ಕಳೆದೋಯ್ತು 8 ವರುಷ (ಕವನ -38)
ಮರವಾಗಿರೋ ಎನಗೆ
ಬಳ್ಳಿಯಾದೆ ನೀನು
ಸುಗಂಧ ಕುಸುಮವೆ
ನೀ ಜೊತೆಯಾಗಿದ್ದರೆ
ಎನ ಜೀವನ ಸಂಪನ್ನ,
ತಾಯಿಯಾಗಿ ನೀನು
ಗೆಳತಿಯಾಗಿಯು ನೀನು
ಜೀವನದ ಪ್ರತಿಹೆಜ್ಜೆಗೆ
ಹೂವಾಗಿರುವ ನೀನು
ಎನ ಭಾಗ್ಯ ಮತ್ತಿನ್ನೇನು
ಕಳೆದೋಯ್ತೆಂಟು ವರುಷ
ಬೆಳೆದುಬಿಟ್ಟಿದು ಸಂಸಾರ ವೃಕ್ಷ
ಮುಂದುವರಿಯಲಿ ನಮ್ಮ ಹರುಷ
ಜೊತೆಯಾಗಿರು ಪ್ರತಿನಿಮಿಷ
ಬಾಳೋಣ ಸಾವಿರ ವರುಷ
✍️ಮಾಧವ ಅಂಜಾರು 🙏
Comments
Post a Comment