(ಲೇಖನ -66)ಹಣದುಬ್ಬರ ವೆಂದರೆ ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ.
(ಲೇಖನ -66) - ಹಣದುಬ್ಬರ - ಹಣದುಬ್ಬರ ವೆಂದರೆ ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ. ದಿನದಿಂದ ದಿನಕ್ಕೆ ದಿನೋಪಯೋಗಿ ವಸ್ತುಗಳ ಬೆಲೆಗಳು ಏರುತ್ತಲೇ ಇದೆ. ಇದಕ್ಕೆ ಕಾರಣ ಹಲವಾರು, ಆದರೆ ಹಣದುಬ್ಬರವನ್ನು ಹತೋಟಿಯಲ್ಲಿಡುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆ ಅಥವಾ ಉತ್ತಮ ಬುದ್ಧಿವಂತ ಮತ್ತು ಜ್ಞಾನವುಳ್ಳ ಹಣಕಾಸು ಮಂತ್ರಿಗಳಿಗೆ ಅಥವಾ ಪ್ರಧಾನಮಂತ್ರಿಗಳಿಗೆ ಹಾಗೂ ಜವಾಬ್ದಾರಿಯುತ ಪ್ರಜೆಗಳಿಂದ ಕೂಡಿರುತ್ತದೆ. ಹಣದುಬ್ಬರಕ್ಕೆ ನೇರ ಮತ್ತು ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಇದರಲ್ಲಿ ಸರ್ಕಾರದ ಆಡಳಿತದ ರೀತಿ ಬಹಳ ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಭಾರತೀಯರು ತಾವು ಖರೀದಿಸುವ ಪ್ರತಿಯೊಂದು ವಸ್ತುಗಳಲ್ಲಿ ತೆರಿಗೆ ಮೂಲಕ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ ಆದರೆ ಪಾವತಿ ಮಾಡಿದ ತೆರಿಗೆ ಜನರಿಗೆ ಎಷ್ಟರಮಟ್ಟಿಗೆ ತಲುಪುತ್ತಿದೆ ಎನ್ನುವುದು ನಿಗೂಢವಾಗಿಯೇ ಇರುತ್ತದೆ. ಸರ್ಕಾರ ಹಲವಾರು ಸವಲತ್ತು ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡುತ್ತಿರುತ್ತದೆ, ಬಿಡುಗಡೆಯಾದ ಹಣ ಪೂರ್ಣವಾಗಿ ಪ್ರಜೆಗಳ ಕೈ ...