ಖಾಕಿ ಬಟ್ಟೆಯ ಜೀಪು ಬಂದಾಗ

ಕೋಟಿ ಕೋಟಿಯ ಸೂಟು ಬೂಟುಗಳ ಹಾಕಿದ್ದರೂ
ಕಿತ್ತೊಗೆದು ಬಿಸಾಕುವೆ ಅವಸರದ ಮಲ ಬಂದಾಗ

ಸಾವಿರ ಬಾರಿ ದೇಶ ವಿದೇಶವ ವಿಮಾನದಲಿ ಸುತ್ತಿದ್ದರೂ
ಉಡುಗೆ ಒದ್ದೆ  ಮಾಡಿಕೊಳ್ಳುವೆ  ಪೈಲಟ್ ಕೈ ಕೊಟ್ಟಾಗ

ಅಪ್ಪಿ ತಪ್ಪಿ ಕೊಂದು ಬದುಕಿ ಜೀವಿಸುತ್ತಿದ್ದರೂ
ದಂಗಾಗಿ ಬಿಡುವೆ ನೀ ಕಿಂಡಿ ಬಾಗಿಲ ಸದ್ದು ಬಂದಾಗ

ಹಲವು ಬಾರಿ ಮೋಸ ವಂಚನೆ ಮಾಡಿ ಜಯಗಳಿಸಿದರೂ
ವಿಚಲಿತನಾಗುವೆ ತರ ತರದ ಕಷ್ಟ ಬಂದಾಗ

ಗೊತ್ತಿದ್ದೂ ಕದ್ದು ತಿಂದು ಸಾಚನಂತೆ ತಿರುಗಿದರೂ
ಬೆವೆರಿಳಿಸುವೆ ಖಾಕಿ ಬಟ್ಟೆಯ ಜೀಪು ಬಂದಾಗ

                         - ಅಂಜಾರು ಮಾಧವ ನಾಯ್ಕ್


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ