Posts

Showing posts from October, 2020

ಹಸಿವು (ಕವನ -74)

ಹಸಿವು ****** ಹಣವಿಲ್ಲದಾಗ ಸಿರಿವಂತನ ಜೊತೆಗೆ ಹೋಗಬೇಡಿ ಹಸಿವಾದಾಗ ಸಿರಿವಂತನ ಮನೆಲಿ ಊಟ ಕೇಳಬೇಡಿ ಹಣದ ಹಸಿವು ಸಿರಿವಂತರಿಗೆ ಜಾಸ್ತಿ ಮರೆಯಬೇಡಿ ಗುಣದ ಹಸಿವು ಬಡವನಿಗೆ ಜಾಸ್ತಿ ತಿಳಿದುಬಿಡಿ ಹೃದಯವಂತರು ಸಿರಿವಂತನಾದರೆ ಕೈ ಮುಗಿದುಬಿಡಿ ಶ್ರಮಜೀವಿಯೊಬ್ಬ ಸಿರಿವಂತನಾದರೆ ಗುಟ್ಟು ತಿಳಿದುಬಿಡಿ     ✍️ಮಾಧವ ಅಂಜಾರು 🙏🌷

ಅವಕಾಶ (ಕವನ -75)

  ಅವಕಾಶ ******* ನಕ್ಕು ನಗಿಸಲು ಅವಕಾಶ ಸಿಕ್ಕರೆ ಇಂದೇ ಮಾಡಿಬಿಡಿ ನಾಳೆ ಎಂಬುದ ಯಾರು ಬಲ್ಲರು? ಕನಸು ಕಾಣಲು ಆರಂಭಿಸಿದ್ದರೆ ನನಸಾಗಿಸಲು ಪ್ರಯತ್ನಪಡಿ ನಾಳೆ ಎಂಬುದ ಯಾರು ಬಲ್ಲರು? ಒಳಿತು ಮಾಡಲು ಹಂಬಲವಿದ್ದರೆ ಈಗಲೇ ಮಾಡಿಬಿಡಿ ನಾಳೆ ಎಂಬುದನು ಯಾರು ಬಲ್ಲರು? ಪ್ರೀತಿ ವಾತ್ಸಲ್ಯವ ತೋರಬೇಕಿದ್ದರೆ ತೋರಿಸಿಬಿಡಿ ನಾಳೆ ಎಂಬುದ ಯಾರು ಬಲ್ಲರು?        ✍️ಮಾಧವ ಅಂಜಾರು 🙏🌷

ಉಸಿರು (ಕವನ -77)

  ಉಸಿರು ****** ನನ್ನುಸಿರಿದ್ದರೆ ಸಾಕು, ಎನ್ನ ತುತ್ತನು ನಾನೇ ಎತ್ತಿ ತಿನ್ನುವತನಕ ನನ್ನುಸಿರಿದ್ದರೆ ಸಾಕು ಎನ್ನ ಕಾಲಲಿ ಬಲವಿದ್ದು ನಡೆವ ತನಕ ನನ್ನುಸಿರಿದ್ದರೆ ಸಾಕು ತಿಂದುಳಿದ ಬಟ್ಟಲನು ನಾನೇ ತೊಳೆದಿಡುವತನಕ ನನ್ನುಸಿರಿದ್ದರೆ ಸಾಕು ಉಟ್ಟ ತೊಡುಗೆಯ ತೊಳೆದು ಉಡುವತನಕ ನನ್ನುಸಿದ್ದರೆ ಸಾಕು ಎನ್ನ ನಂಬಿ ಬದುಕಿರುವ ಸಂಬಂಧಗಳು ಇರುವತನಕ ನನ್ನುಸಿರಿದ್ದರೆ ಸಾಕು ಎನ್ನ ಮನಸಿನ ನೋವ ಸಹಿಸಿಕೊಳ್ಳುವತನಕ ನನ್ನುಸಿರಿದ್ದರೆ ಸಾಕು ನಿಮ್ಮೆಲ್ಲರ ಪ್ರೀತಿ ಎನ್ನ ಜೊತೆ ಇರುವತನಕ ನನ್ನುಸಿರಿದ್ದರೆ ಸಾಕು ಎನ್ನ ಮೊಗದಲಿ ನಗುವಿರುವತನಕ    ✍️ಮಾಧವ ಅಂಜಾರು 🙏🌷

ಸಾಧನೆ (ಕವನ -76)

  ಸಾಧನೆ ****** ನಿಮ್ಮ ಸಾಧನೆ ಸಮಾಜ ಗುರುತಿಸಿಕೊಳ್ಳಲೆಂದು ಸಾಧಿಸಲು ಶ್ರಮಿಸಬೇಡಿ ನಿಮ್ಮ ಸಾಧನೆ ಸಮಾಜ ಗುರುತಿಸಲಿಲ್ಲವೆಂದು ಸಾಧನೆಯ ನಿಲ್ಲಿಸಬೇಡಿ, ಪ್ರತಿಯೊಬ್ಬರ ಸಾಧನೆ ಮೌಲ್ಯಗಳನ್ನು ಹೊಂದಿರುತ್ತದೆ ಅವರವರ ಶಕ್ತಿಗೆ ತಕ್ಕಂತೆ ಮಾಡಿರಬಹುದು ಸಾಧನೆ ಅವರವರ ಯುಕ್ತಿಗೆ ತಕ್ಕಂತೆ ಮಾಡಬಹುದು ಸಾಧನೆ ಬಡವನಾಗಿದ್ದರೆ ದಿನದ ಅನ್ನವನು ಗಳಿಸೋದು ಬಹುದೊಡ್ಡ ಸಾಧನೆ ಅಮಾಯಕನಾಗಿದ್ದರೆ ಇಂದಿನ ಸಮಾಜದಲ್ಲಿ ಬದುಕಿ ತೋರಿಸೋದೇ ಸಾಧನೆ         ✍️ಮಾಧವ ಅಂಜಾರು 🙏

ಬಾಂಧವ್ಯ (ಕವನ -78)

  ಬಾಂಧವ್ಯ  ********* ಕಳೆದು ಹೋದ ವಸ್ತು ಮತ್ತೆ ಸಿಕ್ಕಾಗ ಅದೆಷ್ಟು ಸಂತೋಷ ಕಳೆದು ಹೋದ ಜೀವ ಬರದೇ ಹೋದಾಗ ಅದೆಷ್ಟು ದುಃಖ, ಕಳೆದು ಹೋದ ಬಾಂಧವ್ಯ ಮತ್ತೆ ಪುಟಿದಾಗ ಅದೆಷ್ಟು ಸಂತೋಷ ಕಳೆದು ಹೋದ ವಿಶ್ವಾಸ ಮತ್ತೆ ಹುಟ್ಟುವಾಗ ಅದೆಷ್ಟು ಸಂಕೋಚ, ವಸ್ತು ಕಳೆದುಹೋಗುವ ಮುನ್ನ ಪ್ರೀತಿಯಿಂದ ಇಟ್ಟುಕೊಳ್ಳಿ ಮತ್ತೆ ಸಿಗಬಹುದು ಜೀವ ಕಳೆದುಹೋಗುವ  ಮುನ್ನ ಪ್ರೀತಿಯಿಂದ ಬಾಳಿ ಮತ್ತೆ ಸಿಗಲಾರದು!   ✍️ಮಾಧವ ಅಂಜಾರು 🙏

ಮಾರಿ (ಕವನ -80)

  ಮಾರಿ ***** ಹೆಣ್ಣೊಂದು ಕಲಿತರೆ ಶಾಲೆಯನ್ನು ತೆರೆದಂತೆ ಕಲಿತ ಹೆಣ್ಣು ಗಂಡು ಮದ್ಯಪಾನ ಕಲಿತರೆ ಹೊಸ ಬಾರು ತೆರೆದಂತೆ, ನಾರಿ ಮುನಿದರೆ ಮಾರಿ ನಾರಿ ಒಲಿದರೆ ಜಯಭೇರಿ ನಾರಿ ನಲಿದರೆ ದುಬಾರಿ ನಾರಿ ನಕ್ಕರೆ ಸುಖ ಸಂಸಾರಿ ನಾರಿ ಸರಿದರೆ ಬಡ ವ್ಯಾಪಾರಿ        ✍️ಮಾಧವ ಅಂಜಾರು 🙏

ಜೊತೆಯಲಿ (ಕವನ -81)

  ಜೊತೆಯಲಿ ******* ಸಾಧ್ಯವಿದ್ದರೆ ಜೊತೆಯಲ್ಲಿರುವವರ ಮುಖದಲ್ಲಿ ನಗು ಬರಿಸಿ ಸಾಧ್ಯವಿದ್ದರೆ ಜೊತೆಯಲ್ಲಿರುವವರ ಕಷ್ಟದಲ್ಲಿ ಭಾಗಿಯಾಗಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ಮನಸು ಅರ್ಥಮಾಡಿಕೊಳ್ಳಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ಕೈ ಹಿಡಿದು ನಡೆಸಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ತಪ್ಪನು ತಿದ್ದಿಬಿಡಿ ಸಾಧ್ಯವಿದ್ದರೆ ಜೊತೆಯಲ್ಲಿ ಇರುವವರ ದ್ವೇಷ ಮರೆಸಿಬಿಡಿ       ✍️ಮಾಧವ ಅಂಜಾರು 🙏

ನವರಾತ್ರಿ (ಕವನ -82)

  ನವರಾತ್ರಿ ******* ನವದಿನದ ನವರಾತ್ರಿಯಲಿ ನವದುರ್ಗೆಯು ಹಾರೈಸಲಿ ನವ ಕನಸಿನ ನವ ಆಸೆಗಳ ನವದುರ್ಗೆಯು  ಆಲಿಸಲಿ ನವ ಹೂವಲಿ ನವ ಫಲದಲಿ ನವದುರ್ಗೆಯ ಪೂಜಿಪೆ ನಲಿದಾಡುತ ಭಕ್ತಿಯಿಂದ ನವ ದುರ್ಗೆಗೆ ಕರಮುಗಿವೆ ನವ ಬಣ್ಣದಲಿ ನವ ರತ್ನದಲಿ ನವಬಗೆಯಲಿ ಸಿಂಗರಿಸಿ ನವದುರ್ಗೆಯ ಚರಣಕೆರಗಿ ನವದಿನದ ಶುಭಕೋರುವೆ        ✍️ಮಾಧವ ಅಂಜಾರು 🌷

ಸ್ಪಂದನ (ಕವನ -83)

  ಸ್ಪಂದನ ******* ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯ ನಿಮ್ಮಲ್ಲಿದ್ದರೆ ನೋವನ್ನು ಸಹಿಸಿಕೊಳ್ಳಲು ಕೂಡ ನಿಮ್ಮ ಹೃದಯ ತಯಾರಿಯಲ್ಲಿರುತ್ತದೆ, ಇನ್ನೊಬ್ಬರ ಪ್ರೀತಿಗೆ ಸ್ಪಂದಿಸುವ ಮನಸ್ಸು ನಿಮ್ಮಲ್ಲಿದ್ದರೆ ಪ್ರೀತಿಯ ಅರ್ಥವೇನೆಂದು ತಿಳಿಸುವ ಶಕ್ತಿ ನಿಮ್ಮಲ್ಲಿರುತ್ತದೆ ಇನ್ನೊಬ್ಬರ ಅವನತಿಗೆ ಕಾಯುವ ಮನಸ್ಥಿತಿ ನಿಮ್ಮಲ್ಲಿದ್ದರೆ ಅವನತಿ ನಿಮ್ಮದೇ ಬಾಗಿಲಲ್ಲಿ ಕಾಯುತ್ತಿರುತ್ತದೆ ಒಂದಲ್ಲ ಒಂದು ದಿನ ಸತ್ಯ ಗೆಲ್ಲುತ್ತದೆ               ✍️ಮಾಧವ ಅಂಜಾರು 🌷 .

ದೇವರಿಲ್ಲ (ಕವನ -84)

  ದೇವರಿಲ್ಲ ******** ದೇವರನ್ನೇ ನಂಬದಿದ್ದವ ಕಷ್ಟ ಬಂದಾಗ  ಕೈಮುಗಿದ ದೇವರನ್ನೇ ದೂರುತ್ತಿದ್ದವ ನೋವನುಭವಿಸುವಾಗ ದೇವರನ್ನು ಕರೆದ ದೇವನೊಬ್ಬನೇ  ಅನ್ನುತಿದ್ದವ ಕಷ್ಟ ಸುಖದಲೂ ನೆನೆದ ನಾನೇ  ದೇವರು ಅನ್ನುತಿದ್ದವ ದೇವಾ  ದೇವನೆನುತ ಜೀವವನೇ ತೊರೆದ ದೇವರ ಹೆಸರಲಿ ಹಣಮಾಡುತಿದ್ದವ ಐಶ್ವರ್ಯ ಗಳಿಸಿ ಮೆರೆದ ದೇವನೊಬ್ಬ ನೋಡುತಲಿರುವ ತಿಳಿದೂ ತಿಳಿಯದಂತೆ ನಡೆದ ಕೊನೆಗಾಲಕೆ ಪಾಪವನ್ನೆಲ್ಲ ನೆನೆದು ಕೊರಗಿ ಕೊರಗಿ ದೇವರನ್ನೇ ನೆನೆದ        ✍️ಮಾಧವ ಅಂಜಾರು 🌷

ಸಾಮರ್ಥ್ಯ (ಕವನ -85)

  ಸಾಮರ್ಥ್ಯ ******* ಕತ್ತೆಯನ್ನೂ ಗೌರವಿಸಬೇಕು ಭಾರಹೊತ್ತು ನಡೆಯುದನು ಕಂಡು ಕುದುರೆಯನ್ನ ಮೆಚ್ಚಿದರೆ ಸಾಲದು ಹುಲಿಯನ್ನೂ ಹೊಗಳಿದರೆ ಸಾಲದು ಇಲಿಯನ್ನೂ ಗಮನಿಸಲೇ ಬೇಕು ಜೀವಿಯ ಸಾಮರ್ಥ್ಯ ಅಳೆಯಬಾರದು, ಹುಚ್ಚನನ್ನೂ ಹೀಗಳೆಯಬಾರದು ಸಿರಿವಂತನನ್ನೂ ಹಿಂಬಾಲಿಸಬಾರದು ಬಡವ ಬಲ್ಲಿದನ ಹಿಂಸಿಸಬಾರದು ಇಂದು ಇರುವ ಸಾಮರ್ಥ್ಯವೆಲ್ಲ ಶಾಶ್ವತವಲ್ಲ ಎಂಬುದ ಮರೆಯಬಾರದು ಮನುಜಗೆ ವಿಕೃತಿ ಅತಿಯಾಗಿರಬಾರದು            ✍️ಮಾಧವ ನಾಯ್ಕ್ ಅಂಜಾರು 🌹