ಕೈ ಬೀಸಿ ಕರೆದ ಚಂದಿರಮಾಮ,
ಭರತ ಭೂಮಿಯ ಚಂದಿರ ಯಾನ
ಜಗವೇ ಮೆಚ್ಚಿದ ಸುಂದರ ಯಾನ
ದಣಿವರಿಯದ ಇಸ್ರೋ ನಡೆಗೆ
ಮಣಿದುಬಿಟ್ಟನೆ? ಸುಂದರಜಾಣ!
ಅದೆಷ್ಟು ಸುಂದರ ಚಂದಿರನಂಗಳ
ಭರತ ಖಂಡಕೆ ನೀಡಿತು ಮಂಗಳ
ಪ್ರಗ್ಯಾನ್ ಪಾದದ ಪುಟ್ಟ ನಡೆಗೆ
ನಕ್ಕು ನಲಿದಾಡಿದ ನಮ್ಮಯ ಚಂದಿರ
ಮರಿಮಕ್ಕಳ ಚೆಂದಮಾಮ
ಇನ್ನೂ ಹತ್ತಿರ ನಮ್ಮಯ ಮಾಮ
ಅಮಾವಾಸ್ಯೆ ಹುಣ್ಣಿಮೆಯೆನ್ನದೆ
ಕೈ ಬೀಸಿ ಕರೆದ ಚಂದಿರಮಾಮ,
ಭಾರತ ದೇಶಕೆ ತವರೂರಾಯ್ತು
ಭುವಿಯ ನೆಚ್ಚಿನ ಚಂದಮಾಮ
ಇನ್ನು ಭಯವಿಲ್ಲ ನಿನ್ನಲಿ ಮಾಮ
ಭರವಸೆ ನಿನ್ನಲಿ ಬರುವೆ ನಾ ಮಾಮ!
ಹರಸುತ್ತಿರು ಭಾರತಮಣ್ಣಿಗೆ
ಸಿಗುತ್ತಲಿರು ಭಾರತೀಯರ ಕಣ್ಣಿಗೆ
ಇಂದು ಮುಂದು ಎಂದೆಂದೂ
ಕರೆಯೋಲೆಯ ಕೊಡುತ್ತಿರು
ಇಸ್ರೋ ವಿಜ್ಞಾನಿಗಳಿಗೆ!
ಬರುತ್ತಾಲಿರಲಿ ಸುಂದರ ಘಳಿಗೆ
ಕನಸಿನ ಮನೆಗೆ ನಿನ್ನಯ ಕೊಡುಗೆ
ನಮ್ಮೊಂದಿಗಿರಲಿ ನಿನ್ನ ಪ್ರೀತಿಯ ನಗೆ.
✍️ಮಾಧವ. ಕೆ. ಅಂಜಾರು
Comments
Post a Comment