ವೃತ್ತಿಯಾಗಿತ್ತು

ಮೋಸ ಮಾಡುವುದೇ 
ಅವನ ವೃತ್ತಿಯಾಗಿತ್ತು 
ಅದಕ್ಕೆ ಮೋಸಮಾಡುತ್ತಲೇ 
ಅವನಿಗೆ ತೃಪ್ತಿಯಾಗುತಿತ್ತು,

ಕಾಸು ಮಾಡುವುದೇ 
ಅವನ ಗುರಿಯಾಗಿತ್ತು 
ಅದಕ್ಕೆ ಸುಳ್ಳು ಹೇಳುತ್ತಲೇ 
ಅವನಿಗೆ ದಿನಹೋಗುತಿತ್ತು,

ವೇಷ ಬದಲಿಸುವುದೇ 
ಅವನ ಹವ್ಯಾಸವಾಗಿತ್ತು 
ಅದಕ್ಕೆ ಬಣ್ಣ ಬಳಿಯುತ್ತಲೇ 
ಅವನ ಬಣ್ಣ ಬಯಲಾಗುತಿತ್ತು.
      ✍🏻ಮಾಧವ ಕೆ ಅಂಜಾರು 

Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ