ಹೊಸ ವರುಷ ಹೊಸ ಹರುಷ

ಕಳೆದುಕೊಂಡೆ ಜೀವನದ ಅಮೂಲ್ಯ ದಿನಗಳ
ತಿಳಿದೆ  ಕನಸು ನನಸಾಗಲು ಪರಿಶ್ರಮದ ಪುಟಗಳ

ಬರುತ್ತಿರಲಿ ಉಲ್ಲಾಸದ ಹನಿಮಳೆಯ ಸಿಂಚನವು
ಚಿಗುರಲಿ ಹೊಸ ಕನಸಿನ ಸುಗಂಧ ಬಳ್ಳಿ ಹೂವು

ಸುತ್ತಿಬೇಳೆಯಲಿ ಹರುಷದ ಹೂದೋಟ ಜೀವನದಿ
ನಕ್ಕು ನಲಿಯಲಿ ಹೂ ಮೊಗ್ಗುಗಳು ಹಸಿರಿನಂಗಳದಿ

ಸ್ವಾಗತಿಸುವೆ ಹರುಷದ ವರುಷವ ಉತ್ಸುಕದಲಿ
ನೀಡಲಿ ನಮ್ಮ ಬಾಳಿಗೆ ಸುಖ ನೆಮ್ಮದಿ  ಅಮಿತ

ಕೈಮುಗಿದು ಬೇಡುವೆ ಸೃಷ್ಟಿಕರ್ತನ ಪ್ರತಿನಿಮಿಷ
ನಮಿಸುವೆ ಶಿರಬಾಗಿ ತಂದೆ ತಾಯಿಯ ಚರಣಕೆ  

                           - ಅಂಜಾರು ಮಾಧವ ನಾಯ್ಕ್

                         
                               






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ