ಕೀಳು ದೃಷ್ಟಿ
ನೋವಾಗುತಿದೆನಗೆ ಮೂರ್ಖ ಜನರ ಕೀಳು ದೃಷ್ಟಿಯ ಕಂಡು
ಸಾಲು ಸಾಲಾಗಿ ಕುಕ್ಕುತಿಹರೆನ್ನ ಮೌನ ಮಾತನು ಕಂಡು
ಹೇಳಲಾಗದೆ ಚಡಪಡಿಸುತ್ತಿರುವೆ ಸೋಲುಣ್ಣುವ ಆಟದಲಿ
ಕಿವುಡನಂತೆ ನಟಿಸುವರು ನೋವ ಹೇಳುವ ಸಮಯದಲಿ
ಜೋರು ಸ್ವರವ ಬೀರುವರು ನನ್ನ ವ್ಯಥೆಯ ಕಥೆಯಲಿ
ಒಂದು ಚೂರು ಕರುಣೆಯ ತೋರರು ಮೇಲಕ್ಕೆತ್ತಲು ಸುಳಿಯಲಿ
ಅಸುರರಾಗಿ ಬಂದು ದಮನಿಸುವರು ಮತ್ತೊಬ್ಬರ
ಸ್ಥಿರವಾಗಿ ಇರುವರು ಬಾಳ ಕೆಣಕಲು ಇನ್ನೊಬ್ಬರ
ಸಹಿಸಲಾರೆ ಕಂತ್ರಿ ಜನರ ಮಂತ್ರ ಕುತಂತ್ರಗಳ
ತಂತ್ರದಲಿ ಜಯಿಸುವೆ ವಿಧ ವಿಧದ ಕರಾಮತ್ತುಗಳ
-ಅಂಜಾರು ಮಾಧವ ನಾಯ್ಕ್
Comments
Post a Comment