(ಲೇಖನ -26)ಮದುವೆಯ ನಂತರ -ಗಂಡಾಂತರ
ಮದುವೆಯಾದ ನಂತರ ಪಾಲಿಸಬೇಕಾದ ಮುಖ್ಯ ವಿಷಯಗಳು ಮದುವೆ ಎಂದರೆ ಏಕಾಂತ ಜೀವನದಿಂದ ಪ್ರಬುದ್ಧತೆಗೆ ಬಂದು ಜವಾಬ್ದಾರಿಯೊಂದಿಗೆ ಒಂದು ಹೆಣ್ಣನ್ನು- ಗಂಡ ನ್ನು ವರಿಸಿಕೊಂಡು ಸಂಸಾರ ನಡೆಸಲು ಅಣಿಯಾಗುವುದು, ಅವಿವಾಹಿತ ಅಥವಾ ಅವಿವಾಹಿತೆಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ಮನಸುಗಳನ್ನು , ಹೃದಯಗಳನ್ನು ಏರಿಳಿತ ಬರದಂತೆ ನೋಡಿಕೊಂಡು ಉಸಿರಿರುವ ತನಕ ಜೊತೆಯಾಗಿ ಬಾಳುವ ರೀತಿ ರಿವಾಜು. ಇಂದಿನ ದಿನಗಳಲ್ಲಿ ಮದುವೆ ಅನ್ನೋದು ಪೈಪೋಟಿ ನಡೆಸಿ ಆಚರಿಸುವ ಕಾರ್ಯಕ್ರಮವಾಗಿ ಮಾರ್ಪಡುತ್ತಿದೆ. ಮದುವೆಯ ನಿಜವಾದ ಅರ್ಥಗಳನ್ನೇ ಅರಿಯದೆ ಕೇವಲ ಮೋಜಿಗಾಗಿ ಮದುವೆ ಎಂಬ ಅರ್ಥದಲ್ಲಿ ಅದ್ದೂರಿಯಾಗಿ ಮದುವೆಗಳು ನಡೆದು ಕೇವಲ ಒಂದು ವರುಷ - ಎರಡು ವರುಷಗಳ ಒಳಗೆ ಮತ್ತು ಅದಕ್ಕಿಂತಲೂ ಕಡಿಮೆ ದಿನಗಳಲ್ಲಿ ವಿಚ್ಛೇದನೆ ಹಾದಿ ಹಿಡಿದು ಒಂಟಿಜೀವನ ಅಥವಾ ಮರುಮದುವೆಯ ಕಡೆ ಹೋಗಿ ಸಂಪೂರ್ಣ ಜೀವನವನ್ನು ನಾಶಪಡಿಸಿಕೊಳ್ಳುತ್ತಾರೆ. ಮದುವೆಯ ಮುನ್ನ ಗಂಡು ಮತ್ತು ಹೆಣ್ಣು ಹಲವು ಆಸೆ, ಕನಸುಗಳನ್ನು ಕಾಣುತ್ತಾ ಮದುವೆಯ ನಂತರ ಸಂಗಾತಿಯ ಗುಣಗಳನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗಿ, ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳದೆ ಒಬ್ಬೊರಿಗೊಬ್ಬರು ಸಂಶಯದ ವಾತಾವರಣ ಸೃಷ್ಟಿಸಿಕೊಂಡು, ಸಪ್ತಪದಿ ಅನ್ನುವ ಪದದ ಅರ್ಥವನ್ನೇ ತಿಳಿಯದೆ ಹೆಣ್ಣೊಂದು ಬೇಗನೆ ತವರು ಮನೆಗೆ ಹೋಗಿ ತನ್ನ ಗ...