ಅಲ್ಲೇಕೆ ಕುಳಿತಿರುವೆ
ಮೋಡಗಳ ಓಡಾಟದೊಳು
ಮಿಂಚಿನ ಬೆಳಕಿನೊಳು
ನಿನ್ನ ಸೌಂದರ್ಯವ ಅಸ್ವಾದಿಸಲು
ನನ್ನೆದೆ ಬಯಕುತಿದೆ
ಜಿಂಕೆಯ ನಡೆಯ
ನಿನ್ನ ಆ ಹೆಜ್ಜೆಗೆ
ಸಾವಿರ ಕನಸುಗಳೆದುರಾಗುತಿದೆ!
ಅಲ್ಲೇಕೆ ಕುಳಿತಿರುವೆ
ಮೆಲ್ಲನೇ ನಗುತಿರುವೆ
ನಕ್ಷತ್ರವೇ ನಾಚುವಂತೆ
ಬೆಳ್ಳಿಯಂತೆ ಹೊಳೆಯುತಿರುವೆ
ನಿನ್ನ ಪ್ರೀತಿಯ ಮಾತಿಗೆ
ಎಂದೂ ಹಾತೋರೆಯುವೆ
ಕನಸುಗಳ ನನಸಾಗಿಸುವ
ದಿನಗಳಿಗೆ ಕಾಯುತಿರುವೆ!
✍️ಮಾಧವ. ಕೆ. ಅಂಜಾರು
Comments
Post a Comment