ನಂಬಿಕೆ (ಕವನ -36)
ಹುಚ್ಚರನ್ನು ನಂಬಬಹುದು
ಹುಚ್ಚರಂತೆ ವರ್ತಿಸುವವರನ್ನು
ನಂಬಲಾಗದು
ಹೆಚ್ಚು ಮಾತಾಡುವವರನು
ನಂಬಬಹುದು
ಹೊಟ್ಟೆಕಿಚ್ಚು ಮಾತಾಡುವವರನು
ನಂಬಲಾಗದು!
ನೊಂದು ಕಣ್ಣೀರು ಸುರಿಸುವವರ
ಕಣ್ಣೀರ ಒರೆಸಬಹುದು
ಮೊಸಳೆ ಕಣ್ಣೀರು ಸುರಿಸುವವರು
ನಿನಗೆ ಕಣ್ಣೀರ ಬರಿಸಬಹುದು
ನಿದ್ದೆ ಮಾಡಿದವರನು ಎಬ್ಬಿಸಬಹುದು
ನಿದ್ದೆ ಮಾಡಿದಂತೆ ನಟಿಸುವವರನು
ಎಬ್ಬಿಸಲಾಗದು
✍️ಮಾಧವ ನಾಯ್ಕ್ ಅಂಜಾರು 🌷
Comments
Post a Comment