(ಲೇಖನ -35)ಭಾರತದ ಅನುರಾಗ ಗುಂಪು ಹೇಗೆ ಕೆಲಸ ಮಾಡುತ್ತದೆ? ಉದ್ದೇಶ ಏನು? ಯಾಕೆ ಬೇಕು? ಅನ್ಯ ಗುಂಪಿನಂತೆಯೇ ಇದು ಕೂಡ ಅನಿಸುತ್ತದೆಯೇ?
ಭಾರತದ ಅನುರಾಗ ಗುಂಪು ಹೇಗೆ ಕೆಲಸ ಮಾಡುತ್ತದೆ? ಉದ್ದೇಶ ಏನು? ಯಾಕೆ ಬೇಕು? ಅನ್ಯ ಗುಂಪಿನಂತೆಯೇ ಇದು ಕೂಡ ಅನಿಸುತಿದೆಯೇ ?
ಅಲ್ಲ, ಭಾರತದ ಅನುರಾಗ ನಿರ್ದಿಷ್ಟ ಜನರನ್ನು ಇಟ್ಟುಕೊಂಡು ನಡೆಯುವ ಜಾಲಬಂಧವಲ್ಲ, ಹಳ್ಳಿ, ಪಟ್ಟಣ, ರಾಜ್ಯ,ದೇಶ, ವಿದೇಶದಲ್ಲಿರುವ ಮೌಲ್ಯಯುತ ಜನರನ್ನು ಸಂಪರ್ಕಿಸಿ ಇನ್ನಷ್ಟು ಜವಾಬ್ದಾರಿಯುತ ಮತ್ತು ಶಾಂತಿಯುತ ಹಾಗೆಯೇ ಸುತ್ತಮುತ್ತಲಲ್ಲಿ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಲು ಶ್ರಮಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತದೆ.
ಅದು ಹೇಗೆ? ಪ್ರಶ್ನೆಯೇ? ಹೌದು ಇದು ಸಹಜವಾಗಿ ಮೂಡುತ್ತದೆ, ನನ್ನ ಚಿಂತನೆಯ ಪ್ರಕಾರ ಸಮಾಜ ಸೇವೆ ಎಂದರೆ, ಹಣದ ಸಹಾಯ ಮಾತ್ರವಲ್ಲ ಅಥವಾ ನಿರ್ದಿಷ್ಟ ಜನರೊಂದಿಗೆ ನಡೆಸುವ ಸಂಘ, ಸಂಘಟನೆಗಳಿಗೆ ಸೀಮಿತವಾಗಿಲ್ಲ ಬದಲಾಗಿ ನಿಮ್ಮ ಸುತ್ತಲಿನ ಸಮಾಜದಲ್ಲಿ ಯಾವುದೇ ಪ್ರಚಾರ, ಆಸೆ, ಅಧಿಕಾರದ ದಾಹಗಳಿಲ್ಲದೆ ತನ್ನನ್ನು ತಾನು ಸಮಾಜ ಸೇವೆ ಅಥವಾ ಉತ್ತಮ ಚಿಂತನೆಯನ್ನು ಮಾಡುತ್ತ ತನ್ನಿಂದ ಆಗುವ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಜನರನ್ನು ಗುರುತಿಸಿ ಎಲ್ಲಿದ್ದರೂ ಕೈ ಹಿಡಿದು ನಡೆಸುವ ಜಾಲಬಂಧ.
ಇದರಲ್ಲಿ ಇನ್ನಷ್ಟು ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು, ಅದಕ್ಕೆಲ್ಲ ಉತ್ತರವೂ ಇದೆ, ಈ ಸಂದೇಶ ವನ್ನು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರು ಮಾಡಿ ತೋರಿಸಿ, ನಿಮ್ಮ ಬೆಂಬಲ ನಮಗಿರಲಿ, ಸ್ವಯಂ ಸೇವಕರಾಗಬೇಕಿದ್ದರೆ ಭಾರತದ ಅನುರಾಗ ಗುಂಪಿಗೆ ಕೈ ಜೋಡಿಸಿ, ನಾವೆಲ್ಲರೂ ಸೇರಿ ಜೊತೆಯಲಿ ಇದುವರೆಗೂ ಇರದ ಮೌಲ್ಯಯುತ ಜನರನ್ನು ಒಂದುಗೂಡಿಸಿ ಭಾರತ ಮತ್ತು ವಿದೇಶದಲ್ಲೂ ಭಾರತೀಯತೆಯನ್ನು ಸಾರೋಣ.
ಕಥೆಗಾರ, ಬರಹಗಾರ, ನಾಟಕಕಾರ, ಸಮಾಜ ಸೇವಕ,ವೈದ್ಯಕೀಯ, ಪ್ರಾಧ್ಯಾಪಕ, ಪ್ರಾದ್ಯಪಾಕಿಯರು, ಸಂಘಟನಾ ಚತುರರು, ಭಾರತೀಯತೆಯ ಕನಸು ಹೊಂದಿರುವ ವಿದ್ಯಾರ್ಥಿಗಳು, ಕಲೆ, ಕಾನೂನು, ಸತ್ಯ, ನ್ಯಾಯ ನೀತಿಯುಳ್ಳ ಜನರನ್ನು ಒಗ್ಗೂಡಿಸುವ ಕೆಲಸಕ್ಕೆ ಕೈ ಜೋಡಿಸೋಣ..... ಭಾರತವೆಂಬ ಮಣ್ಣಿಗೆ ಇನ್ನಷ್ಟು ಬಲ ತುಂಬೋಣ.
ನಿಮ್ಮ ಪ್ರೀತಿಯ
ಮಾಧವ ನಾಯ್ಕ್ ಅಂಜಾರು
Comments
Post a Comment