ಹೇಗಿರಬೇಕೆಂದೂ ತಿಳಿಯುತ್ತಿಲ್ಲ
ನಗಬೇಕೆಂದರೂ ನಗಲಾಗುತ್ತಿಲ್ಲ
ಅಳಬೇಕೆಂದರೂ ಅಳಲಾಗುತ್ತಿಲ್ಲ
ಜಗದೊಳು ನಡೆಯುವ
ನಾಟಕವ ಕಾಣುತ್ತಿರೆ
ಹೇಳಬೇಕೆಂದರೂ ಹೇಳಲಾಗುತ್ತಿಲ್ಲ,
ಸಹಿಸಬೇಕೆಂದರೂ ಸಹಿಸಲಾಗುತ್ತಿಲ್ಲ
ಅಳಿಸಬೇಕೆಂದರೂ ಅಳಿಸಲಾಗುತ್ತಿಲ್ಲ
ಜೀವನದೊಳು ಬರುವ
ಪಾಪಿಗಳ ಕಾಣುತಿರೆ
ದಮನಿಸಬೇಕೆಂದರೂ ದಮನಿಸಲಾಗುತ್ತಿಲ್ಲ,
ಉಳಿಸಬೇಕೆಂದರೂ ಉಳಿಸಲಾಗುತ್ತಿಲ್ಲ
ಕಲಿಸಬೇಕೆಂದರೂ ಕಲಿಸಲಾಗುತ್ತಿಲ್ಲ
ಜಗದೊಡೆಯ ನಿನ್ನ
ಆಟವ ನೋಡುತಿರೆ
ಹೇಗಿರಬೇಕೆಂದೂ ತಿಳಿಯುತ್ತಿಲ್ಲ!
✍️ಮಾಧವ. ಕೆ. ಅಂಜಾರು
Comments
Post a Comment