ಚುನಾವಣಾ ಫಲಿತಾಂಶ ಬಂದ ಕೂಡಲೇ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು, ಜನರ ಸಮಸ್ಯೆಗಳ ಪಟ್ಟಿಯನ್ನು ತೆಗೆದುಕೊಂಡು ಅದರ ಮಾಲೆಯನ್ನು ಹಾಕಿಕೊಂಡು ನಾನು ನಿಮ್ಮ ಸೇವಕನಾಗಿರುತ್ತೇನೆ ಎಂದು ಪ್ರಮಾಣ ಮಾಡಿ

 (ಲೇಖನ -86, ಚುನಾವಣಾ ಫಲಿತಾಂಶ ಬಂದ ಕೂಡಲೇ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು, ಜನರ ಸಮಸ್ಯೆಗಳ ಪಟ್ಟಿಯನ್ನು ತೆಗೆದುಕೊಂಡು ಅದರ ಮಾಲೆಯನ್ನು ಹಾಕಿಕೊಂಡು ನಾನು ನಿಮ್ಮ ಸೇವಕನಾಗಿರುತ್ತೇನೆ ಎಂದು ಪ್ರಮಾಣ ಮಾಡಿ. ಜನರು ಆಯ್ಕೆ ಮಾಡುವ ಜನಪ್ರತಿನಿಧಿ ಜನರ ಸೇವೆ ಮಾಡಲು ಸೂಕ್ತವಾದ ವ್ಯಕ್ತಿಯೇ ಎಂಬುದನ್ನು ಬೇಗನೇ ಅರಿತುಕೊಳ್ಳಬೇಕಾದರೆ ನಾಳೆಯೇ ಪ್ರಜೆಗಳು ತಮ್ಮ ಊರಿನ ಸಮಸ್ಯೆಗಳ ಪಟ್ಟಿಯನ್ನು ತಯಾರಿ ಮಾಡಿಟ್ಟುಕೊಳ್ಳಿ ನಿಜವಾದ ಜನಸೇವಕನು ಸ್ವಲ್ಪ ದಿನವಾದರೂ  ನಿಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಬಹುದು, ಒಂದು ವೇಳೆ ಅವನು ಅಧಿಕಾರದ ಆಸೆಗೆ ಬಿದ್ದಿರುವನೆಂದರೆ ನಾಳೆಯಿಂದಲೇ ಅವನೆ ಎಲ್ಲಾ ತರದ ನಡತೆಗಳು ನಿಮ್ಮ ಸೇವೆಯ ಬದಲಾಗಿ ನಿಮ್ಮ ಆಡಳಿತವನ್ನು ಮಾಡಲು ಆರಂಭಿಸಿದಂತೆ ಇರುತ್ತದೆ.



          ಅಧಿಕಾರದ ಅಹಂಕಾರದಿಂದ ನಮ್ಮ ವ್ಯವಸ್ಥೆಗಳಲ್ಲಿ ಕೈ ಹಾಕಿ ಸರ್ವಾಧಿಕಾರವನ್ನು ತೋರ್ಪಡಿಸಲು ನಾಳೆಯಿಂದಲೇ ಆರಂಭಿಸುತ್ತಾನೆ. ಮುಗ್ಧ ಜನರು ಮತ್ತೊಮ್ಮೆ ಹಲ್ಲಿಲ್ಲದ ಹಾವಿನಂತೆ ಆಗಿಬಿಡುತ್ತಾರೆ. ನಿಮ್ಮ ಮತದಾನವು ಆಮಿಷಗಳಿಗೆ ಒಳಗಾಗಿದ್ದರೆ ಅದಕ್ಕೆ ತಕ್ಕ ಪ್ರತಿಫಲಗಳನ್ನು ಫಲಿತಾಂಶದ ದಿನದಿಂದಲೇ ಸ್ವೀಕರಿಸಲು ತಯಾರಾಗಿರಿ. ರಾಜ್ಯ ರಾಜಕಾರಣವಾಗಲಿ, ದೇಶದ ರಾಜಕಾರಣವಾಗಲಿ ಪ್ರಜೆಗಳಿಗೆ ಸಹಕಾರವಾಗುವಂತಿರಬೇಕು ಹೊರತು ವಿನಾಶದ ಕಡೆಗೆ ದೂಡುವಂತಿರಬಾರದು. ನಿಮಗೆ ಕೊಟ್ಟಿರುವ ಭರವಸೆಗಳ ಪಟ್ಟಿಯನ್ನು ನಿಮ್ಮ ಮನೆಯ ಗೋಡೆಯೊಳಗೆ ಅಂಟಿಸಿಕೊಳ್ಳಿ ಆ ಭರವಸೆಗಳ ಪಟ್ಟಿಯಲ್ಲಿ ಎಷ್ಟು ಭರವಸೆಗಳು ನಿಮ್ಮ ಕೈ ಪಾಲಾಗುತ್ತದೆ ಎಂಬುದನ್ನು ಗಮನಿಸಿ. ಭರವಸೆಗಳು ಭರವಸೆಗಳಾಗಿ ಉಳಿದಿದೆ ಎಂದರೆ ನಿಮ್ಮನ್ನು ಮಗದೊಮ್ಮೆ ಮೂರ್ಖರಾಗಿಸಿದಂತೆ.

       ಬ್ರಷ್ಟಾಚಾರಿಗಳು ಈಗಾಗಲೇ ತನ್ನೆರಡು ಕೈಗಳನ್ನು ಮೇಜಿನ ಕೆಳಗಡೆ ಹಾಕಿ ಕಾಯುತ್ತಿರಬಹುದು, ಹೊಸ ಸರಕಾರಗಳು  ನಮ್ಮ ಪರವಾಗಿ ಇರುತ್ತದೆ ಎಂಬ ನಂಬಿಕೆಯಿಂದ ಬದುಕುತ್ತಿರಬಹುದು. ಚುನಾವಣೆ ಮುಗಿಯಿತು  ಎಂಬ ಆಲೋಚನೆಯಲ್ಲಿ  ಸಾಮಾನ್ಯ ಜನರು  ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಹಜ, ಆದರೆ ಚುನಾವಣೆ ಮುಗಿದ ನಂತರ ಬೆರಳಣಿಕೆಯಷ್ಟು ಜನರು ತನ್ನ ಊರಿನ ಬಗ್ಗೆ, ಪ್ರಕೃತಿಯ ಬಗ್ಗೆ, ಮತ್ತು  ಭವಿಷ್ಯದ ಜನರ ಬಗ್ಗೆ  ತಲೆಕೆಡಿಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ  ಎಲ್ಲಾ ಭ್ರಷ್ಟಾಚಾರಗಳಿಗೆ ಸಾಕಾರವನ್ನು ಕೊಡುತ್ತಾ ಭ್ರಷ್ಟ ಪ್ರಜೆಯಾಗಿ ಬ್ರಷ್ಟಾಚಾರ ಹೆಚ್ಚಿಸಲು ಹೆಗಲು ಕೊಡುತ್ತಾರೆ. ನಿಜವಾದ ಜನಪ್ರತಿನಿಧಿ ನಾಳೆಯಿಂದ ಪ್ರಜೆಗಳಿಗೆ  ತುಂಬಾ ಹತ್ತಿರವಾಗಿ ಬದುಕುತ್ತಾನೆ, ನಾಟಕೀಯ ಪ್ರತಿನಿಧಿ  ನಾಳೆಯಿಂದ ನಮ್ಮ ಪರಿಚಯವಿಲ್ಲದಂತೆ ಬದುಕು ಆರಂಭಿಸುತ್ತಾನೆ. ಅವನ ಹತ್ತಿರ ಹೋಗಬೇಕಾದರೆ ಅದೆಷ್ಟೋ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕಷ್ಟಗಳನ್ನು ವ್ಯಕ್ತಪಡಿಸಲು ಹೋದರೆ  ಅವರಿಂದ ನೋವನ್ನು ಅನುಭವಿಸಬೇಕಾಗುತ್ತದೆ.

          ಚುನಾವಣೆಗಾಗಿ ಖರ್ಚು ಮಾಡಿದ ಎಲ್ಲಾ ಮೊತ್ತವನ್ನು ನಾಳೆಯಿಂದಲೇ ಯಾವುದೇ ಭೇದಗಳಿಲ್ಲದೆ ಸಮಾನವಾಗಿ ಪ್ರತಿ ಪ್ರಜೆಯ ಮೇಲು ವಸೂಲಿ ಕಾರ್ಯಕ್ರಮಕ್ಕೆ ತೊಡಗಿಕೊಳ್ಳುತ್ತಾರೆ. ಒಂದು ವೇಳೆ ತಾವುಗಳು ಯಾವುದೇ ಆಮಿಷಕ್ಕೆ ಒಳಗಾಗದೆ  ಮತದಾನ ಮಾಡಿದ್ದರೆ ಹೆಚ್ಚೇನು ಹಶ್ಚಾತಾಪ ಪಡಬೇಕಾಗಿಲ್ಲ, ಒಂದು ವೇಳೆ ಆಮಿಷಕ್ಕೆ ಒಳಗಾಗಿದ್ದರೆ ಪಶ್ಚಾತಾಪ ಪಡಲೇಬೇಕು. ನಾಳೆ ಜಯಗಳಿಸುವ ಪಕ್ಷ  ಎಲ್ಲಾ ವ್ಯವಸ್ಥೆಗಳಿಗೆ ( ಶಾಸಕಾಂಗ ಕಾರ್ಯಂಗ ನ್ಯಾಯಾಂಗ ) ಗೌರವವನ್ನು ಕೊಟ್ಟು ಆಡಳಿತವನ್ನು ಮಾಡುವಂತಾಗಲಿ, ಪೊಲೀಸ್ ವ್ಯವಸ್ಥೆ , ಕಾನೂನು ವ್ಯವಸ್ಥೆ, ಆಡಳಿತ ಅಧಿಕಾರಿಗಳ ಗೌರವ ಹೆಚ್ಚಿಸಿ ಭ್ರಷ್ಟಾಧಿಕಾರಿಗಳನ್ನು ಕೂಡಲೇ ತನ್ನ ಮೂಲ ಸ್ಥಾನಕ್ಕೆ ಕಳಿಸುವಂತಾಗಲಿ.

             ನೀವ್ಗಳು ಆಯ್ಕೆ ಮಾಡಿದ ಜನಪ್ರತಿನಿದಿನಗಳ ಸರ್ಕಾರವಾಗದೆ ನಿಮ್ಮ ಆಯ್ಕೆಗೆ ಸ್ಪಂದಿಸುವ ಸರ್ಕಾರವಾಗಲಿ ಕೋಟಿ ಕೋಟಿ ಹಣ ಮಾಡುವ ಜನ ಪ್ರತಿನಿದಿಗಳ ಇಂದಿನ ಸ್ಥಿತಿ ಮತ್ತು 5 ವರುಷದ ನಂತರ ಅವರಲ್ಲಿ ಆಗುವ ಹಣದ ಲೆಕ್ಕಾಚಾರ ನಿಮಗೆ ಗೊತ್ತಾದರೂ ಏನೂ ಮಾಡಲು ಸಾಧ್ಯವಿಲ್ಲ,! ಮುಂದಿನ ಸರ್ಕಾರ, ರೈತರ ನಿಜವಾದ ಕಾಳಜಿ ಹೊಂದಿರುವ ಸರ್ಕಾರವಾಗಲಿ, ನಿಜವಾದ ಜನ ಸೇವಕ ಸರ್ಕಾರ ನಮ್ಮದಾಗಲಿ 🙏🌹

ಶುಭಾಶಯಗಳು.

 ಬರಹ : ಮಾಧವ. ಕೆ. ಅಂಜಾರು 

     

       

         

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ