ಪರದೇಶದ ತುತ್ತು *************** ನಾವಂದುಕೊಂಡಂತೆ ಪ್ರಪಂಚವಿಲ್ಲ, ಜೀವನ ಬೇವು ಬೆಲ್ಲ ಇವೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಬಹಳ ಸುಲಭವಾಗಿದ್ದರೂ ಕೂಡ ಈ ಮಾತು ಅದೆಷ್ಟು ಒಳಾರ್ಥವನ್ನು ಹೊಂದಿರುತ್ತದೆ. ಜೀವನ ಸಾಗಿಸಲು ಹುಟ್ಟಿದಂದಿನಿಂದ ಪ್ರಯತ್ನ ಪ್ರಯತ್ನ ಪ್ರಯತ್ನ, ಕೆಲವರು ಹುಟ್ಟುವಾಗಲೇ ಬಡತನ ಹೊಂದಿದ್ದರೆ ಕೆಲವರು ಹುಟ್ಟಿದಾಗಲೇ ಐಶ್ವರ್ಯವನ್ನು ಹೊಂದಿರುತ್ತಾರೆ. ಐಶ್ವರ್ಯ ಇದ್ದರೂ ಇರದಿದ್ದರೂ ದುಡಿಮೆ ಅನ್ನೋದು ಪ್ರತಿಯೊಂದು ಮಾನವನ ಕರ್ತವ್ಯ. ದುಡ್ಡಿರುವ ಮನುಷ್ಯ ದುಡಿಯದಿದ್ದರೆ ಅವನ ಗೌರವವನ್ನು ಅವನೇ ಕಳೆದುಕೊಳ್ಳುತ್ತಾನೆ, ಬಡತನದಲ್ಲಿರುವ ಮನುಷ್ಯ ದುಡಿಯದಿದ್ದರೆ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಜಾಸ್ತಿಯಾಗಿರುತ್ತದೆ. ಕೆಲವೊಂದು ವಿಷಯಗಳು ಸತತ ಪ್ರಯತ್ನ ಗುರಿಯೊಂದಿಗೆ ನಡೆದು ಬಿಟ್ಟರೆ, ಇನ್ನು ಕೆಲವು ವಿಷಯಗಳು ನಮಗರಿವಿಲ್ಲದಂತೆಯೇ ಬಂದುಬಿಡುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನವನ್ನು ಮಾಡುತ್ತಿದ್ದರೆ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಶಸ್ಸು ಸಿಗದಿದ್ದರೂ ಜೀವನ ಮುಗಿಸುವಲ್ಲಿ ಸಶಕ್ತರಾಗುತ್ತೇವೆ. ಪರದೇಶ ಪಯಣ ದುಡಿಮೆಗಾಗಿ ಮಾಡಿದ್ದರೆ, ಇಷ್ಟವಿದ್ದು ಇಷ್ಟವಿಲ್ಲದೆ ನಡೆದ ಪಯಣ ವಾಗಿರಬಹುದು. ಹೊರ ದೇಶವೆಂದರೆ ಅನ್ನಕೊಡುವ ದೇಶವಾದರೂ ಗಳಿಸುವ ಅನ್ನಕ್ಕಾಗಿ ಪರಿತಪಿಸುವ ಪರಿ ಅದೆಷ್ಟು ಕಷ್ಟ ನೋವುಗಳನ್ನು ಹೊಂದಿರುತ್ತದೆ. ನೋಡುವವರ ಕಣ್ಣಿಗ...