ಗಿಣಿಯೂ ನೀನೇ

ಆಕಾಶವು ನೀನೇ
ಚಂದಿರನೂ ನೀನೇ
ಬೆಳದಿಂಗಳ ಬೆಳಕಿಗೆ
ಹೊಳೆವ ನಕ್ಷತ್ರವೂ ನೀನೇ,
ಹನಿ ಮಳೆಯೂ ನೀನೇ
ಓಡಾಡುವ ಮೋಡಗಳೂ ನೀನೇ
ರವಿ ಜಾರುವ ಸಮಯಕೆ
ಕುಣಿಯೋ ನವಿಲೂ ನೀನೇ

ಕೋಗಿಲೆಯೂ ನೀನೇ
ಗಿಣಿಯೂ ನೀನೇ
ಸವಿ ಸಂಗೀತ ಸ್ವರಗಳ
ರಾಗ ತಾಳವು ನೀನೇ
ಕನಸು ನೀನೇ
ಮನಸೂ ನೀನೇ
ಕವಿ ಕಾವ್ಯಕೆ ಸೇರುವ
ಪದಗಳೇ ನೀನೇ!
       ✍️ಮಾಧವ. ಕೆ. ಅಂಜಾರು 










Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ