(ಲೇಖನ -14)ಸೃಷ್ಟಿ ಎಂದರೆ ಹಾಗೆ... ವಿಚಿತ್ರ ಅನಿಸಬಹುದು.

 ಸೃಷ್ಟಿ ಎಂದರೆ ಹಾಗೆ... ವಿಚಿತ್ರ ಅನಿಸಬಹುದು...

ಜಗತ್ತು ಸೃಷ್ಟಿಯಾದಮೇಲೆ, ಜೀವಿಗಳು ಸೃಷ್ಟಿಯಾಗಿ, ಪ್ರಾಣಿ, ಪಕ್ಷಿ, ಮನುಜರು ಹುಟ್ಟಿ ಕಾಲಚಕ್ರಕ್ಕೆ ತಕ್ಕಂತೆ ಸಾಯುತ್ತಿರುವುದು ಸಹಜ. ಪ್ರಾಣಿ, ಪಕ್ಷಿ ತನ್ನ ಹೊಟ್ಟೆ ತುಂಬಿಸಲು ಅನ್ಯ ಜೀವಿಗಳನ್ನು ತಿಂದು ಬದುಕಿದರೆ, ಮನುಜರು ಕೂಡ ಪ್ರಕೃತಿ ಮತ್ತು ವನ್ಯ ಜೀವಿಗಳನ್ನು ಅವಲಂಬಿಸಿ ಬೇಕಾದನ್ನು ಮಾಡುವ ಸಾಮರ್ಥ್ಯ ಮಾಡಿಕೊಂಡಿದ್ದಾನೆ. ಇದೊಂದು ಪ್ರಕೃತಿಯ ನಿಯಮವೆಂದು ಮಾನವರಾದ ನಾವು ಹೇಳಿಕೊಳ್ಳುತ್ತೇವೆ.




           ಮಾನವರು ವಿವಿಧ ಹೆಚ್ಚಾಗಿ ತನ್ನ ಬುದ್ದಿವಂತಿಕೆಯನ್ನು ಪ್ರಕೃತಿಯನ್ನು ನಾಶಮಾಡಲು ಉಪಯೋಗಿಸಿ, ಎಲ್ಲಾ ವಿಚಾರದಲ್ಲೂ ತನ್ನ ಮೇಲುಗೈ ಸಾಧಿಸಲು ಪ್ರಯತ್ನ ಮಾಡುತ್ತ ಇದ್ದಾನೆ ಮತ್ತು ಮಾನವನಿಗೆ ಮಾನವರೇ ಒಳಿತಾಗಿಯೂ, ಕೆಡುಕಾಗಿಯೂ ಹುಟ್ಟಿಕೊಳ್ಳುತಿದ್ದಾನೆ. ಹುಟ್ಟಿ ಬಂದ ಪ್ರತಿಯೊಂದು ಜೀವಿ ಸಾಯುತ್ತದೆ, ಅದರಲ್ಲಿ ಮಾನವನೂ ಸಾಯುತ್ತಾನೆ ಎಂಬ ಪರಿವೇ ಇಲ್ಲದೆ ಪ್ರಪಂಚದಲ್ಲಿ ಎಗ್ಗಿಲ್ಲದೇ ಮನ ತೋಚಿದಂತೆ ಜೀವಿಸುವ ಅಭ್ಯಾಸ ಮಾಡಿಕೊಂಡಿದ್ದಾನೆ.

         ನನಗಿಂತ ಬೇರೆ ಯಾರು ದೊಡ್ಡವರಿಲ್ಲ, ನಾನೊಬ್ಬನೇ ಸತ್ಯವಂತ, ನಾನು ಏನು ಬೇಕಾದರೂ ಮಾಡಬಲ್ಲೆ, ನನ್ನಲ್ಲಿ ಅಧಿಕಾರವಿದೆ, ನನ್ನಲ್ಲಿ ಪ್ರಪಂಚದ ದೊಡ್ಡ ವ್ಯಕ್ತಿಗಳ ಪರಿಚಯವಿದೆ, ಅವನೇನು ಮಹಾ, ಅವನೇನು ಮಾಡಬಲ್ಲ, ಅವನೊಬ್ಬ ಅವಿವೇಕಿ, ಅವನು ಹಾಗೆ ಹೀಗೆ ಎಂಬ ಮಾತಿನೊಂದಿಗೆ ತನ್ನ ನಿಜವಾದ ಬಣ್ಣವನ್ನು ಆಗಾಗ ತೋರಿಸುತ್ತಾನೆ. ಎಲ್ಲಿ ಮನುಜನೊಬ್ಬ ಮನುಜನಾಗಿರುವುದಿಲ್ಲವೋ ಅಲ್ಲಿ ಇಂತಹ ಚಟುವಟಿಕೆ ಮಾತುಗಳು ಕಲ್ಮಶವುಳ್ಳ ಮನುಜನ ಬಾಯಲ್ಲಿ ಹೋರಡುತ್ತಲೇ ಇರುತ್ತದೆ.

        ಎಲ್ಲಾ ವಿಷಯದಲ್ಲಿ ಅನ್ಯರನ್ನೇ ಬೊಟ್ಟು ಮಾಡಿ ಮಾತಾಡುವ ಕೆಲವು ಜನರು, ತನ್ನಿಂದ ಮತ್ತವರಿಗೇನು ಸಹಾಯ ಅನ್ನೋದನ್ನು ಮರೆತುಬಿಟ್ಟಿರುತ್ತಾನೆ. ಒಳಿತಿಗಾಗಿ ಕೈ ಜೋಡಿಸದ ಜನರು ಕೆಡುಕಿಗಾಗಿ ಖಂಡಿತವಾಗಿಯೂ ಕೈ ಜೋಡಿಸುವವರು ಹೆಚ್ಚಿನವರಾಗಿರುತ್ತಾರೆ. ಇಂದಿನ ದಿನಗಳಲ್ಲಿ ಸತ್ಯವಂತರು, ಬುದ್ದಿವಂತರು, ಪ್ರಾಮಾಣಿಕರು, ಸಜ್ಜನರನ್ನು ಬೆರಳೆಣಿಕೆಯಷ್ಟು ಕಾಣಬಹುದು ಇದಕ್ಕೆ ಕಾರಣ, ಸಮಾಜದಲ್ಲಿ ಬೆಳೆಯುತ್ತಿರುವ ಅನಾಚಾರ, ಸ್ವಾರ್ಥ, ಅತಿಯಾಸೆ, ಅಹಂಕಾರ, ಮತ್ಸರ, ವಿಕೃತಿ, ಮುಂತಾದವುಗಳು.

       ಪ್ರಪಂಚವನ್ನು ಸರಿಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ, ನಮಗ್ಯಾಕೆ ಉಸಾಬರಿ ಅನ್ನುವ ಜನರ ಸಂಖ್ಯೆ ಜಾಸ್ತಿ ಆಗಿಬಿಟ್ಟಿದೆ, ಅವನ ಮನೆಯನ್ನೇ ನೋಡೋಕೆ ಆಗೋದಿಲ್ಲ ಇನ್ನು ಅನ್ಯರಿಗೆ ಏನು ಹೇಳುವುದು ಅನ್ನುವ ಮಾತನ್ನು ಹೇಳುವ ಜನರೂ ಇದ್ದಾರೆ. ಬುದ್ದಿವಂತನೆಂದು ಹೇಳಿಕೊಳ್ಳುವ ಮನುಜ ನಿಜವಾಗಲೂ ಬುದ್ದಿವಂತನನಲ್ಲ, ನನ್ನಲ್ಲೂ ತಪ್ಪುಗಳಿವೆ ಇನ್ನು ಮುಂದೆ ಪ್ಪು ಮಾಡಬಾರದು ಎನ್ನುವವ ಮನುಜ, ಮತ್ತೊಬ್ಬರ ಕಷ್ಟ ಸುಖದಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಛೆಯುಳ್ಳವ ಮನುಜ, ತಾನು ಮಾಡಿದುದರಲ್ಲಿ ಅನ್ಯರಿಗೂ ಅಲ್ಪ ಇರಲಿ ಹೇಳುವವನು ಮನುಜ, ನನ್ನೊಂದಿಗೆ ಅವನಿಗೂ ಒಳಿತಾಗಲಿ ನನ್ನಂತೆ ಅವರು ಎನ್ನುವವನು ಮನುಜ.

     ಎಲ್ಲಾ ಜಾತಿ, ಧರ್ಮ, ಮತ ಪಂತಗಳನ್ನು ಬದಿಗೊತ್ತಿ ಶಾಂತಿ ನೆಮ್ಮದಿಯನ್ನು ಸೃಷ್ಟಿಸಲು ಪ್ರಯತ್ನಿಸುವವನು ನಿಜವಾದ ಮನುಜ. ಬದುಕಿರುವಷ್ಟು ದಿನ ಅನ್ಯರಿಗೆ ಕೇಡು ಬಯಸದೆ ಬದುಕುವವನು ಮನುಜ

       ✍️ಬರಹ : ಮಾಧವ ನಾಯ್ಕ್ ಅಂಜಾರು.

     













          





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ