ಮಾರುತಿ

ಮಾರುತಿಯ ಬೇಡಿಕೊಂಡೆ ನನಗೆ ಕೀರುತಿಯ ನೀಡೆಂದು
ನನ್ನಾಸೆಗೆ  ಓಗೊಟ್ಟು ಮನೆಗಿಂದು ಮಾರುತಿಯು  ಬಂದಿಹನು

ಹೂ ತೋರಣದಿ ಸಿಂಗರಿಸಿದೆ ಆರತಿಯ ಬೆಳಗಿದೆ
ಕೂಗಿಹೇಳಿದೆ ತಂದೆತಾಯಿಗೆ ಬನ್ನಿ ನೋಡಿ ಎಂದು

ಸಂತಸದಿ ಅನುಜರೆಂದರು ಜಯವಾಗಲಿ  ನಿನಗೆಂದೂ
ಸುಖವಾಗಿರಲಿ ಪಯಣ ಹರುಷದಿಂ ಮುಂದೂ

ಉಲ್ಲಾಸವು ನನಗೆ ಮಾರುತಿಯು ಜೊತೆಗಿರಲು
ಮರೆಯಲಾರೆ ಎಂದಿಗೂ ತಲೆಬಾಗಿ ಸ್ಮರಿಸಲು

ಪೂಜಿಸುವೆನು ಸದಾ ಮಾರುತಿಯ ಪ್ರೀತಿಯಲಿ
ಕಾಣುತಿಹೆ ಅವನ ಮನೆಗೆ ಬಂದ 'ಮಾರುತಿ'ಯಲ್ಲಿ

                       - ಅಂಜಾರು ಮಾಧವ ನಾಯ್ಕ್ 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ