ನನ್ನ ನಾಲ್ಕೇ ನಾಲ್ಕು ಮಾತು ...

ಇದ್ದರೇನಂತೆ ಐಶ್ವರ್ಯ  ನಿನಗೆ
ಕದ್ದು ತಿನ್ನುವ ಚಟವಿದ್ದರೆ.......!
ತಿದ್ದಿ ಹೇಳಲು ಹೊರಟ ನನಗೇ
ಬುದ್ದಿಯಿಲ್ಲ ಎನ್ನುವ ಹಟವಿದ್ದರೆ

ಸದ್ದು ಮಾಡಿ ಒದ್ದು ಬದುಕುವ ನೀನು,
ಹೊದ್ದು  ಸತ್ತರೂ ಸಿಗದು ಸಂಪತ್ತು
ಜಿಪುಣನಾಗಿ ಅನ್ನತಿನ್ನಲೂ ಎಣಿಸುವವನು
ಕಣ್ಮುಚ್ಚುವಾಗ ಚಿನ್ನವೂ ಮಣ್ಣಾಗಿ ಹೋದೀತು

ಉಸಿರಿರೋ ತನಕ ನಿಟ್ಟುಸಿರು ಬಿಡುವೆ
ಯಾರು ಬಲ್ಲರು ನಿನ್ನ ಕೊನೆಯುಸಿರು
ಮುಗ್ದ ಜನರ ಎದೆಯ ತುಳಿದು ಬದುಕುವೆ
ಏನು ಪ್ರಯೋಜನ ಸಿಂಗಾರ ಮಾಡಿದರೂ ?

 ಸುಖ-ಸಂತೋಷ ಪ್ರೀತಿ ಸಹನೆ  ಇದ್ದಲ್ಲಿ
ಹಾಯಾಗಿ ಕಳೆವೆ  ಪರಸ್ಪರ ಅರಿತಾಗ
ಸುಖವಿರದು ಅಹಂಕಾರದ ಮನವಿದ್ದಲ್ಲಿ
ಅದಕೆ ಎಂದೆಂದೂ ನಗುತಾ ಜೀವಿಸು ಸರಾಗ ...

                    - ಅಂಜಾರು ಮಾಧವ ನಾಯ್ಕ್





Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ