ಪ್ರತಿಜ್ಞೆ (ಕವನ -32)

ನನ್ನ ಮಾತಲ್ಲಿ ನಿನಗೆ
ಬೇಸರವಾದರೂ ಪರವಾಗಿಲ್ಲ
ನನ್ನೊಂದಿಗಿರುವ ನಿನ್ನನ್ನು
ದೂಷಿಸಲು ಬಿಡೋದಿಲ್ಲ

ನನ್ನ ಮಾತಲ್ಲಿ ನಿನ್ನ 
ಬೈದರೂ ನಾನು ಚಿಂತಿಸೋದಿಲ್ಲ
ನನ್ನೆದುರು ನಿನ್ನ
ದೂರುವವರನು ಸಹಿಸೋದಿಲ್ಲ

ನನ್ನ ಬಿಟ್ಟು ಬಿಡುವೆ
ಎಂದು ಹೇಳಿದರೂ ತೊಂದರೆಯಿಲ್ಲ
ನಿನ್ನನು ಕೆಟ್ಟವ(ಳ)ನೆಂದು
ಹೇಳಲು ನಾನು ಬಿಡೋದಿಲ್ಲ
           ✍️ಮಾಧವ ನಾಯ್ಕ್ ಅಂಜಾರು 🌷





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ