(ಲೇಖನ -92)Self- Defensive Driving, ವಾಹನ ಚಾಲಕರು ಸುರಕ್ಷತೆಯ ಬಗ್ಗೆ ಅತೀ ಹೆಚ್ಚು ಗಮನ ಕೊಡಬೇಕು. ಸುರಕ್ಷಿತ ವಾಹನ ಚಾಲನೆ ಪ್ರತಿಯೊಬ್ಬ ಚಾಲಕನ ಜವಾಬ್ದಾರಿ. ಅದರಲ್ಲೂ ಸ್ವಯಂ -ರಕ್ಷಣೆಯ ಚಾಲನೆ ಇನ್ನಷ್ಟು ಒಳಿತು

 (ಲೇಖನ -92) Self- Defensive Driving, ವಾಹನ ಚಾಲಕರು ಸುರಕ್ಷತೆಯ ಬಗ್ಗೆ ಅತೀ ಹೆಚ್ಚು ಗಮನ ಕೊಡಬೇಕು. ಸುರಕ್ಷಿತ ವಾಹನ ಚಾಲನೆ ಪ್ರತಿಯೊಬ್ಬ ಚಾಲಕನ ಜವಾಬ್ದಾರಿ. ಅದರಲ್ಲೂ ಸ್ವಯಂ -ರಕ್ಷಣೆಯ ಚಾಲನೆ ಇನ್ನಷ್ಟು ಒಳಿತು, ಪ್ರಪಂಚದಲ್ಲಿ ಸರಾಸರಿ 3 ನಿಮಿಷಕ್ಕೊಂದು ಸಾವು ವಾಹನ ಅಪಘಾತದಲ್ಲಿ ನಡೆಯುತ್ತದೆ, ಈ ಅಪಘಾತ ದಲ್ಲಿ ಸಂಪೂರ್ಣ ಅಂಗವಿಕಲರಾಗಿ ಚಡಪಡಿಸುತ್ತಿರುವ ಜೀವಗಳು ಲೆಕ್ಕವಿಲ್ಲದಷ್ಟು. ಒಂದೊಂದು ಅಪಘಾತ ಒಂದೊಂದು ಸಂಸಾರ ನಾಶಪಡಿಸಿದಂತೆ. ಕೈ ಕಾಲು, ಕಣ್ಣು, ಮೆದುಳು, ಅಂಗಾಂಗಗಳ ಚಲವಲನವಿಲ್ಲದೆ ಇರುವ ಅದೆಷ್ಟೋ ಜೀವಗಳು ಆಸ್ಪತ್ರೆಗಳಲ್ಲಿ ಒದ್ದಾಡುತ್ತಿವೆ, ತಂದೆ, ತಾಯಿ, ಮಕ್ಕಳು, ಸಂಬಂಧಗಳಲ್ಲಿ ಅದೆಷ್ಟೋ ಜೀವಗಳು ಕಳೆದುಕೊಂಡ ಸಂಸಾರಗಳು ದಿನಾಲೂ ಕಣ್ಣೀರಿನ ಜೀವನ ತೆಗೆಯುವಂತೆ ಆಗಿರುವ ಘಟನೆಗಳು ಸಾವಿರಾರು. ಅಮ್ಮ ನಾನೀಗ ಬರುತ್ತೇನೆ ಎಂದು ಹೇಳಿ ಹೋದ ಜೀವ ಮತ್ತೆ ಬರಲೇ ಇಲ್ಲ, ಅಪ್ಪ ಹೋಗಬೇಡ ಮಗನೇ ಎಂದು ಹೇಳಿದರೂ ಹೇಳದೇ ಕೇಳದೆ ಹೋದ ಜೀವ ಹೆಣವಾಗಿ ಮನೆಗೆ ಬಂದಾಗ ಆಗುವ ಸಂಧರ್ಭ ಊಹಿಸಲಾಸಧ್ಯ. ಮೋಜು ಮಸ್ತಿಗಾಗಿ, ಅತಿವೇಗದ ಚಾಲನೆಯಿಂದ ನಜ್ಜುಗುಜ್ಜಾಗಿ ದೇಹದ ಭಾಗಗಳನ್ನು ಚೀಲದಲ್ಲಿ ತುಂಬಿಸಿ ಸಾಗಿಸಿದ ಅನೇಕ ಉದಾಹರಣೆಗಳನ್ನು ಆಂಬುಲೆನ್ಸ್ ಓಟಗಾರರಲ್ಲಿ ಕೇಳಬೇಕು. ಬದುಕೆನ್ನುವುದು ಒಂದು ಸಲ ಮಾತ್ರ ಸಿಗುವುದು, ಆ ಜೀವವನ್ನು ಅಪಘಾತದಲ್ಲಿ ಕಳೆದುಕೊಂಡ ನಿದರ್ಶನ ನೀವುಗಳು ನೋಡುತ್ತಲೇ ಇರುತ್ತಿರಿ ನೋಡಿ ಮರೆಯುತ್ತಿರಿ. ದಿನ ಪತ್ರಿಕೆಗಳಲ್ಲಿ ದಿನಾಲು ನೋಡುವ ಪದ ಅಪಘಾತ 1 ರಿಂದ 10 ಸಾವು, ಓದುಗರು ಓದಿ ಬಿಡುತ್ತಾರೆ ಮತ್ತದೇ ಸುದ್ದಿ. ಆದರೆ ವಾಹನ ಚಲಾವಣೆಯಲ್ಲಿ ಆಗಿರುವ ಒಂದು ಸೆಕೆಂಡಿನ ನಿರ್ಲಕ್ಷ ಜೀವವನ್ನು ಬಲಿತೆಗೆದುಕೊಂಡಿರುವ ಸಂಗತಿಗಳು.



      ಬರೇ ನಮ್ಮ ತಪ್ಪಿನಿಂದ ವಾಹನ ಅಪಘಾತ ಸಂಭವಿಸುತ್ತದೆಯೇ ಅಪಘಾತವಾಗುವುದನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲವೆಂದು ಹೇಳಿ ವಾಹನ  ಚಾಲನೆಯಲ್ಲಿ ಅಸಡ್ಡೆ ತೋರಿ ಸಾವನ್ನಪ್ಪಿದ ನಿದರ್ಶನ ಹೇಳತೀರದು. ಸಹಜವಾಗಿ ಚಾಲಕರು ತಮ್ಮ ವಾಹನದ ಹಿಡಿತ ಕಳೆದುಕೊಂಡು ಅಪಘಾತಕ್ಕೆ ಒಳಗಾಗುತ್ತಾರೆ, ಈ ಕಾರಣಕ್ಕಾಗಿ- ವಾಹನ ಚಲಾಯಿಸುವಾಗ ಮಾನಸಿಕ ಒತ್ತಡ  ಮನೆಯ ಚಿಂತೆ, ಅಫೀಸಿನ   ಚಿಂತೆ, ಪೈಪೋಟಿ, ಮೊಬೈಲ್ ಉಪಯೋಗ, ಚಲಾವಣೆ ಮಾಡುವಾಗ ಟೆಕ್ಸ್ಟ್ ಮೆಸೇಜ್ ಗಳು ನೇರವಾಗಿ ಯಮನ ಪಾದಕ್ಕೆ ಸೇರಿಸಿರುವ ಅತೀ ಹೆಚ್ಚಿನ ಘಟನೆಗಳು. ಒಂದು ಟೆಕ್ಸ್ಟ್ ಮೆಸೇಜ್ ನಮ್ಮ ಸಂಪೂರ್ಣ ಜೇವನವನ್ನೇ ಬದಲಾಯಿಸಬಹುದು, ಕಣ್ಣು, ಕೈ, ಕಾಲು ಮೆದುಳು ಜಜ್ಜಿ ಜೀವನಪೂರ್ತಿ ಹಾಸಿಗೆಯಲ್ಲಿ ಒದ್ದಾಡುವಂತೆ ಮಾಡುವ ಸಾಧ್ಯತೆಗಳಿವೆ. ಮಾಹಿತಿಯ ಪ್ರಕಾರ ಕುವೈಟ್ನಂತಹ ಸಣ್ಣ ದೇಶದಲ್ಲಿ ಸರಾಸರಿ ವರುಷಕ್ಕೆ 400 ಜನರ ಸಾವು ವಾಹನ ಅಪಘಾತದಲ್ಲಿ ನಡೆಯುತ್ತದೆ, ಪ್ರಪಂಚದಲ್ಲಿ 3 ನಿಮಿಷಕ್ಕೊಂದರಂತೆ 1 ಸಾವು ವಾಹನ ಅಪಘಾತದಲ್ಲಿ ನಡೆಯುತ್ತಿದೆ. ಇದಕ್ಕೆ ಅಜಾಗರೂಕತೆಯಿಂದ ವಾಹನ ಚಲಾಯಿಸುವ್ವರು ಹೆಚ್ಚಿನ ಕೊಡುಗೆ ಕೊಟ್ಟಿರುತ್ತಾರೆ.

       ಬರೆಯುವವನೇನು ಬಾರಿ ಜಾಗರೂಕತೆಯಿಂದ ವಾಹನ ಚಲಾಯಿಸುವನೇ ಎಂದು ಕೇಳುವವರು ಇರಬಹುದು ಅದೂ ಅವರ ತಪ್ಪಲ್ಲ, ಆದರೆ ರಸ್ತೆಯಲ್ಲಿ ನಾ ಕಂಡ ಅದೆಷ್ಟೋ ವಾಹನ ಅಪಘಾತ ವಾಹನ ಚಲಾಯಿಸಲು ಕೂಡ ಭಯಪಟ್ಟುಕೊಳ್ಳುವ ಸ್ಥಿತಿ ಗೆ ಒಮ್ಮೊಮ್ಮೆ ತಲುಪಿಸುತ್ತದೆ. ನಜ್ಜು ಗುಜ್ಜಾದ ವಾಹನಗಳನ್ನು ಪೋಲಿಸು ಠಾಣೆಗಳಲಿ ನೋಡಬಹುದು. ವಾಹನ ಇರುವವರು ತಮ್ಮ ವಾಹನದ ತಪಾಸಣೆಯನ್ನು ದಿನಾಲೂ ಮಾಡಬೇಕು, ಬ್ರೇಕ್, ನೀರು, ಚಕ್ರ, ಇಂಜಿನ್ ಆಯಿಲ್ ಎಲ್ಲವೂ ಸರಿಯಾಗಿದೆಯಾ ಅನ್ನುವುದನ್ನು ಖಾತರಿ ಮಾಡಿಕೊಳ್ಳಬೇಕು. ಕನ್ನಡಿ, ಇಂಡಿಕೆಟರ್, ಬ್ರೇಕ್ ಲೈಟ್, ರಿವರ್ಸ್ ಲೈಟ್ ಎಲ್ಲವೂ ಸರಿಯಾಗಿ ಇದೆಯಾ ನೋಡಿಕೊಳ್ಳಬೇಕು, ಒಟ್ಟಿನಲ್ಲಿ ವಾಹನ ಚಲಾವಣೆಗೆ ಉತ್ತಮ ಸ್ಥಿತಿಯಲ್ಲಿದೆ ಎಂಬುವುದನ್ನು ಮೊದಲು ತಪ್ಪದೆ ಖಾತರಿ ಮಾಡಿಕೊಳ್ಳಬೇಕು. ವಾಹನವನ್ನು ನಿಗದಿತ ವೇಗದಲ್ಲಿಯೇ ಓಡಿಸಬೇಕು, ಲಘು ವಾಹನ ಮತ್ತು ಘನ ವಾಹನದ ಚಲಾವಣೆಯ ಸಂಪೂರ್ಣ ಮಾಹಿತಿ ಮತ್ತು ಟ್ರೈನಿಂಗ್ ಗಳನ್ನು ಪಡೆದುಕೊಂಡಿರಬೇಕು. ವಾಹನ ಚಲಾವಣೆಯ ಸಮಯದಲ್ಲಿ ಬ್ಲಾಕ್ ಸ್ಪಾಟ್ ಗಳ ಬಗ್ಗೆ ಮಾಹಿತಿ ಇರಬೇಕು. ಘನ ವಾಹನಗಳ ನಡುವೆ ಲಘು ವಾಹನಗಳ   ಚಲಾವಣೆ ಅತೀ ಹೇಚ್ಚಿನ ಅವಘದ ತರಬಹುದು. ಯು ಟರ್ನ್, ರಸ್ತೆ ಬದಲಾವಣೆಯ ಸಮಯದಲ್ಲಿ ಇಂಡಿಕೆಟರ್ ಕಡ್ಡಾಯವಾಗಿ ಹಾಕಲೇ ಬೇಕು, ಹಿಂಭಾಗದಲ್ಲಿ ವಾಹನವಿದ್ದರೂ ಇಲ್ಲದೇ ಇದ್ದರೂ ನಿಮ್ಮ ಸಂಕೇತಗಳಲ್ಲಿ ವ್ಯತ್ಯಾಸ ಬೇಡ. ಅತೀ ಹೆಚ್ಚಿನ ಮ್ಯೂಸಿಕ್ ವಾಹನದಲ್ಲಿ ಇಡಬಾರದು , ಹೆಚ್ಚಿನ ಭಾರವನ್ನು ಹಾಕಬಾರದು. ಎದುರಿನ ವಾಹನಕ್ಕೂ, ಹಿಂದಿನ ವಾಹನಕ್ಕೂ ಹೆಚ್ಚು ಅಂತರ ಕಾಪಾಡಿಕೊಳ್ಳಬೇಕು.

          Speed Lane, slow lane ಸರಿಯಾಗಿ ಪಾಲಿಸಬೇಕು  ನಿಧಾನವಾಗಿ ಚಲಾಯಿಸುವವರು ಸ್ಲೋ ಟ್ರ್ಯಾಕ್ನಲ್ಲಿಯೇ ಹೋಗಬೇಕು, ಒಮ್ಮೆಲೇ ಬ್ರೇಕ್ ಚಲಾವಣೆ ವಾಹನವನ್ನು ರೋಲ್ ಮಾಡುವ ಸಾಧ್ಯತೆ ಹೆಚ್ಚು. ಸರಾಸರಿ 50 kmh ವೇಗಕ್ಕೆ 40 ಮೀಟರ್ ಅಂತರ ಬೇಕು, 100 kmh ವೇಗಕ್ಕೆ 90 ಮೀಟರ್ ಅಂತರ ವಿದ್ದಲ್ಲಿ ಲಘು ವಾಹನ ಹತೋಟಿಗೆ ತರಬಹುದು. ವಾಹನದ ಭಾರ ಮತ್ತು ವೇಗಕ್ಕೆ ಅನುಸಾರವಾಗಿ ನಮ್ಮ ವಾಹನವನ್ನು ಹತೋಟಿಗೆ ತರುವ ಅಭ್ಯಾಸ ಮಾಡಿಕೊಳ್ಬೇಕು. ಹೆಡ್ ಫೋನ್ ವಾಹನ ಚಲಾವಣೆಯ ಸಮಯದಲ್ಲಿ ಹಾಕಬಾರದು. ಫೋನಿನ ಬಳಕೆ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಸಾಧ್ಯತೆ ಅತೀ ಹೆಚ್ಚು, ದೂರದ ಪಯಣದಲ್ಲಿ ಒಬ್ಬರೇ ಡ್ರೈವ್ ಮಾಡುವಾಗ ಸರಿಯಾದ ವಿಶ್ರಾಂತಿ ಮಾಡಿಯೇ ವಾಹನ ಚಲಾಯಿಸಬೇಕು. ಹುಚ್ಚರಂತೆ ವಾಹನ ಚಲಾಯಿಸುವವರ ಬಗ್ಗೆ ಅತೀ ಹೆಚ್ಚು ಗಮನವಿರಲಿ , ಯಾವುದೇ ಬೆರಳುಗಳನ್ನು ವಾಹನ ಚಲಾಯಿಸುವ ವ್ಯಕ್ತಿ ತೋರಿಸಲು ಹೋಗಬೇಡಿ. ಬೇಡವಾದ ಪದಗಳನ್ನು ಉಪಯೋಗಿಸಬೇಡಿ. ಸಣ್ಣ ಪುಟ್ಟ ಅಪಘಾತಗಳನ್ನು ಪಾಠವಾಗಿ ಪಡೆದುಕೊಳ್ಳಿ, ವಿನಾಕಾರಣ ಚರ್ಚೆಗೆ ಅವಕಾಶಗಳನ್ನು ಕೊಡಬೇಡಿ.

   ನಿಮ್ಮ ಸುಖಮಯ ಪ್ರಯಾಣನಕ್ಕೆ ನಿಮ್ಮದೇ ರಕ್ಷೆ ಇರಲಿ, ಅನ್ಯರ ತಪ್ಪುಗಳಿಂದಾಗುವ ಅಪಘಾತದಿಂದ ತಪ್ಪಿಸಿಕೊಳ್ಳುವ ಬಗ್ಗೆ ಗಮನವಿರಲಿ. ಈ ಸಂದೇಶ ಉಪಯುಕ್ತವೆಂದಾದಲ್ಲಿ ನಿಮ್ಮ ಗೆಳೆಯರಿಗೂ ತಿಳಿಸಿ.ಧನ್ಯವಾದಗಳು.

         ✍️ಮಾಧವ. ಕೆ ಅಂಜಾರು 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ