ಬೇಡ -ಬೇಡ (ಕವನ -39)

ಸಮಯವನ್ನು ಕೆಟ್ಟ ಕೆಲಸಕ್ಕಾಗಿ
ಉಪಯೋಗಿಸಬೇಡ
ಸಮಯವನ್ನು ದೂಷಿಸಲು
ವ್ಯರ್ಥ ಮಾಡಲೇಬೇಡ

ಸಿಕ್ಕಿರುವ ಅಧಿಕಾರವನ್ನು
ದುರುಪಯೋಗ ಮಾಡಬೇಡ
ದಕ್ಕಿರುವ ಭಾಗ್ಯಗಳಿಗೆ
ಬೇಸರಿಸಲೂ ಬೇಡ

ನಿಂತ ನೀರಾಗಿ
ಆವಿಯಾಗುತ್ತಿರಬೇಡ
ಹರಿವ ನೀರಾಗು 
ಆದರೆ ಪ್ರವಾಹ ಸೃಸ್ಟಿಸ ಬೇಡ

ಮನದ ಆಸೆಗಳ ಪೂರೈಸಲು
ಶ್ರಮಪಡದಿರಬೇಡ
ದುರಾಸೆಗಳ ಬೆನ್ನಹತ್ತಿ
ನಾಶವಾಗಬೇಡ 
      ✍️ಮಾಧವ ನಾಯ್ಕ್ ಅಂಜಾರು 🌷






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ