ಬೇಗ ಬಾ...............!!!!!!!

ಬೆಳ್ಳಿ ಮೋಡದ ನಡುವೆ ಸೂಸುವ ಹೊಂಗಿರಣದಂತೆ
ಬೀರುತ್ತಿದೆ ನಿನ್ನ ನೋಟ ನನ್ನ ಮನವ ಸೆಳೆಯಲು

ಭಾಸವಾಗುತ್ತಿದೆ ನೀ ಎನ್ನ ಕೈ ಸ್ಪರ್ಶಿಸಲು
ತಂಪುಗಾಳಿಯ ಆನಂದವ ಸವಿಯುತ್ತಿರುವಂತೆ

ಜನುಮದ ಜೋಡಿ  ನಾನಾಗಿ ನಿನ್ನ ಪ್ರತಿ ಉಸಿರಲಿ
ಮೆಲ್ಲನೆ ನಿನ್ನ ಸೇರುವೆ, ಮರೆಸಲಿ ಪ್ರತೀ  ನೋವ

ಒಪ್ಪಿಕೋ ನನ್ನ ಪ್ರೀತಿಯ, ಹಿಡಿದಪ್ಪಿಕೋ ನಿರಂತರ
ಹೂವಂತೆ  ನೋಡಿ ಮುದ್ದು ಮಾಡುವೆ ಚೆನ್ನ

ಪ್ರೀತಿಯ ಹೃದಯವನು ಮರೆಯಬೇಡ ಪ್ರಿಯೆ  
ಬೇಗ ಬಾ , ನಾ ನಿನಗಾಗಿ ಕಾದಿರುವ  ಪ್ರೇಮಿ

                           - ಅಂಜಾರು ಮಾಧವ ನಾಯ್ಕ್

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ