭವಿಷ್ಯದಲ್ಲಿ ಉತ್ತಮವಾದ ಸಮಾಜ ನಿರ್ಮಿಸಲು ಸಾಧ್ಯವಿದೆ. ಪ್ರತೀ ವರುಷ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಹೊರಗೆ ಬರುತ್ತಾರೆ ಆದರೆ ಮಾಹಿತಿಯ ಪ್ರಕಾರ ಕೇವಲ 2 % ಜನರು ಉತ್ತಮವಾದ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಸೇರುತ್ತಾರೆ. ನಮ್ಮ ಈಗಿನ ವ್ಯವಸ್ಧೆಗಳು 75 ವರುಷದ ಹಿಂದಿನ ಪದ್ಧತಿ ಮುಂದಿನ ಜನಾಂಗಕ್ಕೆ ಸಹಾಯವಾಗಬಹುದೇ? ಮನುಷ್ಯನ ದೇಹದ ರೋಗನಿರೋದಕ ಶಕ್ತಿ ಕಡಿಮೆಯಾಗುತ್ತಿದೆ, ನಮ್ಮ ವಿಜ್ಞಾನ ಈ ಹಿಂದಿನ ಆವಿಷ್ಕಾರವನ್ನು ನೋಡಿದಾಗ ಬಹಳಷ್ಟು ನಿಧಾನವಾಗಿದ್ದೇವೆ ಎಂದು ತೋರುತ್ತಿಲ್ಲವೇ? ನಾವುಗಳು ಕಲಿತಿರುವ ವಿಜ್ಞಾನಿ ಗಳ ಸಂಶೋಧನೆ ಎಷ್ಟು ಆಳ ಮತ್ತು ಇಂದಿನ ಜನರಿಗೆ ಅದೆಷ್ಟು ಪ್ರಯೋಜನ ಅಲ್ಲವೇ?
ಬೆಳಕು, ಗುರುತ್ವಾಕರ್ಷಣೆ, ಅಂಕಿ ಅಂಶಗಳ ಸಂಶೋದನೆ ಮತ್ತು ಕಾಲರ, ಪ್ಲೇಗ್, ಮಹಾಮಾರಿ ರೋಗಕ್ಕೆ ಚುಚ್ಚು ಮದ್ದನ್ನು ಕಂಡು ಹಿಡಿದ ಅದೆಷ್ಟೋ ವಿಜ್ಞಾನಿಗಳು ನಮ್ಮ ಭವಿಷ್ಯವನ್ನು ರಕ್ಷಿಸಿದ್ದಾರೆ ಅಲ್ಲವೇ? ಈಗಲೂ ಏಡ್ಸ್, ಕ್ಯಾನ್ಸರ್ ಇನ್ನಿತರ ರೋಗಗಳಿಂದ ಸಾವಿಗೀಡಾಗುವ ಜನರ ಸಂಖ್ಯೆ ಕಮ್ಮಿ ಇಲ್ಲ, ಒಂದು ವಿಚಾರದಲ್ಲಿ ನೋಡಿದಾಗ ನಾವುಗಳು ಹಿಂದಿನ ವಿಜ್ಞಾನಿಗಳ ಆವಿಷ್ಕಾರಗಳನ್ನು ವೃದ್ಧಿ ಮಾಡಿದ್ದೇವೆ ಹೊರತು ಹೊಸ ಆವಿಷ್ಕಾರ ಮಾಡಿರುವ ವಿಜ್ಞಾನಿಗಳು ಬಹಳಷ್ಟು ಕಡಿಮೆಯೇ ಇದ್ದಾರೆ ಅಲ್ಲವೇ? ಕೊರೋನ ಮಹಾಮಾರಿ ಬಂದಾಗ ವಿಜ್ಞಾನಿಗಳು ಹರಸಾಹಸ ಪಟ್ಟು ನಮ್ಮನ್ನೆಲ್ಲ ರಕ್ಷಣೆ ಮಾಡಿರುತ್ತಾರೆ, ಅವರಿಗೆಲ್ಲರಿಗೂ ನಾವೆಲ್ಲರೂ ಚಿರಋಣಿಯಾಗಿರಬೇಕು ನಮ್ಮ ದೇಶದಲ್ಲಿ ವಿಜ್ಞಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು, ಇಂಜಿನಿಯರ್, ಕೃಷಿ ವಲಯದ ಅಭಿವೃದ್ಧಿ ಮಾಡುವಂತಹ ಉತ್ತಮ ಬುದ್ದಿಯುಳ್ಳ ಜನರು ಹೆಚ್ಚಾಗಿ ನಮ್ಮ ದೇಶದಲ್ಲಿ ಹುಟ್ಟಿ ಬರಬೇಕು ಮತ್ತು ಅದಕ್ಕಾಗಿ ನಮ್ಮ ವ್ಯವಸ್ಥೆಗಳು ಭ್ರಷ್ಟಚಾರ ಮಾಡದೇ ಸಹಾಯ ಮಾಡಲೇ ಬೇಕು.
ಎಲ್ಲದಕ್ಕೂ ಕಾರಣ ಹಣ ಐಶ್ವರ್ಯ, ಅದಕ್ಕಾಗಿ ತನ್ನನ್ನು ತಾನು ಮಾರಿಕೊಂಡು ಭ್ರಷ್ಟ ಮರದ ಬೇರಾಗಿ ಕಾರ್ಯನಿರ್ವಹಿಸುವ ಕೆಲವು ಅಧಿಕಾರಿಗಳಿಂದ ಇಂದು ಎಲ್ಲಾ ವ್ಯವಸ್ಥೆಗಳು ಅವ್ಯವಸ್ಥೆ ಆಗಿ ಹೋಗುತ್ತಿದೆ. ಅನ್ಯಾಯಗಳು ಮೆರೆದಾಡುತ್ತಿವೆ, ಕೊಲೆ, ದರೋಡೆ, ಅತ್ಯಾಚಾರ ಮಾಡಿರುವ ಆರೋಪಿಗಳು ಸಾಕ್ಷಿ ಆಧಾರ ಇಲ್ಲವೆಂಬ ಕಾರಣಕ್ಕೆ ಶಿಕ್ಷೆಗೆ ಒಳಗಾಗುತ್ತಿಲ್ಲ. ಕಣ್ಣಿದ್ದು ಕುರುಡರಂತೆ ನಟಿಸುವ ಕೆಲವು ಪೊಲೀಸರ ಪ್ರಾಮಾಣಿಕ ಕೆಲಸದ ಕೊರತೆಯಿಂದ ಸಮಾಜಘಾಟುಕ ಶಕ್ತಿಗಳು ಮೆರೆಯುತ್ತಿವೆ. ಕಾರಣ ಹಲವು ಇರಬಹುದು, ಮೇಲಧಿಕಾರಿಗಳು ಸರಿಯಿಲ್ಲ, ರಾಜಕೀಯ ಹಸ್ತಕ್ಷೇಪ, ರೌಡಿಗಳ ಬೆದರಿಕೆ, ಮಾಫಿಯದ ಕೈವಾಡ ಇಂತಹುದು. ಒಂದುವೇಳೆ ಇದನೆಲ್ಲವನ್ನು ಸಹಿಸುವ ಅಥವಾ ಎದುರಿಸಲು ತಾಕತ್ತು ಇಲ್ಲವೆಂದಾದಲ್ಲಿ ಆ ಹುದ್ದೆಗೆ ಅರ್ಹರಲ್ಲ. ನಿಮ್ಮಿಂದ ಜನರಿಗೆ ತೊಂದರೆ ವಿನಃ ಪ್ರಯೋಜನವಿಲ್ಲ. ತಾನು ಮಾಡುವ ಸಂಪಾದನೆಯಲ್ಲಿ ಅನಾಚಾರ ತುಂಬಿಸಿಕೊಂಡು ಹೆಂಡತಿ ಮಕ್ಕಳಿಗೆ ಪಾಪದ ಗಂಟನ್ನು ಕೊಟ್ಟು ಅವರು ಅನಿಭವಿಸುವಂತೆ ಮಾಡಬೇಡಿ. ನೀವುಗಳು ಮಾಡಿದ ಪಾಪ ನಿಮ್ಮ ಹೆಂಡತಿ ಮಕ್ಕ್ಳು, ತಂದೆ ತಾಯಿಯರು ಅನುಭವಿಸದಂತೆ ನೋಡಿಕೊಳ್ಳಿ. ಅದನ್ನು ಮೀರಿ ಮಾಡಿದಾಗ ನಿಮ್ಮ ಕರ್ಮಗಳಿಗೆ ಅನುಸಾರವಾಗಿ ಶಕ್ತಿಯ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಭಾರತ ಮತ್ತು ಪ್ರಪಂಚದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಮಾನವ ಕುಲಕ್ಕೆ ಮತ್ತು ಸರ್ವ ಜೀವಿಗಳಿಗೆ ಸ್ವಾತಂತ್ರ್ಯ ಇರಲಿ.
✍️ಮಾಧವ. ಕೆ. ಅಂಜಾರು
ಬರಹ ಚೆನ್ನಾಗಿದೆ ಕೊನೆಗೆ ಕಾಡುವ ಪ್ರಶ್ನೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದೇ ,ಮನುಷ್ಯನ ಜೀವನ ಪ್ರಪಾತ ದಲ್ಲಿ ಸಾಗುತ್ತಾ ಇದೆಯೋ, ಅಲ್ಲಾ ಸಿಲುಕಿದ್ದೋ ಅಂತಾ ಕಾಣುತ್ತಾ ಇದೆ, ವ್ಯವಸ್ಥೆ ಯನ್ನು ಸರಿ ಮಾಡುವವರು ಯಾರೂ ಇಲ್ಲ ಹಾಳು ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಾ ಇದೆ ಕಾಲಾಯಾ ತಸ್ಮೈ ನಮಃ
ReplyDeleteಹೌದು ಸರ್ 🙏
ReplyDelete