"ಸಿಂಚನ"ಳಿಗೆ ಬೇಕಿದೆ ಸಹಾಯ ಹಸ್ತ -
ಮೊನ್ನೆಯಷ್ಟೇ ತಿಳಿದುಬಂದ, ಬಂಟ್ವಾಳ ಕ್ಷೇತ್ರದಲ್ಲಿನ ಹೃದಯ ಕರಗುವ ಸುದ್ದಿ!
ಹೆಸರು ಸಿಂಚನ, ಅವರ ಅಪ್ಪ ಅಮ್ಮನ ಮನೆ ನೋಡಿಯೇ ಕಣ್ಣು ಮತ್ತೊಮ್ಮೆ ನೋಡಲು ಒಪ್ಪುತ್ತಿಲ್ಲ.
ಹಾವು ಕಡಿತದಿಂದ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿ, 9 ವರ್ಷ ಪ್ರಾಯದ ಸಿಂಚನಳಿಗೆ ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವಿರಾ?
ಮನೆ ಪಕ್ಕದ ಚೇತನಾ ಎಂಬವರ ಮಾಹಿತಿಯ ಪ್ರಕಾರ, ಸರಸ್ವತಿ ಎಂಬ ಹೆಸರಿನ ತಾಯಿಯ ಮಗಳು ಸಿಂಚನ, ಮನೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದೇ ಜೀವನಕ್ಕೂ ಕಷ್ಟ ಪಡುತ್ತಿರುವ ಕಾಲದಲ್ಲಿ, ಹಾವು ಕಡಿತಕ್ಕೆ ಒಳಗಾದ ಮಗಳಿಗೆ ಚಿಕಿತ್ಸೆ ಕೊಡಿಸಲು ನಾವು ನೀವೆಲ್ಲರೂ ಜೊತೆ ಸೇರಿ ಸಹಾಯ ಮಾಡೋಣ ಅಲ್ಲವೇ,
ಸಹೃದಯಿಗಳಾದ ತಾವೆಲ್ಲರೂ ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಕನಿಷ್ಟ 100 ರೂಪಾಯಿಯಾದರು ಸಹಾಯದ ರೂಪದಲ್ಲಿ ನೀಡುವಿರೆಂಬ ಭರವಸೆಯೊಂದಿಗೆ.
- ✍️ಮಾಧವ. ಕೆ. ಅಂಜಾರು.
Comments
Post a Comment