(ಲೇಖನ -17)ಜನನಾಯಕಿ ಎಂದರೆ ಹೀಗಿರಬೇಕು

 ಜನನಾಯಕಿ ಎಂದರೆ ಹೀಗಿರಬೇಕು!

ಜನನಾಯಕಿ ಎಂದರೆ "ಗೀತಾಂಜಲಿ ಎಂ. ಸುವರ್ಣ" ಕಟಪಾಡಿ ಇವರಂತಿರಬೇಕು . ಹೌದು, ಜನರ ಸೇವೆ ಎಂದರೆ ಸುಲಭದ ಮಾತಲ್ಲ, ರಾಜಕೀಯ ಜೀವನವೆಂದರೂ ಸುಲಭದ ಮಾತಲ್ಲ, ರಾತ್ರಿ, ಮುಂಜಾನೆ, ಸಂಜೆಯ ಹೊತ್ತು ಎಂಬ ನಿಗದಿತವಾಗಿರದೆ ನಿರಂತರ ಪ್ರರಿಶ್ರಮ, ಪ್ರತಿಕ್ರಿಯೆ, ಸ್ಪಂದನೆ, ಬೇಡಿಕೆ, ಮತ್ತು ವಿರಾಮವಿಲ್ಲದೆ ನಡೆಯುವ ಯಂತ್ರದಂತೆ.  ಊರಿನ, ಪರವೂರಿನ, ದೇಶ, ವಿದೇಶದಿಂದ ಬರುವ ಕರೆ, ವಿವಿಧ ತರದ ವಿನಂತಿ ಪತ್ರ , ಸಮಸ್ಯೆಗಳು, ಸಮಾಜದ ಪ್ರತೀ ಜನರ ಬೈಗುಳ, ಹೊಗಳಿಕೆ ಎಲ್ಲವನ್ನೂ ಸಹಿಸಿಕೊಂಡು ನಡೆಯುವ ಜೀವನ. ಒಂದು ದೃಷ್ಟಿಯಲ್ಲಿ ರಾಜಕೀಯಕ್ಕೆ ಪ್ರೆವೇಶ ಮಾಡುವುದು ಇಷ್ಟವಿದ್ದೇನಲ್ಲ ದೇವರುಗಳು ಜನರ ಸೇವೆಗಾಗಿ ಕಳುಹಿಸುವ ಜನರೆಂದು ಹೇಳಬಹುದು.



     ನಮ್ಮಂತಯೇ ಅವರಿಗೂ, ಮರಿ ಮಕ್ಕಳು, ಸಂಸಾರ, ಅನ್ನೋದು ಇರುತ್ತದೆ, ಅದರಲ್ಲೂ ಅದ್ಯಾವ ಸಮಯದಲ್ಲಿ ತನ್ನ ಹತ್ತಿರದವರಿಗಾಗಿ ಸಮಯ ಕಳೆಯುತ್ತಾರೋ ಗೊತ್ತಾಗದು. ಎಲ್ಲವನ್ನು ತ್ಯಾಗ ಮಾಡಿ ಬದುಕುವ ಶೈಲಿ ಸಾಮಾನ್ಯ ಜನರಿಗೆ ತಿಳಿಯದು. ಒಂದು ಕರೆಗೆ ಅಥವಾ ಬೇಡಿಕೆಗೆ ಸ್ಪಂದಿಸದೆ ಇದ್ದರೆ ಸಾಮಾಜಿಕ ಜಾಲ ತಾಣ, ಟಿವಿ ಮಾಧ್ಯಮ, ಪತ್ರಿಕೋದ್ಯಮ ಇದರಲ್ಲಿ ಎಲ್ಲದರಲ್ಲೂ ಅವರ ಮಾನ ಹರಾಜು, ಅವಿವೇಕರು, ಜವಾಬ್ದಾರಿ ಇಲ್ಲದವರು ಅನ್ನುವ ಜನಗಳಿಗೇನು ಗೊತ್ತು ಅವರೂ ನಮ್ಮಂತಯೇ ಮನುಜರೆಂದು? ಅದೆಲ್ಲ ಒಂದು ವರ್ಗದ ಚಿಂತನೆಯಾದರೆ, ಮತ್ತೊಂದು ವರ್ಗದವರು ಕರುಣೆ, ಸಹಾಯ ಮನೋಭಾವನೆ ಹೊಂದುತ್ತ ಸಾಧ್ಯವಾದಲ್ಲಿ ಸಹಕರಿಸಿ, ರಾಜಕಾರಣಿಗಳನ್ನು ದೂರದೆ ಮಾಡುವ ಸತ್ಕಾರ್ಯಕ್ಕೆ ಪ್ರೋತ್ಸಾಹ ಕೊಡುತ್ತಾರೆ.

    ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ, ರಾಜಕೀಯಕ್ಕೆ ಇಳಿದರೆ ಮಾತ್ರ ರಾಜಕೀಯದ ನಿಜವಾದ ಅರಿವು ತಿಳಿಯುವುದು,  ಸ್ವಚ್ಛ ರಾಜಕಾರಣಕ್ಕೆ ಗೀತಾಂಜಲಿ ಎಂ ಸುವರ್ಣ ರವರು ಒಂದು ಉದಾಹರಣೆ ಎಂದು ಹೇಳುವುದಕ್ಕೆ ಇಂದು ನನ್ನಲ್ಲಿ ನಡೆದ ವಿಷಯ ಎಂದು ಹೇಳಲು ಇಚ್ಚಿಸುತ್ತೇನೆ.  ನನ್ನ ಪ್ರೀತಿಯ ಗೆಳೆಯನೊಬ್ಬ  ಹೆಸರು "  ಸಂತೋಷ " ಹೆಸರಿನಂತೆ ಮನಸು ಮಾತು, ಇವತ್ತಿನ ಕಾಲದಲ್ಲಿ ಸಾಮಾಜಿಕ ಜಾಲ ತಾಣ ಕೆಲವರು ಒಳಿತಿಗಾಗಿ ಉಪಯೋಗಿಸಿದರೆ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಾರೆ.  ನಿಮಗೆಲ್ಲರಿಗೂ ತಿಳಿದಂತೆ ಒಂದು ಮುಗ್ದ ಮಗುವಿಗೆ ವಿಷಜಂತು ಕಚ್ಚಿ ತುಂಬಾ ಹೀನಾಯಸ್ಥಿತಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಇರುವುದು ತಿಳಿದಕ್ಷಣಾ ಗೆಳೆಯನಾದವನು ಆ ಮಾಹಿತಿಯನ್ನು ನನಗೆ ಕಳುಹಿಸಿ ತಮ್ಮಿಂದ ಆಗುವ ಸಹಾಯ ಮಾಡೋಣ, ನೀನೂ ಕೂಡ ಕೈ ಜೋಡಿಸು ಎಂದು ಹೇಳಿದ ಕ್ಷಣಕ್ಕೆ ನನಗೂ ವಿಷಯ ತಿಳಿದು ಬಹಳಸ್ಟು ಬೇಸರ, ಕರುಣೆಯೂ ತೋರಿತು, ನಮ್ಮಿಂದ ಆಗುವ ಸಹಾಯ ನಾನು ಖಂಡಿತ ಮಾಡುತ್ತೇನೆ ಎಂದು ಹೇಳಿ ಬಿಟ್ಟೆ. ಹಾಗೆಯೇ ಮಾತನಾಡುತ್ತ ಗೀತಾಂಜಲಿ ಎಂ. ಸುವರ್ಣ ಇವರಿಗೆ ಒಂದು ಕರೆ ಮಾಡು ಎಂದು ಹೇಳಿ, ಮೊಬೈಲ್ ಸಂಖ್ಯೆ ಕೊಟ್ಟು ಬಿಟ್ಟ ನನ್ನ ಸ್ನೇಹಿತ.

      ಕೆಲಸದಲ್ಲಿ ಮಗನವಾಗಿದ್ದ ನಾನು ಸಂಜೆ ಕರೆಮಾಡುತ್ತೇನೆ ಎಂದು ಹೇಳಿ, ಮಾತಿನಂತೆ ಸುಮಾರು  8.30 ರಾತ್ರಿ ಯ ಹೊತ್ತಿಗೆ ಗೀತಾಂಜಲಿ ಎಂ. ಸುವರ್ಣ ರಿಗೆ ಕರೆ ಮಾಡಿದಾಗ ಕರೆ ಬೇರೊಂದು ಕರೆಯಲ್ಲಿ ನಿರತವಾಗಿತ್ತು. ನಾನು ಕರೆಯನ್ನು ಕಡಿತ ಮಾಡಿ ನನ್ನ ಕೆಲಸದಲ್ಲಿ ಮಗ್ನವಾದೆ. ಈ ಸಮಸ್ಯೆಯ ವಿಚಾರ ಅವರಿಗೂ ತಿಳಿಯಲಿ ಅನ್ನುವ ಉದ್ದೇಶದಿಂದ ಬಂದ ಮಾಹಿತಿಯನ್ನು ಅವರ ವಾಟ್ಸಪ್ಪ್ ಗೆ ಕಳುಹಿಸಿದೆ.  ಸುಮಾರು ಅರ್ಧ ಗಂಟೆ ಕಳೆದ ಕ್ಷಣ ನನ್ನ ಮೊಬೈಲ್ ಗೆ ಕರೆ ಮಾಡಿದ ಗೀತಾಂಜಲಿಯವರು, ಯಾರು ಮಗ ಅನ್ನುವ ಮಾತನ್ನು ಕೇಳಿದರು, ಅವರು ಎಲ್ಲಿ ಏನೂ ತಿಳಿಯದ ನಾನು, ಬಂಟ್ವಾಳ ಪ್ರದೇಶದ ವಿಷಯದ ಬಗ್ಗೆ ಹೇಳಿಯು ಆಯ್ತು, ಕನ್ನಡದಲ್ಲಿ ಮಾತಾಡಿದ ನನ್ನಲ್ಲಿ ನಿಮ್ಮ ಊರು ಯಾವುದು ಕೇಳಿಬಿಟ್ಟರು, ನನ್ನ ಊರು ಹಿರಿಯಡ್ಕ ಅಂಜಾರು ಅಂದ ಕೂಡಲೇ, ತುಳು ಬರ್ಪುಂಡು ಅತೇ ಅಂದರು,  ನಂತರ ತುಳುವಿನಲ್ಲಿ ಮಾತು ಅರಂಭಿಸಿ, ವಿಷಯವನ್ನು ಇನ್ನಷ್ಟು ವಿವರಿಸಿ ,  ಬಡ ಕುಟುಂಬಕ್ಕೆ ನಿಮ್ಮಿಂದ, ಅಥವಾ ಅದಕ್ಕೆ ಬೇಕಾಗುವ ಸಹಾಯವನ್ನು ಮಾಡುವಿರಾ ಎಂದು ಕೇಳಿದಾಕ್ಷಣ,  ನನಗೆ ಈವಾಗಲೇ ವಿಷಯ ತಿಳಿಯಿತು ಅದಕ್ಕೆ ಬೇಕಾಗುವ ವ್ಯವಸ್ಥೆಯನ್ನು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರಲ್ಲಿ ಮಾಡಲು ಶ್ರಮಿಸುತ್ತೇನೆ ಎಂಬ ಮಾತನ್ನು ಹೇಳಿದರು. ನನಗೇನೋ ಖುಷಿ, ಯಾರು, ಏನು, ಎಲ್ಲಿಂದ ಒಂದೂ ತಿಳಿಯದ ನನಲ್ಲಿ ಇಂತಹ ಮಾತು, ಭರವಸೆ ನನಗೆ ಬಹಳ ಇಷ್ಟವಾಯಿತು. ಕರೆ ಸ್ವೀಕರಿಸಿದ ವಿಷಯವನ್ನು ನನ್ನ ಗೆಳೆಯನಿಗೆ ಹೇಳಿಬಿಟ್ಟೆ.  ಅವರೂ ಸಂತೋಷಪಟ್ಟರು, ಪಾಪ ನಮ್ಮಿಂದ ಆಗುವ ಸಹಾಯ ಮಾಡೋಣ ತುಂಬಾ ಬೇಸರವುಗುತ್ತದೆ ಎಂದು ಮರುಗಿದರು.

       ತದನಂತರ, ಹೇ ಗೆಳೆಯ ನಿನ್ನ TPI (The Passion of India )


ಕನಸಲ್ಲಿ ಒಂದು ಅವರ ಬಗ್ಗೆ ನುಡಿಮುತ್ತು ಹಾಕು ಅನ್ನುವ ವಿನಂತಿ ಮಾಡಿಬಿಟ್ಟನು. ಅಯ್ಯೋ ದೇವರೇ ನಾನೇನು ಅಂತಹ ದೊಡ್ಡ ಕೆಲ್ಸ ಮಾಡಿದೆ ಅಂತ ನೆನೆಸಿಕೊಂಡು, ಗೆಳೆಯನ ಮಾತನ್ನು ಪಾಲಿಸುತ್ತೇನೆ ಎಂದು ಯೋಚಿಸುತ್ತ, ಈ ವಿಷಯದಲ್ಲಿ ಲೇಖನ ಬರೆದರೆ ಏನು ಅನ್ನುವ ಅಭಿಪ್ರಾಯ, ಯೋಚನೆಗಳು ತೊಡಗಿ, ಇಷ್ಟಪಟ್ಟು ಬರೆದೆ. ಯಾಕೆಂದರೆ! 

    ನಾನ್ಯಾರೆಂದು, ಅವರಿಗೆ ತಿಳಿಯದು, ಅವರು ಯಾರೆಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ತಿಳಿದುಕೊಂಡೆ, ಮಾತಾಡಿದೆ, ವಿನಂತಿ ಮಾಡಿದೆ, ಅವರ ಸ್ಪಂದನೆ ನನಗೆ ತುಂಬಾ ಖುಷಿಕೊಟ್ಟಿತು. ನಿಮ್ಮಂತಹ ರಾಜಕಾರಿಣಿ ಇನ್ನಷ್ಟು ಜನರು ಬರಲೆಂದು ಹಾರೈಸಿ ಕರೆಯನ್ನು ನಿಲ್ಲಿಸಿದೆ.

      ಇದರಲ್ಲಿ, ನಾವು ತುಂಬಾ ವಿಷಯ ತಿಳಿಯಬೇಕು, ನಾನು ವಿದೇಶದಲ್ಲಿ, ಅವರು ದೇಶದಲ್ಲಿ, ಅವರ ಊರಿನ ಹೊರವಲಯದ ಸಮಸ್ಯೆ, ಅವರು ಒಂದು ವೇಳೆ ನಿರ್ಧಯಿ ಆಗಿದ್ದರೆ, ಅದು ನಮ್ಮ ಊರಲ್ಲಿ ಅಲ್ಲ ಅನ್ನುವ ಮಾತು ಹೇಳುತ್ತಿದ್ದರು, ಹಾಗನ್ನಲಿಲ್ಲ, ಅಯ್ಯೋ ದೇವೆರೆ ಜನಕುಲು ದಾಯೆಗ್ ನನಲ ಇಂಚಿನ ವಿಷ್ಯ ಪಂನಂದೆ ಕುಲ್ಲುವೆರ್, ಪಾಪ ಬಾಲೆ ಬೇಗ ಹುಷಾರ್ ಆತು ಅನ್ನುವ ಮಾತು. ಇದರಲ್ಲೂ ಕರುಣೆ,  ನನ್ನ ಪ್ರಕಾರ ಒಂದು ಅಮ್ಮನ ಸ್ಥಾನದಲ್ಲಿ ನಿಂತು, ಅಥವಾ ಅಕ್ಕನ ಸ್ಥಾನಕ್ಕೆ ಸರಿಯಾಗಿ ನಿಂತು ಮಾತನಾಡುವ ರೀತಿ, ಗಮನಿಸಿಸಿದೆ.

      ಹೌದು, ಇಂತಹ ರಾಜಕಾರಣಿಗಳು ನಮ್ಮ ಊರಿಗೆ ಬೇಕು, ಅವರನ್ನು ಪಡೆದ ನೀವುಗಳು ಪುಣ್ಯವಂತರು ಆಗಿರಬೇಕು, ಎಲ್ಲವನ್ನೂ ಈಡೇರಿಸಲು ಯಾರಿಗೂ ಸಾಧ್ಯವಿಲ್ಲ ಆದರೆ ನಾನು ನಿಜವಾದ ಪ್ರಯತ್ನ ಮಾಡುತ್ತೇನೆ ಎಂಬ ಜನನಾಯಕರನ್ನು ಪ್ರೋತ್ಸಾಹಿಸಬೇಕು.  ನಾನು ಈ ಹಿಂದೆ ನನ್ನ ಊರಿನ ವಿಷಯದಲ್ಲಿ "ಅಮೃತ್ ಶೆಣೈ " ಇವರಿಗೆ ಇಂತಹ ಒಂದು ವಿಚಾರದಲ್ಲಿ ಕರೆ ಮಾಡಿದಾಗ, ಅವರಲ್ಲೂ ಸರಿಸಮಾನವಾಗಿ ಇಂತಹುದೇ ಸೇವಾ ಮನೋಭಾವನೆ ಕಂಡು ಬಂದಿತ್ತು, ಶ್ರೀಯುತ ಉಮೇಶ ನಾಯ್ಕ್ ಚೆರ್ಕಾಡಿ ಇವರಲ್ಲೂ ಮಾನವೀಯತೆ, ಸಹಾಯ ಮನೋಭಾವನೆ, ಮತ್ತು ಬೇಕಾದ ಸಮಯದಲ್ಲಿ ಉತ್ತಮವಾದ ಸ್ಪಂದನೆ ಸಿಕ್ಕಿತ್ತು. ಇವರೆಲ್ಲರಿಗೂ ಒಳಿತಾಗಲಿ.

    ಸಾರಾಂಶ, ರಾಜಕೀಯಕ್ಕೆ ಸೇರಿರುವ ಜನರೆಲ್ಲರೂ ಕೆಟ್ಟವರಲ್ಲ, ಅವರಿಗೂ ನಮ್ಮ ನಿಮ್ಮಂತೆ ಸಂಸಾರ, ಮರಿ ಮಕ್ಕಳು ಇದ್ದಾರೆ, ಅವರಿಗೂ ನಮ್ಮ ನಿಮ್ಮಂತೆ ಇರಬೇಕು ಅನಿಸುತ್ತೆ, ಆದರೆ ಅವರ ಜನ ಸೇವೆಯ ಮನಸ್ಸಿಗೆ ನನ್ನದೊಂದು ಪ್ರೀತಿಯ ಹಾರೈಕೆ. 🙏

    ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನು ಉತ್ತಮವಾದ ಮನೋಭಾವನೆ ಹೊಂದುವಂತಾಗಲಿ, ದೇಶ, ಊರಿನ ಸೇವೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಲಿ. ಬರೇ ರಾಜಕಾರಣಿಗಳಿಗೆ ದೇಶ ಉದ್ದಾರ ಮಾಡಲು ಸಾಧ್ಯವಿಲ್ಲ, ನಮ್ಮ ದೇಶದ ಉದ್ದಾರಕ್ಕೆ ಪ್ರತೀ ನಾಗರೀಕನ ಸಹಾಯ ಜವಾಬ್ದಾರಿ ಇರಲಿ.


ಜೈ ಭಾರತ್.

     ✍️ ಬರಹ : ಮಾಧವ. ಕೆ ಅಂಜಾರು.






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ