ಜಯಗಳಿಸುವೆ ನೀನು.....

ನೀಲಿ ಆಕಾಶದಲಿ ನಕ್ಷತ್ರವು ಮಿನುಗುತ್ತಿರುವಂತೆ
ಹೊಳೆಯಲಿ ನಿನ್ನ ಜೀವನ ಸುಖದಾರಿಯ ಪಯಣದಲಿ

ಮುಂದೆ ಸಾಗುತ್ತಿರಲಿ ಬಂಡಿಯು ಉಬ್ಬು ತಗ್ಗುಗಳೆನ್ನದೆ
ಮುನ್ನುಗ್ಗು ಧೈರ್ಯದಲಿ ಗುರಿ ಮುಟ್ಟುವ ತನಕ

ಮರೆಯದಿರು ಸಾಗಿದ ದಾರಿಯ ವಿಚಿತ್ರ ಸತ್ಯಾಸತ್ಯಗಳ
ಮರೆತರೆ ಫಲವಿಲ್ಲದಂತಾಗುವುದು ನೀ ಗಳಿಸಿದ ಸುಖ ಸಂಪತ್ತು

ಒಂದೇ ಆಗಿರಲಿ ನಿನ್ನ ಧ್ಯೇಯ ಒಳಿತಿಗಾಗಿ  ಬದುಕಲು
ಒಟ್ಟಾಗಿ ಬರುವುದು ನಿನ್ನೆದುರಿಗೆ ಪ್ರೀತಿಯೆಂಬ ಮಾಲೆಯು

ಸ್ವಾಗತಿಸುತಿರು ಎಂದಿಗೂ ಬಡವ ಬಲ್ಲಿದನ ಅಂತರವಿರದೆ
 ಜೀವನದ ಪ್ರತಿ ಆಟದಲೂ  ಜಯಗಳಿಸುವೆ ನೀನು

                                                 - ಅಂಜಾರು ಮಾಧವ ನಾಯ್ಕ್

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ