(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ
✍️Madhav. K. Anjar ನನ್ನ ಹೃದಯ ಹಗುರಗೊಳಿಸಲಷ್ಟೇ..... ನೋವನ್ನು ಮರೆಸಿ ನನ್ನನ್ನು ನಾನು ಉಳಿಸುತ್ತ ಮಗುವಿನ ಅಗಲುವಿಕೆಯ ಸಾಂತ್ವನ ಬಿಟ್ಟು ಮತ್ತೇನು ಸಾಧ್ಯ ಭಗವಂತ 🙏🏿ಕ್ಷಮಿಸು. (ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ! ನೀವೆಲ್ಲರೂ ಕ್ಷೇಮವಾಗಿರಿ, ದೇವರು ನನ್ನನ್ನು ಬಹಳವಾಗಿ ಇಷ್ಟಪಟ್ಟ ನನಗೆ ಆತನ ಪಾದ ಸೇರಲು ಅವಕಾಶ ಕೊಡಿ.... ನಾನೆಲ್ಲಿದ್ದರೂ ನಿಮ್ಮೊಳಗಿರುವೆ, ಬೇಸರ ಬೇಡ, ನನ್ನ ಅಪ್ಪ ಅಮ್ಮನ ಹೃದಯದಲ್ಲಿ ಹಾಯಾಗಿರುವೆ, ಅವರು ತಂದು ಕೊಟ್ಟ ಪ್ರತೀ ಉಡುಗೊರೆ, ಎಲ್ಲವೂ ನನಗೆ ತುಂಬಾ ಖುಷಿ ಕೊಟ್ಟಿದೆ, ಆದರೇನು ಮಾಡಲಿ ದೇವರು ಸುಮಾರು ತಿಂಗಳ ಹಿಂದೆಯೇ ಬರಹೇಳುತಿದ್ದ, ಬರಲಾರೆ ಎಂದು ಹೇಳಿದರೂ ಕೇಳಲಿಲ್ಲ ಕರೆದುಬಿಟ್ಟ. ಆ ಪುಟ್ಟ ಹೆಜ್ಜೆಗಳನ್ನೀಡುತ್ತ, ಅಂಗಳದಲ್ಲಿ ಅಣ್ಣ ತಮ್ಮ ತಂಗಿಯ ಜೊತೆಯಾಗಿ ಕಣ್ಣಮುಚ್ಚಾಲೆ, ಆಡಿದ ನೆನಪುಗಳು, ಅಪ್ಪ ಅಮ್ಮ ಗೆಳೆಯ ಗೆಳತಿಯರೊಂದಿಗೆ ಆಟವಾಡಿ ಸುಸ್ತಾಗಿ ರಾತ್ರಿ ಕನಸಲ್ಲೂ ನನ್ನ ಪ್ರೀತಿಯ ಎಲ್ಲರನ್ನು ನೋಡುತಿದ್ದೆ, ನಿಮ್ಮೆಲರ ನಗು ಆಶೀರ್ವಾದ ಚಿಕ್ಕ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿಯಿತು. ನಾನೇನು ತೊಂದರೆ ಮಾಡಿದ್ದರೂ ಕ್ಷಮಿಸಿ...... ನನಗೆ ಕೊನೆಯ ಕ್ಷಣದಲ್ಲಿ ನೋವನ್ನು ತಡೆಯು...