Posts

Showing posts from December, 2013

ಹೊಸ ವರುಷ ಹೊಸ ಹರುಷ

ಕಳೆದುಕೊಂಡೆ ಜೀವನದ ಅಮೂಲ್ಯ ದಿನಗಳ ತಿಳಿದೆ  ಕನಸು ನನಸಾಗಲು ಪರಿಶ್ರಮದ ಪುಟಗಳ ಬರುತ್ತಿರಲಿ ಉಲ್ಲಾಸದ ಹನಿಮಳೆಯ ಸಿಂಚನವು ಚಿಗುರಲಿ ಹೊಸ ಕನಸಿನ ಸುಗಂಧ ಬಳ್ಳಿ ಹೂವು ಸುತ್ತಿಬೇಳೆಯಲಿ ಹರುಷದ ಹೂದೋಟ ಜೀವನದಿ ನಕ್ಕು ನಲಿಯಲಿ ಹೂ ಮೊಗ್ಗುಗಳು ಹಸಿರಿನಂಗಳದಿ ಸ್ವಾಗತಿಸುವೆ ಹರುಷದ ವರುಷವ ಉತ್ಸುಕದಲಿ ನೀಡಲಿ ನಮ್ಮ ಬಾಳಿಗೆ ಸುಖ ನೆಮ್ಮದಿ  ಅಮಿತ ಕೈಮುಗಿದು ಬೇಡುವೆ ಸೃಷ್ಟಿಕರ್ತನ ಪ್ರತಿನಿಮಿಷ ನಮಿಸುವೆ ಶಿರಬಾಗಿ ತಂದೆ ತಾಯಿಯ ಚರಣಕೆ                              - ಅಂಜಾರು ಮಾಧವ ನಾಯ್ಕ್                                                          

ನನ್ನ ನಾಲ್ಕೇ ನಾಲ್ಕು ಮಾತು ...

ಇದ್ದರೇನಂತೆ ಐಶ್ವರ್ಯ  ನಿನಗೆ ಕದ್ದು ತಿನ್ನುವ ಚಟವಿದ್ದರೆ.......! ತಿದ್ದಿ ಹೇಳಲು ಹೊರಟ ನನಗೇ ಬುದ್ದಿಯಿಲ್ಲ ಎನ್ನುವ ಹಟವಿದ್ದರೆ ಸದ್ದು ಮಾಡಿ ಒದ್ದು ಬದುಕುವ ನೀನು, ಹೊದ್ದು  ಸತ್ತರೂ ಸಿಗದು ಸಂಪತ್ತು ಜಿಪುಣನಾಗಿ ಅನ್ನತಿನ್ನಲೂ ಎಣಿಸುವವನು ಕಣ್ಮುಚ್ಚುವಾಗ ಚಿನ್ನವೂ ಮಣ್ಣಾಗಿ ಹೋದೀತು ಉಸಿರಿರೋ ತನಕ ನಿಟ್ಟುಸಿರು ಬಿಡುವೆ ಯಾರು ಬಲ್ಲರು ನಿನ್ನ ಕೊನೆಯುಸಿರು ಮುಗ್ದ ಜನರ ಎದೆಯ ತುಳಿದು ಬದುಕುವೆ ಏನು ಪ್ರಯೋಜನ ಸಿಂಗಾರ ಮಾಡಿದರೂ ?  ಸುಖ-ಸಂತೋಷ ಪ್ರೀತಿ ಸಹನೆ  ಇದ್ದಲ್ಲಿ ಹಾಯಾಗಿ ಕಳೆವೆ  ಪರಸ್ಪರ ಅರಿತಾಗ ಸುಖವಿರದು ಅಹಂಕಾರದ ಮನವಿದ್ದಲ್ಲಿ ಅದಕೆ ಎಂದೆಂದೂ ನಗುತಾ ಜೀವಿಸು ಸರಾಗ ...                     - ಅಂಜಾರು ಮಾಧವ ನಾಯ್ಕ್

ಖಾಕಿ ಬಟ್ಟೆಯ ಜೀಪು ಬಂದಾಗ

ಕೋಟಿ ಕೋಟಿಯ ಸೂಟು ಬೂಟುಗಳ ಹಾಕಿದ್ದರೂ ಕಿತ್ತೊಗೆದು ಬಿಸಾಕುವೆ ಅವಸರದ ಮಲ ಬಂದಾಗ ಸಾವಿರ ಬಾರಿ ದೇಶ ವಿದೇಶವ ವಿಮಾನದಲಿ ಸುತ್ತಿದ್ದರೂ ಉಡುಗೆ ಒದ್ದೆ  ಮಾಡಿಕೊಳ್ಳುವೆ  ಪೈಲಟ್ ಕೈ ಕೊಟ್ಟಾಗ ಅಪ್ಪಿ ತಪ್ಪಿ ಕೊಂದು ಬದುಕಿ ಜೀವಿಸುತ್ತಿದ್ದರೂ ದಂಗಾಗಿ ಬಿಡುವೆ ನೀ ಕಿಂಡಿ ಬಾಗಿಲ ಸದ್ದು ಬಂದಾಗ ಹಲವು ಬಾರಿ ಮೋಸ ವಂಚನೆ ಮಾಡಿ ಜಯಗಳಿಸಿದರೂ ವಿಚಲಿತನಾಗುವೆ ತರ ತರದ ಕಷ್ಟ ಬಂದಾಗ ಗೊತ್ತಿದ್ದೂ ಕದ್ದು ತಿಂದು ಸಾಚನಂತೆ ತಿರುಗಿದರೂ ಬೆವೆರಿಳಿಸುವೆ ಖಾಕಿ ಬಟ್ಟೆಯ ಜೀಪು ಬಂದಾಗ                          - ಅಂಜಾರು ಮಾಧವ ನಾಯ್ಕ್

ಜಯಗಳಿಸುವೆ ನೀನು.....

ನೀಲಿ ಆಕಾಶದಲಿ ನಕ್ಷತ್ರವು ಮಿನುಗುತ್ತಿರುವಂತೆ ಹೊಳೆಯಲಿ ನಿನ್ನ ಜೀವನ ಸುಖದಾರಿಯ ಪಯಣದಲಿ ಮುಂದೆ ಸಾಗುತ್ತಿರಲಿ ಬಂಡಿಯು ಉಬ್ಬು ತಗ್ಗುಗಳೆನ್ನದೆ ಮುನ್ನುಗ್ಗು ಧೈರ್ಯದಲಿ ಗುರಿ ಮುಟ್ಟುವ ತನಕ ಮರೆಯದಿರು ಸಾಗಿದ ದಾರಿಯ ವಿಚಿತ್ರ ಸತ್ಯಾಸತ್ಯಗಳ ಮರೆತರೆ ಫಲವಿಲ್ಲದಂತಾಗುವುದು ನೀ ಗಳಿಸಿದ ಸುಖ ಸಂಪತ್ತು ಒಂದೇ ಆಗಿರಲಿ ನಿನ್ನ ಧ್ಯೇಯ ಒಳಿತಿಗಾಗಿ  ಬದುಕಲು ಒಟ್ಟಾಗಿ ಬರುವುದು ನಿನ್ನೆದುರಿಗೆ ಪ್ರೀತಿಯೆಂಬ ಮಾಲೆಯು ಸ್ವಾಗತಿಸುತಿರು ಎಂದಿಗೂ ಬಡವ ಬಲ್ಲಿದನ ಅಂತರವಿರದೆ  ಜೀವನದ ಪ್ರತಿ ಆಟದಲೂ  ಜಯಗಳಿಸುವೆ ನೀನು                                                  - ಅಂಜಾರು ಮಾಧವ ನಾಯ್ಕ್

ಬೇಗ ಬಾ...............!!!!!!!

ಬೆಳ್ಳಿ ಮೋಡದ ನಡುವೆ ಸೂಸುವ ಹೊಂಗಿರಣದಂತೆ ಬೀರುತ್ತಿದೆ ನಿನ್ನ ನೋಟ ನನ್ನ ಮನವ ಸೆಳೆಯಲು ಭಾಸವಾಗುತ್ತಿದೆ ನೀ ಎನ್ನ ಕೈ ಸ್ಪರ್ಶಿಸಲು ತಂಪುಗಾಳಿಯ ಆನಂದವ ಸವಿಯುತ್ತಿರುವಂತೆ ಜನುಮದ ಜೋಡಿ  ನಾನಾಗಿ ನಿನ್ನ ಪ್ರತಿ ಉಸಿರಲಿ ಮೆಲ್ಲನೆ ನಿನ್ನ ಸೇರುವೆ, ಮರೆಸಲಿ ಪ್ರತೀ  ನೋವ ಒಪ್ಪಿಕೋ ನನ್ನ ಪ್ರೀತಿಯ, ಹಿಡಿದಪ್ಪಿಕೋ ನಿರಂತರ ಹೂವಂತೆ  ನೋಡಿ ಮುದ್ದು ಮಾಡುವೆ ಚೆನ್ನ ಪ್ರೀತಿಯ ಹೃದಯವನು ಮರೆಯಬೇಡ ಪ್ರಿಯೆ   ಬೇಗ ಬಾ , ನಾ ನಿನಗಾಗಿ ಕಾದಿರುವ  ಪ್ರೇಮಿ                            - ಅಂಜಾರು ಮಾಧವ ನಾಯ್ಕ್

ಕೀಳು ದೃಷ್ಟಿ

ನೋವಾಗುತಿದೆನಗೆ ಮೂರ್ಖ ಜನರ ಕೀಳು ದೃಷ್ಟಿಯ ಕಂಡು ಸಾಲು ಸಾಲಾಗಿ ಕುಕ್ಕುತಿಹರೆನ್ನ ಮೌನ ಮಾತನು ಕಂಡು ಹೇಳಲಾಗದೆ ಚಡಪಡಿಸುತ್ತಿರುವೆ ಸೋಲುಣ್ಣುವ  ಆಟದಲಿ  ಕಿವುಡನಂತೆ ನಟಿಸುವರು ನೋವ ಹೇಳುವ ಸಮಯದಲಿ      ಜೋರು ಸ್ವರವ ಬೀರುವರು ನನ್ನ ವ್ಯಥೆಯ ಕಥೆಯಲಿ ಒಂದು ಚೂರು ಕರುಣೆಯ ತೋರರು ಮೇಲಕ್ಕೆತ್ತಲು ಸುಳಿಯಲಿ       ಅಸುರರಾಗಿ ಬಂದು ದಮನಿಸುವರು ಮತ್ತೊಬ್ಬರ       ಸ್ಥಿರವಾಗಿ ಇರುವರು ಬಾಳ ಕೆಣಕಲು ಇನ್ನೊಬ್ಬರ      ಸಹಿಸಲಾರೆ ಕಂತ್ರಿ ಜನರ ಮಂತ್ರ ಕುತಂತ್ರಗಳ      ತಂತ್ರದಲಿ ಜಯಿಸುವೆ ವಿಧ ವಿಧದ ಕರಾಮತ್ತುಗಳ                                       -ಅಂಜಾರು ಮಾಧವ ನಾಯ್ಕ್ 

ನಾ ಮರಾಠಿ

Image
  " ನಾ ಮರಾಠಿ " ಹೆಮ್ಮೆಯಿಂದ ಹೇಳುವೆ ನಾನೊಬ್ಬ ಮರಾಠಿ ಚಿನ್ನದಂತಿರುವೆ ಭೂಮಿತಾಯಿಗೆ ನಮಿಸಿ ಗರ್ವದಿಂದ ಹೇಳುವೆ ನಮ್ಮವರ ಇತಿಹಾಸವನು ಶಿವಾಜಿ ಮಹಾರಾಜನು  ನಮ್ಮವರ ವಂಶಿಕನು  ಗದ್ದುಗೆಯ ಅಮ್ಮ , ಜ್ಯೋತಿಭಾ ,ಅಂಬಾ - ತುಳಜಾ ಭವಾನಿ ನಮ್ಮವರ ಕುಲದೇವರು  ಬೈರವ, ವರ್ತೆ ಪಂಜುರ್ಲಿ ನಮ್ಮನು ಕಾಯ್ವರು  ಪೂಜಿಪೆವು  ದೈವ ದೇವರುಗಳ  ಹಲನಾಮದಿಂದ  ತಾಯ ಕರುಣೆಯು ನಮಗಿಹುದು ಎಂದೂ  ಒಂದಾಗಿ ಬಾಳೋಣ ಪ್ರತಿದಿನವೂ ಮುಂದೂ  ಕೆಣಕದಿರು ಮರಾಠಿಗನ ಮನಸನ್ನು ನೀನು  ಕೆಣಕಿದರೆ ಮಣ್ಣು ಮುಕ್ಕಿಸುವ ವೀರನು ನಾನು  ಎಲ್ಲಾ ಮತ ಬಂಧಗಳ ಸಮ ದೃಷ್ಟಿಯಲಿ ನೋಡುವೆ  ಮೇಲು ಕೀಳೆಂಬ ಭಾವನೆಯ  ಸರಿದೆದ್ದು  ನಿಲುವೆ  ನಾ ಮರಾಠಿ.. ನಾ ಮರಾಠಿ.. ನಾ ಮರಾಠಿ.. ಜೈ ಭವಾನಿ..! ಜೈ ಭವಾನಿ...! ಜೈ ಭವಾನಿ...!                                                - 'ನಾ ಮರಾಠಿ'  ಅಂಜಾರು ಮಾಧವ ನಾಯ್ಕ್ 

ಮಾರುತಿ

ಮಾರುತಿಯ ಬೇಡಿಕೊಂಡೆ ನನಗೆ ಕೀರುತಿಯ ನೀಡೆಂದು ನನ್ನಾಸೆಗೆ  ಓಗೊಟ್ಟು ಮನೆಗಿಂದು ಮಾರುತಿಯು  ಬಂದಿಹನು ಹೂ ತೋರಣದಿ ಸಿಂಗರಿಸಿದೆ ಆರತಿಯ ಬೆಳಗಿದೆ ಕೂಗಿಹೇಳಿದೆ ತಂದೆತಾಯಿಗೆ ಬನ್ನಿ ನೋಡಿ ಎಂದು ಸಂತಸದಿ ಅನುಜರೆಂದರು ಜಯವಾಗಲಿ  ನಿನಗೆಂದೂ ಸುಖವಾಗಿರಲಿ ಪಯಣ ಹರುಷದಿಂ ಮುಂದೂ ಉಲ್ಲಾಸವು ನನಗೆ ಮಾರುತಿಯು ಜೊತೆಗಿರಲು ಮರೆಯಲಾರೆ ಎಂದಿಗೂ ತಲೆಬಾಗಿ ಸ್ಮರಿಸಲು ಪೂಜಿಸುವೆನು ಸದಾ ಮಾರುತಿಯ ಪ್ರೀತಿಯಲಿ ಕಾಣುತಿಹೆ ಅವನ ಮನೆಗೆ ಬಂದ 'ಮಾರುತಿ'ಯಲ್ಲಿ                        - ಅಂಜಾರು ಮಾಧವ ನಾಯ್ಕ್ 

ಬಿಳಿಯೂ ಬೆಳ್ಳಿಯೂ

Image
ಕನ್ನಡಿಯ ನೋಡುತ್ತಿದ್ದಂತೆ ಕಂಡೆನೊಂದು ಬಿಳಿಕೂದಲು ಹೊಳೆಯುತಿತ್ತು ಬೆಳ್ಳಿಯಂತೆ ನನ್ನ ಪ್ರಾಯ ಹೇಳಲು ಆರಂಭದಲಿ ಕತ್ತರಿಯನು ಎತ್ತಿಕೊಂಡೆ , ಬುಡದಲ್ಲೇ ಕಿತ್ತು ಬಿಸಾಕಿದೆ ರಕ್ತಬೀಜಾಸುರನ ಸಂತತಿಯಂತೆ ಕಂಡಿತು ಮತ್ತೊಂದು ! ಬಾಚಣಿಗೆಯ ಕಿಸೆಯಲ್ಲಿ ಹಾಕಿ ನಡೆಯುತ್ತಿದ್ದೆ ದಿನಾಲೂ ಕಾಣದಿರಲೆಂದು ಬಿಳಿಕೂದಲು ಸುಲಭದಲ್ಲಿ ಯಾರಿಗೂ ಗೆಳೆಯನೆಂದನು  ಏನಪ್ಪಾ ಪ್ರಾಯವಾಯಿತಾ ನಿನಗೆ ನಾನೆಂದೆ ತಲೆಯ ಸವರುತ್ತಾ ಇಲ್ಲಪ್ಪಾ ಇದು ಎರಡನೆಯದು ದಿನಕಳೆದಂತೆ ಗೊತ್ತಾಯಿತು ನನಗೆ ಬೆಳ್ಳಿಕೂದಲಿನ ಚೆಲ್ಲಾಟವು ಗೋಜಿಗೆ ಹೋಗದೆ ಒಪ್ಪಿಕೊಂಡೆ  ಬಿಳಿಯೂ ಬೆಳ್ಳಿಯೂ ಒಂದೇ ಎಂದು  ..!!

ಮನೆಯೊಡತಿಯ ಅಡುಗೆ

Image
ಹಸಿದ ಹೊಟ್ಟೆಗೆ ಬಿಸಿ ಬಿಸಿ ದೋಸೆಯ ತಿನ್ನಲು ಕೊಟ್ಟಳು ತಟ್ಟೆಯಲಿ ಸಕ್ಕರೆ ತುಪ್ಪವ ಸವರಿ ಬಡಿಯುತ್ತಿರಲು ಮೂಗಿಗೆ ಗಮ ಗಮ ಪರಿಮಳವು ಸೂಸುತಿರಲು ಬಾಯಲ್ಲಿ ನೀರನು , ಅವಳೆಂದಳು..... ತಿನ್ನಿರಿ ಪ್ರೀತಿಯಲಿ ನಾ ಮಾಡಿದ ಅಡುಗೆಯ ಅನ್ನದಿರಿ ಏನನ್ನು ಹುಳಿ ಕಾರ ಉಪ್ಪನು ನೋಡಿ...!! ಮೊದಮೊದಲು ನಾ ತಿಂದೆ , ಕೊಟ್ಟ ಅಡುಗೆಯ ಸಂತಸದಲಿ ಬರಬರುತ್ತಾ ನಿಪುಣಳಾದಳು ಬಹುವಿಧದ ಅಡುಗೆಯಲಿ....!! ನನಗಾಯಿತು ಸಂತೋಷವು ಹೊಟ್ಟೆ ತುಂಬಿದಾಗಲೆಲ್ಲ..!! ದಿನ ದಿನ ಆಸ್ವಾದಿಸುವೆ ಅಡುಗೆ ಬಗೆ ಬಗೆ ಮುಂದುವರಿಯಲಿ ನನ್ನವಳ ದಿನಚರಿಯ ಅಡುಗೆಯು ನಾ ತರುವೆ ಚೆಂದ ಚೆಂದದ ಉಡುಗೆ -ಉಡುಗೊರೆಯು                                                       - ಅಂಜಾರು ಮಾಧವ ನಾಯ್ಕ್