Posts

Showing posts from October, 2024

ಮೈ ಪರಚುತ್ತಲೇ ಇರಲಿ

ಹೇಳುವವರು ಹೇಳುತ್ತಿರಲಿ  ನಿನ್ನ ಬೆನ್ನ ಹಿಂದೆ  ನಿನ್ನ ಕಣ್ಣ ಮುಂದೆ  ಹೇಳುತ್ತಾ ಹೇಳುತ್ತಾ  ಬೇಸತ್ತು ಹೋಗುವವರೆಗೂ  ಹೇಳುತ್ತಲೇ ಇರಲಿ,  ದೂರುವವರು ದೂರುತ್ತಿರಲಿ  ನಿನ್ನ ಬೆನ್ನ ಹಿಂದ  ನಿನ್ನ ಕಣ್ಣ ಮುಂದೆ  ದೂರು ಹೇಳುತ್ತಾ  ಬೇಸತ್ತು ಹೋಗುವವರೆಗೂ  ದೂರುತ್ತಾ ಇರಲಿ, ನಿನ್ನತನವ ನಿನ್ನಲಿರಲಿ  ಹೃದಯದೊಳು ಸತ್ಯವಿರಲಿ  ಹೇಳುವವರೂ,ದೂರುವವರೂ  ಇಂದಲ್ಲ ನಾಳೆ ನಿನನ್ನ ನೋಡಿ  ಏನೂ ಮಾಡಲಾಗದೆ  ಮೈ ಪರಚುತ್ತಲೇ ಇರಲಿ           ✍️ಮಾಧವ. ಕೆ. ಅಂಜಾರು.

ಗೆಲ್ಲಬೇಕೆಂದಾದರೂ

ಗೆಲ್ಲಬೇಕೆಂಬ ಹಠವಿರಲಿ  ಯಾವಾಗಲೂ  ಗೆಲ್ಲುತ್ತಲೇ ಇರುವೆನೆಂಬ  ಕನಸು ಕಾಣದೆ ಇರಲಿ,  ಸೋಲುತ್ತಲೇ ಇರುವೆನೆಂಬ  ಭಯ ದೂರವಿರಲಿ  ಒಮ್ಮೆಯಾದರೂ ಗೆಲುವೆ  ಎಂಬ ಕನಸು ಕಾಣುತ್ತಿರಲಿ,  ಗೆಲ್ಲಬೇಕೆಂದಾದರೂ  ಸೋಲಬೇಕೆಂದಾದರೂ  ಭಗವಂತನ ನೆನೆಯದ  ದಿನವೇ ಇಲ್ಲದಿರಲಿ,           ✍️ಮಾಧವ. ಕೆ. ಅಂಜಾರು.

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

Image
( ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ, ಜಿಲ್ಲಾವಾರು ಅಥವಾ ಪ್ರಾಂತ್ಯಕ್ಕ್ಕೆ ಅನುಸಾರವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳ ಹಿಂದೆ ಕಾಣದ ಕೈಗಳ ಹಗಲಿರುಳಿನ ಪರಿಶ್ರಮ ಇದ್ದೆ ಇರುತ್ತದೆ. ಅದರಲ್ಲೂ ನಿರ್ದಿಷ್ಟ ಪಂಗಡದ ಅಥವಾ ಜಾತಿ ಮತ್ತು ಧರ್ಮದ ಬಗ್ಗೆ ನಡೆಯುವ ಸಮಾವೇಶಗಳಲ್ಲಿ ಅದೆಷ್ಟು ಜಾಗರೂಕರಾಗಿದ್ದರೂ ಅಲ್ಲೊಂದು ಇಲ್ಲೊಂದು ತಿಳಿದು, ತಿಳಿಯದ ತಪ್ಪುಗಳು ಆಗುವುದು ಸಹಜವಾಗಿ ನಡೆಯುತ್ತದೆ. ತಿಳಿದು ನಡೆಯುವ ಮತ್ತು ಪೂರ್ವ ಯೋಜಿತ ತಪ್ಪುಗಳು ಕೂಡ ನಡೆಯಲು ಸಾಧ್ಯತೆ ಕೂಡ ಅಲ್ಲಗಳೆಯುವಂತೆ ಇಲ್ಲ. ಸಾಮಾನ್ಯವಾಗಿ ದೊಡ್ಡ ಸಮಾವೇಶದ ಪೂರ್ವ ತಯಾರಿ ಸರಿ ಸುಮಾರು 7 ರಿಂದ 8 ತಿಂಗಳು ಎಲ್ಲಾ ಸದಸ್ಯರು ತಮ್ಮ ಪರಿಶ್ರಮವನ್ನು ಹಾಕಿಕೊಳ್ಳುತ್ತಾ ಬರುತ್ತಾರೆ. ಸಮಾವೇಶ ಸಮೀಪಗೊಳ್ಳುತ ಆಯೋಜಕರ ಎದೆ ಬಡಿತ ಜಾಸ್ತಿ ಯಾಗುತ್ತ ಕಡಿಮೆಯಾಗುತ್ತಲು ಇರುತ್ತದೆ.     ವೇದಿಕೆ, ಆಸನ, ದೀಪಾಲಂಕಾರ, ವಾಹನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಊಟ ಉಪಚಾರ ವ್ಯವಸ್ಥೆ, ವಾಹನ ನಿಲುಗಡೆಯ ವ್ಯವಸ್ಥೆ, ಮುಖ್ಯ ಅಥಿತಿ ಮತ್ತು ಸಮಾರಂಭದ ಪ್ರತೀ ಆಹ್ವಾನಿತ ವ್ಯಕ್ತಗಳನ್ನು ಗೌರವಿಸುವ ಮತ್ತು ಅವರನ್ನು ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮ ದ ಎಲ್ಲಾ ತಯಾರಿ ಇಂತಹ ಅನೇಕ ಜವಾಬ್ದಾರಿಗಳು ಸದಸ್ಯರು ಮಾಡುತ್ತಲೆ ಇರುತ್ತಾರೆ.          ಸಮಾಜಕ್ಕೆ ಒಳಿತನ್ನು ಮಾಡುವ ಯಾವುದೇ ಕೆಲಸ ಕಾರ್ಯವನ್ನು ಬ