ನಾ ಮರಾಠಿ
ಚಿನ್ನದಂತಿರುವೆ ಭೂಮಿತಾಯಿಗೆ ನಮಿಸಿ
ಗರ್ವದಿಂದ ಹೇಳುವೆ ನಮ್ಮವರ ಇತಿಹಾಸವನು
ಶಿವಾಜಿ ಮಹಾರಾಜನು ನಮ್ಮವರ ವಂಶಿಕನು
ಗದ್ದುಗೆಯ ಅಮ್ಮ , ಜ್ಯೋತಿಭಾ ,ಅಂಬಾ -
ತುಳಜಾ ಭವಾನಿ ನಮ್ಮವರ ಕುಲದೇವರು
ಬೈರವ, ವರ್ತೆ ಪಂಜುರ್ಲಿ ನಮ್ಮನು ಕಾಯ್ವರು
ಪೂಜಿಪೆವು ದೈವ ದೇವರುಗಳ ಹಲನಾಮದಿಂದ
ತಾಯ ಕರುಣೆಯು ನಮಗಿಹುದು ಎಂದೂ
ಒಂದಾಗಿ ಬಾಳೋಣ ಪ್ರತಿದಿನವೂ ಮುಂದೂ
ಕೆಣಕದಿರು ಮರಾಠಿಗನ ಮನಸನ್ನು ನೀನು
ಕೆಣಕಿದರೆ ಮಣ್ಣು ಮುಕ್ಕಿಸುವ ವೀರನು ನಾನು
ಎಲ್ಲಾ ಮತ ಬಂಧಗಳ ಸಮ ದೃಷ್ಟಿಯಲಿ ನೋಡುವೆ
ಮೇಲು ಕೀಳೆಂಬ ಭಾವನೆಯ ಸರಿದೆದ್ದು ನಿಲುವೆ
ನಾ ಮರಾಠಿ.. ನಾ ಮರಾಠಿ.. ನಾ ಮರಾಠಿ..
ಜೈ ಭವಾನಿ..! ಜೈ ಭವಾನಿ...! ಜೈ ಭವಾನಿ...!
- 'ನಾ ಮರಾಠಿ' ಅಂಜಾರು ಮಾಧವ ನಾಯ್ಕ್
Comments
Post a Comment