Posts

Showing posts from August, 2023

(ಲೇಖನ -92)Self- Defensive Driving, ವಾಹನ ಚಾಲಕರು ಸುರಕ್ಷತೆಯ ಬಗ್ಗೆ ಅತೀ ಹೆಚ್ಚು ಗಮನ ಕೊಡಬೇಕು. ಸುರಕ್ಷಿತ ವಾಹನ ಚಾಲನೆ ಪ್ರತಿಯೊಬ್ಬ ಚಾಲಕನ ಜವಾಬ್ದಾರಿ. ಅದರಲ್ಲೂ ಸ್ವಯಂ -ರಕ್ಷಣೆಯ ಚಾಲನೆ ಇನ್ನಷ್ಟು ಒಳಿತು

Image
 (ಲೇಖನ -92) Self- Defensive Driving, ವಾಹನ ಚಾಲಕರು ಸುರಕ್ಷತೆಯ ಬಗ್ಗೆ ಅತೀ ಹೆಚ್ಚು ಗಮನ ಕೊಡಬೇಕು. ಸುರಕ್ಷಿತ ವಾಹನ ಚಾಲನೆ ಪ್ರತಿಯೊಬ್ಬ ಚಾಲಕನ ಜವಾಬ್ದಾರಿ. ಅದರಲ್ಲೂ ಸ್ವಯಂ -ರಕ್ಷಣೆಯ ಚಾಲನೆ ಇನ್ನಷ್ಟು ಒಳಿತು, ಪ್ರಪಂಚದಲ್ಲಿ ಸರಾಸರಿ 3 ನಿಮಿಷಕ್ಕೊಂದು ಸಾವು ವಾಹನ ಅಪಘಾತದಲ್ಲಿ ನಡೆಯುತ್ತದೆ, ಈ ಅಪಘಾತ ದಲ್ಲಿ ಸಂಪೂರ್ಣ ಅಂಗವಿಕಲರಾಗಿ ಚಡಪಡಿಸುತ್ತಿರುವ ಜೀವಗಳು ಲೆಕ್ಕವಿಲ್ಲದಷ್ಟು. ಒಂದೊಂದು ಅಪಘಾತ ಒಂದೊಂದು ಸಂಸಾರ ನಾಶಪಡಿಸಿದಂತೆ. ಕೈ ಕಾಲು, ಕಣ್ಣು, ಮೆದುಳು, ಅಂಗಾಂಗಗಳ ಚಲವಲನವಿಲ್ಲದೆ ಇರುವ ಅದೆಷ್ಟೋ ಜೀವಗಳು ಆಸ್ಪತ್ರೆಗಳಲ್ಲಿ ಒದ್ದಾಡುತ್ತಿವೆ, ತಂದೆ, ತಾಯಿ, ಮಕ್ಕಳು, ಸಂಬಂಧಗಳಲ್ಲಿ ಅದೆಷ್ಟೋ ಜೀವಗಳು ಕಳೆದುಕೊಂಡ ಸಂಸಾರಗಳು ದಿನಾಲೂ ಕಣ್ಣೀರಿನ ಜೀವನ ತೆಗೆಯುವಂತೆ ಆಗಿರುವ ಘಟನೆಗಳು ಸಾವಿರಾರು. ಅಮ್ಮ ನಾನೀಗ ಬರುತ್ತೇನೆ ಎಂದು ಹೇಳಿ ಹೋದ ಜೀವ ಮತ್ತೆ ಬರಲೇ ಇಲ್ಲ, ಅಪ್ಪ ಹೋಗಬೇಡ ಮಗನೇ ಎಂದು ಹೇಳಿದರೂ ಹೇಳದೇ ಕೇಳದೆ ಹೋದ ಜೀವ ಹೆಣವಾಗಿ ಮನೆಗೆ ಬಂದಾಗ ಆಗುವ ಸಂಧರ್ಭ ಊಹಿಸಲಾಸಧ್ಯ. ಮೋಜು ಮಸ್ತಿಗಾಗಿ, ಅತಿವೇಗದ ಚಾಲನೆಯಿಂದ ನಜ್ಜುಗುಜ್ಜಾಗಿ ದೇಹದ ಭಾಗಗಳನ್ನು ಚೀಲದಲ್ಲಿ ತುಂಬಿಸಿ ಸಾಗಿಸಿದ ಅನೇಕ ಉದಾಹರಣೆಗಳನ್ನು ಆಂಬುಲೆನ್ಸ್ ಓಟಗಾರರಲ್ಲಿ ಕೇಳಬೇಕು. ಬದುಕೆನ್ನುವುದು ಒಂದು ಸಲ ಮಾತ್ರ ಸಿಗುವುದು, ಆ ಜೀವವನ್ನು ಅಪಘಾತದಲ್ಲಿ ಕಳೆದುಕೊಂಡ ನಿದರ್ಶನ ನೀವುಗಳು ನೋಡುತ್ತಲೇ ಇರುತ್ತಿರಿ ನೋಡಿ ಮರೆಯುತ್ತಿರಿ. ದಿನ ಪ

(ಲೇಖನ -91)ಸಮುದ್ರದೊಳಗಿನ ಕಸವಾಗುವುದಕ್ಕಿಂತ ಬಾವಿಯೊಳಗಿನ ಕಪ್ಪೆಯಾಗುವುದೇ ಲೇಸು, ಪ್ರಪಂಚ ಬಹಳ ದೊಡ್ಡದು,

Image
(ಲೇಖನ -91) ಸಮುದ್ರದೊಳಗಿನ  ಕಸವಾಗುವುದಕ್ಕಿಂತ  ಬಾವಿಯೊಳಗಿನ  ಕಪ್ಪೆಯಾಗುವುದೇ ಲೇಸು, ಪ್ರಪಂಚ ಬಹಳ ದೊಡ್ಡದು , ಯಾವುದು ಸರಿ ಯಾವುದು ತಪ್ಪು ಅನ್ನೋದನ್ನ  ಕಲಿಯುವಷ್ಟರಲ್ಲಿ  ನಮ್ಮ ಜೀವನವೇ  ಮುಗಿದು ಹೋಗುತ್ತದೆ. ಕೆಲವರ ಬದುಕು ಅಲ್ಪಸಮಯ, ಕೆಲವರ ಬದುಕು  ದೀರ್ಘವಾಗಿ ನಡೆಯುತ್ತಿರುತ್ತದೆ, ಆದರೆ ಜೀವನದಲ್ಲಿ ಮಾಡುವ  ಚಿಕ್ಕ ಸಾಧನೆ  ಅಥವಾ ದೊಡ್ಡ ಸಾಧನೆ ಆ ವ್ಯಕ್ತಿಯ ಜೀವನವನ್ನು  ಸಾರ್ಥಕಗೊಳಿಸುತ್ತದೆ. ಸಾಧನೆ ಎಂಬ ನೆಪದಲ್ಲಿ ಅವ್ಯವಹಾರಗಳಲ್ಲಿ  ತೊಡಗಿಸಿಕೊಂಡು  ಮಾಡುವ ಸಾಧನೆ ಒಂದೆಡೆಯಾದರೆ, ಯಾವುದೇ  ಬಯಕೆಗಳಿರದೇ  ನಿಸ್ವಾರ್ಥವಾಗಿ  ಮಾಡುವ ಸಾಧನೆಗಳು  ಇನ್ನೊಂದು ಕಡೆ ಇರುತ್ತದೆ. ತಾನು ಸಾಧಿಸಿದ್ದೇನೆ  ಎಂದು ತೋರ್ಪಡಿಸಿಕೊಳ್ಳುವವರು ಒಂದು ಸಂದರ್ಭದಲ್ಲಿದ್ದರೆ, ಎಷ್ಟು ದೊಡ್ಡ ಸಾಧನೆ ಮಾಡಿದರೂ ನಾನು ಮಾಡಿರುವ ಕೆಲಸ ಏನೂ ಅಲ್ಲ ಹೇಳುವ ಮಹಾನ್ ವ್ಯಕ್ತಿಗಳು ಕೂಡ ಈ ಸಮಾಜದಲ್ಲಿದ್ದಾರೆ. ನಮ್ಮ ಪ್ರಪಂಚವನ್ನು ನಾವೇ ಸೃಷ್ಟಿ ಮಾಡಿಕೊಳ್ಳುವ  ಕಲೆಯನ್ನು ಕಲಿಯಬೇಕು ಇಲ್ಲವಾದಲ್ಲಿ ನಕಾರಾತ್ಮಕ ಜನ ಮತ್ತು ಘಟನೆಗಳ ನಡುವೆ ಬದುಕು ದುಸ್ತರವಾಗುತ್ತದೆ. ಜೀವನ ಹರಿಯುವ ನದಿಯಂತೆ ಇರಬೇಕೆಂದು ಬಯಸಿದರೂ ಒಮ್ಮೊಮ್ಮೆ ಇರಲಾಗುವುದಿಲ್ಲ, ಸುಮ್ಮನೆ ಜೀವನದಿ ಹರಿಯುತ್ತಿದ್ದಂತೆ ಬದುಕನ್ನು ನಿಲ್ಲಿಸುವ ಪ್ರಯತ್ನಕ್ಕೆ ಕೈ ಹಾಕುವ ಜನರು ಜೀವನದ ಹಾದಿಯಲ್ಲಿ ಸಿಗುತ್ತಾ ಇರುತ್ತಾರೆ. ಬಹುತೇಕ ಅಸೂಯೆವುಳ್ಳ ಮನುಷ್ಯರು ಅನ್ಯರ ಕಾಳೆಳೆಯುವುದನ್ನೇ ತನ್

ಬೇಲೂರ ಶಿಲಾಬಾಲೆ

ಅಂದದ ಹೂ ಬಳ್ಳಿ ನೀ  ಚೆಂದದ ಚೆಂದುಳ್ಳಿ ಸೌಂದರ್ಯವ ಹುದುಗಿಟ್ಟು ನಲಿವ ನವಿಲೇ ನೀ ಬೇಲೂರ ಶಿಲಾಬಾಲೆಯೂ ನಾಚುವ ಮೈಕಟ್ಟಿಗೆ ಸ್ವರ್ಗದ ಆಸ್ಥಾನವೇ ನಿನಗೆ ಕನಸಿನ ರಾಣಿಯೇ ನೀ, ನಿಂತಾಗ ಕುಳಿತಾಗ ಪುಟ್ಟ ಹೆಜ್ಜೆಯ ನೀನಿಟ್ಟಾಗ ಬಿಗಿದಪ್ಪಿ ಮುದ್ದು ಮಾಡಲೇ  ನನ್ನ  ಹೃದಯವೇ ನೀ,           ✍️ಮಾಧವ. ಕೆ. ಅಂಜಾರು             

(ಲೇಖನ -90)ರಾಜ್ಯದ ಜನತೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ವ್ಯವಸ್ಥೆಯ ಅವ್ಯವಸ್ಥೆಯಿಂದ ಭರವಸೆಯನ್ನು ಕಳೆದುಕೊಳ್ಳುತ್ತಾ ಇದ್ದಾರೆಯೇ?

Image
 (ಲೇಖನ -90) ರಾಜ್ಯದ ಜನತೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ವ್ಯವಸ್ಥೆಯ ಅವ್ಯವಸ್ಥೆಯಿಂದ ಭರವಸೆಯನ್ನು ಕಳೆದುಕೊಳ್ಳುತ್ತಾ ಇದ್ದಾರೆಯೇ? ಎಲ್ಲಿಗೆ ಹೋದರೂ ಅನ್ಯಾಯಗಳ ನಡುವೆ ನ್ಯಾಯವೆಂಬುದು  ದುರ್ಬಲರಿಗೆ ಮರೀಚಿಕೆಯಾಗುತ್ತಿದೆಯೇ? ಪ್ರಭಾವಿಗಳ  ಪ್ರಭಾವಕ್ಕೆ ಒಳಗಾಗಿ ನಮ್ಮ ವ್ಯವಸ್ಥೆಗಳು  ಅಲ್ಲೋಲಕಲ್ಲೋಲವಾಗುತ್ತಿದೆಯಾ? ಅನ್ಯಾಯಕ್ಕೆ ಒಳಗಾದ  ಜನರು ನ್ಯಾಯದ ಮೆಟ್ಟಿಲು ಹತ್ತಿದಾಗ ನ್ಯಾಯ ಸಿಗುತ್ತಿಲ್ಲವೇ? ಅಧಿಕಾರಿಗಳಿಗೆ ಗುಣಮಟ್ಟದ ಯೋಚನೆಗಳ ಕೊರತೆ ಇದೆಯೇ? ಸರ್ಕಾರಿ ಸಂಬಳ ಹೊರತಾಗಿ ಇನ್ನಷ್ಟು ಹಣದಾಸೆಗೆ ಅಡ್ಡ ದಾರಿ ಹಿಡಿಯುವವರ ಸಂಖ್ಯೆ ಶೇಕಡಾ ಎಂಬತ್ತಕ್ಕಿಂತಲೂ ಜಾಸ್ತಿ ಆಗಿದೆಯೇ? ಭ್ರಷ್ಟಾಚಾರ ಬುಡಮೇಲಿಂದ ಕಿತ್ತು ಹಾಕುವ ಬದಲು ಭ್ರಷ್ಟಾಚಾರವೇ ಹೆಮ್ಮರವಾಗಿ ಬೆಳೆದು ಬಿಟ್ಟಿದೆ ಅನಿಸುತ್ತಿಲ್ಲವೇ? ಸಾಮಾನ್ಯ ಜನರು ಈ ಎಲ್ಲಾ ತೊಂದರೆಗಳಿಗೆ ಬಲಿಯಾಗಿ ತಮ್ಮ ಜೀವನದಲ್ಲಿ ಎಷ್ಟು ಕಷ್ಟ ಪಟ್ಟಿರಬಹುದು ಅಲ್ಲವೇ? ಹುಟ್ಟಿನಿಂದ ಸಾಯುವವರೆಗೂ ವಿವಿಧ ತರಹದ ದಬ್ಬಾಳಿಕೆ, ಬೇಡಿಕೆ, ಸುಲಿಗೆ, ಬೆದರಿಕೆಗಳಿಗೆ ಒಳಗಾಗಿ ಬೇಸತ್ತು ಊರು ಬಿಟ್ಟ ಜನಗಳ ಲೆಕ್ಕ ಸಿಗಲು ಸಾಧ್ಯವಿದೆಯೇ? ನಂಬಿಕೆಗಳನ್ನು ವ್ಯಾಪಾರಿಕರಣ ಮಾಡಿ ಜನರನ್ನು ಇನ್ನಷ್ಟು ತೊಂದರೆಗಳಿಗೆ ಸಿಲುಕಿಸಿ, ಅಲ್ಲಿ ದೇವರುಗಳು ಕಾಪಾಡದೆ ಇಲ್ಲಿ ವ್ಯವಸ್ಧೆಗಳು ಕೂಡ ಕಾಪಾಡದೆ ಅದೆಷ್ಟು ಬಡ ಜೀವಗಳು ನಶಿಸಿ ಹೋಗಿರಬಹುದು ಅಲ್ಲವೇ? ಇದಕ್ಕೆಲ್ಲ ಹೊಣೆ ಯಾರು ಹೇಳುತ್ತೀರಾ? ಹಾಗೆ ಹೇಳಬೇಕಾಗಿಲ್ಲ

ಕೈ ಬೀಸಿ ಕರೆದ ಚಂದಿರಮಾಮ,

ಭರತ ಭೂಮಿಯ ಚಂದಿರ ಯಾನ ಜಗವೇ ಮೆಚ್ಚಿದ ಸುಂದರ ಯಾನ ದಣಿವರಿಯದ ಇಸ್ರೋ ನಡೆಗೆ ಮಣಿದುಬಿಟ್ಟನೆ? ಸುಂದರಜಾಣ! ಅದೆಷ್ಟು ಸುಂದರ ಚಂದಿರನಂಗಳ ಭರತ ಖಂಡಕೆ ನೀಡಿತು ಮಂಗಳ ಪ್ರಗ್ಯಾನ್ ಪಾದದ ಪುಟ್ಟ ನಡೆಗೆ ನಕ್ಕು ನಲಿದಾಡಿದ ನಮ್ಮಯ ಚಂದಿರ ಮರಿಮಕ್ಕಳ ಚೆಂದಮಾಮ ಇನ್ನೂ ಹತ್ತಿರ ನಮ್ಮಯ ಮಾಮ ಅಮಾವಾಸ್ಯೆ ಹುಣ್ಣಿಮೆಯೆನ್ನದೆ ಕೈ ಬೀಸಿ ಕರೆದ ಚಂದಿರಮಾಮ, ಭಾರತ ದೇಶಕೆ ತವರೂರಾಯ್ತು  ಭುವಿಯ ನೆಚ್ಚಿನ ಚಂದಮಾಮ  ಇನ್ನು ಭಯವಿಲ್ಲ ನಿನ್ನಲಿ ಮಾಮ ಭರವಸೆ ನಿನ್ನಲಿ ಬರುವೆ ನಾ ಮಾಮ! ಹರಸುತ್ತಿರು ಭಾರತಮಣ್ಣಿಗೆ ಸಿಗುತ್ತಲಿರು ಭಾರತೀಯರ ಕಣ್ಣಿಗೆ ಇಂದು ಮುಂದು ಎಂದೆಂದೂ ಕರೆಯೋಲೆಯ ಕೊಡುತ್ತಿರು ಇಸ್ರೋ ವಿಜ್ಞಾನಿಗಳಿಗೆ! ಬರುತ್ತಾಲಿರಲಿ ಸುಂದರ ಘಳಿಗೆ ಕನಸಿನ ಮನೆಗೆ ನಿನ್ನಯ ಕೊಡುಗೆ ನಮ್ಮೊಂದಿಗಿರಲಿ ನಿನ್ನ ಪ್ರೀತಿಯ ನಗೆ.                ✍️ಮಾಧವ. ಕೆ. ಅಂಜಾರು 

(ಲೇಖನ 89)ದೇವರಿಗೆ ಹೆದರದವರು ಆಣೆ ಪ್ರಮಾಣಕ್ಕೆ ಹೆದರುತ್ತಾರೆಯೇ? ಪಾಪ ಕರ್ಮವನ್ನು ಪಾಲಿಸದವರು ಅನ್ಯಾಯ ಮಾಡದೇ ಇರುತ್ತಾರೆಯೇ?

Image
(ಲೇಖನ -89)ದೇವರಿಗೆ ಹೆದರದವರು ಆಣೆ ಪ್ರಮಾಣಕ್ಕೆ ಹೆದರುತ್ತಾರೆಯೇ? ಪಾಪ ಕರ್ಮವನ್ನು ಪಾಲಿಸದವರು ಅನ್ಯಾಯ ಮಾಡದೇ ಇರುತ್ತಾರೆಯೇ? ಇನ್ನೊಬ್ಬರ ನೋವನ್ನೇ ಅರಿದಯವರು ದಯೆ ದಾಕ್ಷಿಣ್ಯ ಹೊಂದಿರುತ್ತಾರೆಯೇ? ಅತಿಯಾಸೆ ಇರುವವರು ಹೊಂದಾಣಿಕೆ ಬಯಸುವರೇ? ನಾನು ನನ್ನದು ಹೇಳುವವರು ನೆಮ್ಮದಿಯಾಗಿ ಜೀವಿಸುತ್ತಾರೆಯೇ? ಇಲ್ಲ..... ಇಲ್ಲವೇ ಇಲ್ಲ. ಪ್ರಪಂಚದಲ್ಲಿ ನಡೆಯುತ್ತಿರುವ ಅದೆಷ್ಟೋ ಘಟನೆಗಳು, ಅನ್ಯಾಯ, ಅತ್ಯಾಚಾರ, ಕೊಲೆ, ಬೆದರಿಕೆಗಳು ಈ ಮೇಲಿನ ವಿಚಾರಗಳನ್ನು ಹೊಂದಿರದೆ ಇರುವವರು. ತೊರ್ಪಡಿಕೆಗೆ ಪೂಜೆ, ಪ್ರಾರ್ಥನೆ, ಸಮಾಜ ಸೇವೆಯನ್ನ ಮಾಡುತ್ತ ಪರದೆಯ ಹಿಂದೆ ಮಾಡುವ ಅನಾಚಾರ ಸಾಮಾನ್ಯ ಜನರಿಗೆ ಗೊತ್ತಾಗುವುದಿಲ್ಲ. ಭಯ ಭಕ್ತಿಯನ್ನು ವ್ಯಾಪಾರಿಕರಣ ಮಾಡಿರುವ ಘಟನೆಗಳು ಅಲ್ಲಲ್ಲಿ ನೀವುಗಳು ನೋಡುತ್ತಿರಬಹುದು. ಬಡವರಲ್ಲಿ ಇರುವ ದೇವರ ಭಯ ಭಕ್ತಿ ಹೆಚ್ಚಿನ ಸಿರಿವಂತರಲ್ಲಿ ಕಾಣುವುದಿಲ್ಲ. ಬಡವನಾಗಿದ್ದಾಗ ಇದ್ದ ಭಯ ಭಕ್ತಿ ಹೆಚ್ಚಿನವರು ಸಂಪಾದನೆ ಮಾಡಿದ ಮೇಲೆ ದೇವರನ್ನೇ ಮರೆಯುವ ಜನರೂ ಇದ್ದಾರೆ. ಒಂದು ಕಡೆ ದೇವರೇ ಇಲ್ಲ ಎನ್ನುವ ಜನ, ಇನ್ನೊಂದೆಡೆ ದೇವರಿದ್ದಾನೆ  ಎನ್ನುವ ಜನ, ಇನ್ನೊಂದೆಡೆ ನಮ್ಮದೇ ದೊಡ್ಡ ದೇವರುಗಳು ಎಂದು ಪ್ರತಿಪಾದಿಸುವ ಅದೆಷ್ಟೋ ಜನ. ಈ ಪ್ರಪಂಚದಲ್ಲಿ ಅನೇಕ ರೀತಿಯ ಆಚರಣೆ ವಿಚಾರಗಳ ನಡುವೆ ನಡೆಯಲೇ ಬಾರದ ವಿಷಯಗಳು ನಡೆಯುತ್ತಲೇ ಇರುತ್ತದೆ.           ಅಧಿಕಾರಕ್ಕಾಗಿ, ಆಸೆಗಾಗಿ, ಸಂಪತ್ತಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗ

ಬಣ್ಣದ ಚಿಟ್ಟೆ

ಬಿಳಿ ಬಣ್ಣದ ಚಿಟ್ಟೆ ನಾ ನೋಡಿ ಬಿಟ್ಟೆ ಅಲ್ಲೋಮ್ಮೆ ಇಲ್ಲೊಮ್ಮೆ ಹಾರುವುದನು ಕಂಡಾಗ ಹೂವ ಗಿಡವನು ನೆಟ್ಟುಬಿಟ್ಟೆ, ಇಂದಲ್ಲ ನಾಳೆ ಬರಬಹುದು ಚಿಟ್ಟೆ ಮಕರಂದವ ಹೀರಿ ಬದುಕಲಿ ಸುಂದರ ಚಿಟ್ಟೆ ಇನ್ನಷ್ಟು ಹೂದೋಟ  ಮಾಡುವ ಕನಸನ್ನು ಕಂಡು ಬಿಟ್ಟೆ, ಬರುತ್ತಿರಲಿ ಆ ಸುಂದರ ಚಿಟ್ಟೆ  ಮತ್ತೆ ಮತ್ತೆ ಸಿಗಲಿ ಬಣ್ಣದ ಮುದ್ದಿನ ಚಿಟ್ಟೆ.           ✍️ಮಾಧವ. ಕೆ ಅಂಜಾರು 

ಹೇಗಿರಬೇಕೆಂದೂ ತಿಳಿಯುತ್ತಿಲ್ಲ

ನಗಬೇಕೆಂದರೂ ನಗಲಾಗುತ್ತಿಲ್ಲ ಅಳಬೇಕೆಂದರೂ ಅಳಲಾಗುತ್ತಿಲ್ಲ ಜಗದೊಳು ನಡೆಯುವ ನಾಟಕವ ಕಾಣುತ್ತಿರೆ  ಹೇಳಬೇಕೆಂದರೂ ಹೇಳಲಾಗುತ್ತಿಲ್ಲ, ಸಹಿಸಬೇಕೆಂದರೂ ಸಹಿಸಲಾಗುತ್ತಿಲ್ಲ ಅಳಿಸಬೇಕೆಂದರೂ ಅಳಿಸಲಾಗುತ್ತಿಲ್ಲ ಜೀವನದೊಳು ಬರುವ  ಪಾಪಿಗಳ  ಕಾಣುತಿರೆ ದಮನಿಸಬೇಕೆಂದರೂ ದಮನಿಸಲಾಗುತ್ತಿಲ್ಲ, ಉಳಿಸಬೇಕೆಂದರೂ ಉಳಿಸಲಾಗುತ್ತಿಲ್ಲ ಕಲಿಸಬೇಕೆಂದರೂ ಕಲಿಸಲಾಗುತ್ತಿಲ್ಲ ಜಗದೊಡೆಯ ನಿನ್ನ ಆಟವ ನೋಡುತಿರೆ ಹೇಗಿರಬೇಕೆಂದೂ ತಿಳಿಯುತ್ತಿಲ್ಲ!              ✍️ಮಾಧವ. ಕೆ. ಅಂಜಾರು 

ಸುಂದರ ನಗುವಿಗಾಗಿ

ತುಂತುರು ಮಳೆಗೆ ಹರಿಯೋ ನೀರಂತೆ ಒಡೆದ ಹೃದಯಕೆ ಬೆಸೆಯುವ ಮನಸಿನಂತೆ ಮುಂಜಾನೆಯ ಬೆಳಕಿಗೆ ನೀ ನಗುವ ಚೆಲ್ಲುವಂತೆ ನಾಳೆಯ ಕನಸಿಗೆ ಹೂವ ಹಾಸಿಗೆಯಂತೆ ನೀ ನನ್ನ ಜೊತೆಗಿರು ಜೀವದ ಉಸಿರಂತೆ, ಚಿಗುರಿದ ಬಳ್ಳಿಗೆ ನಿಲ್ಲುವ ಮರವಾಗಿ ಬಾಡುವ ಹೂವಿಗೆ ಕದಡದ ನೆರಳಾಗಿ ಸೇವಕನಾಗಿ ಕಾಯುವೆ ನಿನ್ನ ಸುಂದರ ನಗುವಿಗಾಗಿ.            -ಮಾಧವ. ಕೆ. ಅಂಜಾರು