ಬಿಳಿಯೂ ಬೆಳ್ಳಿಯೂ
ಕನ್ನಡಿಯ ನೋಡುತ್ತಿದ್ದಂತೆ ಕಂಡೆನೊಂದು ಬಿಳಿಕೂದಲು
ಹೊಳೆಯುತಿತ್ತು ಬೆಳ್ಳಿಯಂತೆ ನನ್ನ ಪ್ರಾಯ ಹೇಳಲು
ಆರಂಭದಲಿ ಕತ್ತರಿಯನು ಎತ್ತಿಕೊಂಡೆ , ಬುಡದಲ್ಲೇ ಕಿತ್ತು ಬಿಸಾಕಿದೆ
ರಕ್ತಬೀಜಾಸುರನ ಸಂತತಿಯಂತೆ ಕಂಡಿತು ಮತ್ತೊಂದು !
ಬಾಚಣಿಗೆಯ ಕಿಸೆಯಲ್ಲಿ ಹಾಕಿ ನಡೆಯುತ್ತಿದ್ದೆ ದಿನಾಲೂ
ಕಾಣದಿರಲೆಂದು ಬಿಳಿಕೂದಲು ಸುಲಭದಲ್ಲಿ ಯಾರಿಗೂ
ಗೆಳೆಯನೆಂದನು ಏನಪ್ಪಾ ಪ್ರಾಯವಾಯಿತಾ ನಿನಗೆ
ನಾನೆಂದೆ ತಲೆಯ ಸವರುತ್ತಾ ಇಲ್ಲಪ್ಪಾ ಇದು ಎರಡನೆಯದು
ದಿನಕಳೆದಂತೆ ಗೊತ್ತಾಯಿತು ನನಗೆ ಬೆಳ್ಳಿಕೂದಲಿನ ಚೆಲ್ಲಾಟವು
ಗೋಜಿಗೆ ಹೋಗದೆ ಒಪ್ಪಿಕೊಂಡೆ ಬಿಳಿಯೂ ಬೆಳ್ಳಿಯೂ ಒಂದೇ ಎಂದು ..!!
Comments
Post a Comment