ಮನೆಯೊಡತಿಯ ಅಡುಗೆ


ಹಸಿದ ಹೊಟ್ಟೆಗೆ ಬಿಸಿ ಬಿಸಿ ದೋಸೆಯ ತಿನ್ನಲು
ಕೊಟ್ಟಳು ತಟ್ಟೆಯಲಿ ಸಕ್ಕರೆ ತುಪ್ಪವ ಸವರಿ

ಬಡಿಯುತ್ತಿರಲು ಮೂಗಿಗೆ ಗಮ ಗಮ ಪರಿಮಳವು
ಸೂಸುತಿರಲು ಬಾಯಲ್ಲಿ ನೀರನು , ಅವಳೆಂದಳು.....

ತಿನ್ನಿರಿ ಪ್ರೀತಿಯಲಿ ನಾ ಮಾಡಿದ ಅಡುಗೆಯ
ಅನ್ನದಿರಿ ಏನನ್ನು ಹುಳಿ ಕಾರ ಉಪ್ಪನು ನೋಡಿ...!!

ಮೊದಮೊದಲು ನಾ ತಿಂದೆ , ಕೊಟ್ಟ ಅಡುಗೆಯ ಸಂತಸದಲಿ
ಬರಬರುತ್ತಾ ನಿಪುಣಳಾದಳು ಬಹುವಿಧದ ಅಡುಗೆಯಲಿ....!!

ನನಗಾಯಿತು ಸಂತೋಷವು ಹೊಟ್ಟೆ ತುಂಬಿದಾಗಲೆಲ್ಲ..!!
ದಿನ ದಿನ ಆಸ್ವಾದಿಸುವೆ ಅಡುಗೆ ಬಗೆ ಬಗೆ

ಮುಂದುವರಿಯಲಿ ನನ್ನವಳ ದಿನಚರಿಯ ಅಡುಗೆಯು
ನಾ ತರುವೆ ಚೆಂದ ಚೆಂದದ ಉಡುಗೆ -ಉಡುಗೊರೆಯು

                                                      - ಅಂಜಾರು ಮಾಧವ ನಾಯ್ಕ್

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ