ಕೃಪೆಯಿರಲಿ ಈಶ್ವರ (ಕವನ 3)

ಬೋರ್ಘರೆವ ಸಾಗರದೊಳು
ಸಿಲುಕಿದ ನೌಕೆಯು
ನಾವಿಕನ ಹತೋಟಿಯೊಳು
ಸಿಗಲಾರದೆ
ಮುಳುಗೇಳುತಿದೆ
ಆರ್ಭಟಿಸುವ ಸೆರೆಗಳಲಿ,

ಪ್ರಶಾಂತತೆಯ ಪಯಣ
ಬಯಸಿದ ನಾವಿಕನಿಗೆ 
ಬಿರುಗಾಳಿಯ ಸೆಡ್ಡು
ಬಿಡಲಾರದೆ
ರಬಸವ ಹೆಚ್ಚಿಸುತಲಿದೆ
ದಡ ಸೇರಿಸದಿರಲು,

ಹರಸಾಹಸ ನಡುನೀರಲಿ
ವೇಗವಿಲ್ಲದೆ ಮುನ್ನುಗ್ಗಲಿ,
ನಿದಾನವಾಗಿಹ ಪಯಣಕೆ
ಕೃಪೆಯಿರಲಿ ಈಶ್ವರ 
ದಡ ಸೇರದಿರದು
ನಿನ್ನ ಪವಾಡದಲಿ,
        - ಮಾಧವ. ಕೆ. ಅಂಜಾರು.
























Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ