ಮೌನ ಮಾತು - ಪ್ರೀತಿ ಮಾತು ನಮಸ್ಕಾರ, ಮಾತು ಬೆಳ್ಳಿ ಮೌನ ಬಂಗಾರ - ಈ ಗಾದೆ ಮಾತು ಕೇಳಿದ್ದಿರಬಹುದು. ಒಂದೊಂದು ಗಾದೆ ಮಾತುಗಳು ಆಳವಾದ ಅರ್ಥವನ್ನು ಹೊಂದಿರುತ್ತದೆ. ಗಾದೆ ರೂಪದಲ್ಲಿ ಬಂದ ವಾಕ್ಯಗಳು, ಅಥವಾ ನುಡಿಗಳು ಒಬ್ಬ ಯೋಗಿ, ವಿದ್ವಾಂಸ, ಕವಿ, ಅಪಾರ ಜ್ಞಾನವುಳ್ಳ ವ್ಯಕ್ತಿಗಳಿಂದ ಶೃಷ್ಟಿಯಾಗಿರುತ್ತದೆ. ಸಾವಿರಾರು ಪದಗಳನ್ನು ಒಂದು ವಾಕ್ಯದಲ್ಲಿ ಉಲ್ಲೇಖ ಮಾಡುವ ಸಾಮರ್ಥ್ಯ ಕೆಲವೇ ಕೆಲವರಲ್ಲಿ ಬರುತ್ತದೆ. ಹೌದು, ನಿನ್ನ ಪ್ರತಿಯೊಂದು ಮಾತು, ಮೌನ, ಪ್ರೀತಿ, ಕರುಣೆ ನಿನ್ನ ವ್ಯಕ್ತಿತ್ವ ತಿಳಿಸುತ್ತದೆ. ನಿನ್ನ ಭಾವನೆಗಳು ಕೆಲವೊಮ್ಮೆ ಮಾತಿನ ಮೂಲಕ ಹೊರಹೊಮ್ಮಿದರೆ, ಮೌನ, ಕೋಪದಲ್ಲೂ ವ್ಯಕ್ತವಾಗುತ್ತದೆ. ನೀನಾಡುವ ಮಾತು ನಿನಗೆ ಖುಷಿಕೊಟ್ಟರೆ ಸಾಲದು, ನಿನ್ನೆದುರಿನ ಜನರಿಗೆ ಬೇಸರ ತರಿಸದಂತೆ ಜಾಗ್ರತೆ ಹಿಸಿಕೊಳ್ಳಬೇಕಾಗುತ್ತದೆ. ಅದರರ್ಥ ಸಮಯಕ್ಕೆ ತಕ್ಕಂತೆ ಮಾತನಾಡಬೇಕೆಂದೇನಿಲ್ಲ, ಅಥವಾ ಎದುರಿಗೆ ನಿಂತವನ ಓಲೈಕೆ ಮಾಡುವ ಮಾತನ್ನಾಡುವ ಅಭ್ಯಾಸ ಮಾಡಿಕೊಳ್ಳಬೇಡ. ನಾವೆಷ್ಟೋ ಸಂಧರ್ಭಗಳನ್ನು ನೋಡುತ್ತೇವೆ, ಮನಸಾರೆ ಮಾತನಾಡುವ, ಅಥವಾ ಕಲ್ಮಶವಿಲ್ಲದೆ ಮಾತನಾಡುವ ಮಾತುಗಳು ಸದಾ ನಗು, ಪ್ರಾಮಾಣಿಕತೆಯಿಂದಿರುತ್ತದೆ , ಸತ್ಯವಾಗಿರುತ್ತದೆ. ಮುಖದ ಭಾವನೆಗಳು ಇನ್ನಷ್ಟು ಮಾತನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸದಾ ನಗುತ್ತಾ ಮಾತನಾಡುವ ಜನರು ಹೆಚ್ಚು ನೋವಿನಿಂದ ಇರುತ್ತಾರೆ ಮತ್ತು ಅಂಥವರು ಇನ...
Comments
Post a Comment