ಸರದಾರ (ಕವನ -35)

ನೋಯದಿರು ಒಲವೇ
ಸಾಲು ಕಟು ಮಾತಿಗೆ
ಹೇಯ ವೃತ್ತಿಯ ಜನರು
ಘೀಲಿಡುವರು ಸುಮಾರು
ಸೋಲದಿರು ಒಲವೇ
ನೂರಾರು ಅಲೆಯೇರಿದರೂ

ಮಾರುದ್ಧಕೆ ಒಬ್ಬರಿಗೊಬ್ಬರು
ಕೋಟೆ ಕಟ್ಟಿ ಶ್ರಮಿಸಿದರೂ
ಯಾರ ಭಯಬೇಡ ನಿನಗೆ
ಸಾರಿ ಸಾರಿ ಹೇಳುತಿರು
ಸೋಲಿಲ್ಲದ ಸರದಾರ ನಾನು
ಎದೆತಟ್ಟು ನನ್ನೊಲವೇ

ಕಲಿಯುಗದ ಈ ದಿನಗಳು
ಬಲಿಪಶು ಮಾಡಲು ಕಾಯ್ದರೂ
ಅಭಿಮನ್ಯು ನೀನಾಗು
ಏಳು ಕೋಟೆಯ ಸಿಗಿದು
ಸಾಲು ಸಾಲಾಗಿ ನೆಲಕಚ್ಚಿಸು
ಶೂರ ನೀ ಹೇಳು ನನ್ನೊಲವೇ
      ✍️ಮಾಧವ ನಾಯ್ಕ್ ಅಂಜಾರು 🌷







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ