Posts

Showing posts from July, 2019

ಆಗಬೇಕಾದದ್ದು

ಆಗಬೇಕಾದದ್ದು ಆಗಿಯೇ ಆಗುತ್ತೆ , ಸಮಯ ಬಂದಾಗ ..! ಹೋಗಬೇಕಾದದ್ದು ಹೋಗಿಯೇ ಹೋಗುತ್ತೆ ಸಮಯ ನಿಲ್ಲದಾಗ . ಸಿಗಬೇಕಾದದ್ದು ಸಿಕ್ಕಿಯೇ ಸಿಗುತ್ತೆ ಸಮಯ ಇರುವಾಗ, ಆಗೋದಕ್ಕೂ ಹೋಗೋದಕ್ಕೂ ಸಿಗೋದಕ್ಕೂ ಬಿಡೋದಕ್ಕೂ ನಿಲ್ಲಿಸೋಕು  ನಮ್ಮಿಂದ ಸಾಧ್ಯವಿಲ್ಲ ಕೈಮೀರಿ ಹೋದಾಗ ....!            -ಮಾಧವ ಅಂಜಾರು

ಆಸೆಬುರುಕನ ಆಸೆ

ಆಸೆಬುರುಕನ ಆಸೆ ಮುಗಿದುಹೋಗದು ಬೆಳ್ಳಗಾದರೂ ಅವನ ಮೀಸೆ , ಮೋಸಗಾರನ ಕಿಸೆ ತುಂಬಲಾರದು ಚರಂಡಿಯೊಳು ಬಿದ್ದರೂ ಇಳಿಯದು ಅವನ ನಶೆ ,           - ಮಾಧವ ಅಂಜಾರು

ನಮ್ಮ ದೇಶದಲ್ಲಿ

ನಮ್ಮ ದೇಶದಲ್ಲಿ ಪ್ರಾಮಾಣಿಕತೆಗೆ ಬೆಲೆ ಕೊಡುವವರು ಬಹಳ ವಿರಳ ...! ತಮ್ಮ ಸ್ವಾರ್ಥಕ್ಕಾಗಿ ಸರಕಾರಿ ಉದ್ಯೋಗದ ದುರುಪಯೋಗ ಹಣ ಸಂಪಾದನೆಗೆ ಲಂಚಾವತಾರದ ಯೋಗ , ಎಷ್ಟು ಕೆಳಮಟ್ಟದಲ್ಲಿ ಅವರ ಬದುಕೆಂದರೆ ನ್ಯಾಯ ಕೊಡಿಸಬೇಕಾದವರು ಅನ್ಯಾಯ ಮಾಡುವರು ರಕ್ಷಕನಾಗಿ ಇರಬೇಕಾದವರು ಭಕ್ಷಕನಾಗಿ ಬದುಕುವರು, ಧಿಕ್ಕಾರವಿರಲಿ ಅಪ್ರಾಮಾಣಿಕರಿಗೆ ನರಕ ಯಾತನೆ ಸಿಗಲಿ ವಂಚನೆ ಮಾಡುವವರಿಗೆ, ಬೆಲೆ ಸಿಗಲಿ ಪ್ರಾಮಾಣಿಕರಿಗೆ ,                     -ಮಾಧವ ಅಂಜಾರು

ನಾವೆಲ್ಲಾ ಒಂದು

ನಾವೆಲ್ಲಾ ಒಂದು ನಾವೆಲ್ಲರೂ ಒಂದೇ ಎಂದು ಕೇಳಿಬರುತ್ತಿದೆ ಅಲ್ಲಲ್ಲಿ ಇಂದು ನಾವೆಲ್ಲಿ ಇಂದು? ನಮ್ಮವರೆಲ್ಲ ಇಲ್ಲವೆಂದು ಹುಟ್ಟಿಸುತಿದ್ದಾರೆ ಹನ್ನೊಂದು ! ಸಂಘಗಳ ಬಿಂದು. ನಾವೆಲ್ಲರೂ ಇಂದು ಒಂದಾಗಬೇಕು ಎಂದು ಕೇಳುತ್ತಿದ್ದೇವೆ ನಿಂದು ಮತ್ತದೇ ! ನೀನೇನು ಇಲ್ಲಿ ಎಂದು?            -ಮಾಧವ ಅಂಜಾರು

ಭಕ್ತಿಯನು ಹುಂಡಿಗೆ ಹಣಹಾಕಿ

ಭಕ್ತಿಯನು ಹುಂಡಿಗೆ ಹಣಹಾಕಿ ವ್ಯಕ್ತಪಡಿಸಬೇಕಾಗಿಲ್ಲ ..! ನಿಮ್ಮ ಬೇಡಿಕೆ ಈಡೇರಿಸಲು ಪ್ರತೀ ಧರ್ಮದವರು ನಿಮ್ಮ ದೇವರಿಗೆ ಲಂಚ ಕೊಡಬೇಕಾಗಿಲ್ಲ... ! ನಿಮ್ಮ ಯುಕ್ತಿಯನು - ಬಡವರ ಮೇಲೆ ತೋರಿಸಬೇಕಾಗಿಲ್ಲ ..! ಅತೀ ಶಕ್ತಿಯನು ಕೈಲಾಗದವರ ಮೇಲೆ ತೋರಿಸೋದು ಸಲ್ಲ ಅದು , ಜೀವನವೇ ಅಲ್ಲ ..! ಕೊಡುವವನೇ ದೇವರು .. ಬೇಡುವವನೇ ಭಕ್ತ ... ! ಕೊಡುವವನು ನೀನಾಗು ಬೇಡುವವನೂ  ನೀನಾಗು ಆದರೆ,ಭಕ್ತ ಕೊಟ್ಟ ಕಾಣಿಕೆ ಹುಂಡಿ ತುಂಬೋದೇ ಇಲ್ಲ ...!     -ಮಾಧವ ಅಂಜಾರು

ದಿನಕ್ಕೆ ಹತ್ತು ನಿಮಿಷ

ದಿನಕ್ಕೆ ಹತ್ತು ನಿಮಿಷ ದೇಶ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ಈಶ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ಜನ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ಬಡವರ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ನಿಮ್ಮ ಸೇವೆಗಾಗಿ ದಿನಕ್ಕೆ ಹತ್ತು ನಿಮಿಷ ನಮ್ಮದೇ  ಸೇವೆಗಾಗಿ              -ಮಾಧವ ಅಂಜಾರು

ನಿಮ್ಮ ಜಾತಿಯವನೊಬ್ಬ

ನಿಮ್ಮ ಜಾತಿಯವನೊಬ್ಬ ಚುನಾವಣೆ ಸ್ಪರ್ದಿಸುತ್ತಿದರೆ ನಮ್ಮ ಜಾತಿಯವನೆಂದು ...! ಮತವನ್ನು ಹಾಕಬೇಡಿ .. ನಿಮ್ಮ ಧರ್ಮದವನೊಬ್ಬ ಚುನಾವಣೆ ಸ್ಪರ್ದಿಸುತ್ತಿದ್ದರೆ ನಮ್ಮ ಧರ್ಮದವನೆಂದು ಮತವನ್ನು ಹಾಕಲೇಬೇಡಿ ಜಾತಿ , ಮತ ಯಾವುದೇ ಇರಲಿ ದೇಶಕ್ಕಾಗಿ ಸ್ಪರ್ದಿಸುತ್ತಿದ್ದರೆ ಭಾರತ ಮಾತೆಗೆ ನಮಿಸಿ ನಿಮ್ಮ ಮತವನ್ನು ಚಲಾಯಿಸಿ ..!            -ಮಾಧವ ಅಂಜಾರು

ಸಮಾಜವೇ ಹಾಗೆ

ಸಮಾಜವೇ ಹಾಗೆ ತಪ್ಪು ಮಾಡದಿದ್ದರೂ ತಪ್ಪಿತಸ್ಥನೆಂದು ಬಿಂಬಿಸುತ್ತಾರೆ ಕಳ್ಳತನ ಮಾಡದಿದ್ದರೂ ಕಳ್ಳನೆಂದು ಹೇಳುತ್ತಾರೆ ಸುಳ್ಳು ಹೇಳದಿದ್ದರೂ ಸುಳ್ಳನೆಂದು ಹೇಳುತ್ತಾರೆ ಸಮಾಜವೇ ಹಾಗೆ ನಿಮ್ಮಿಷ್ಟಕ್ಕೆ ಇದ್ದರೂ ವಕ್ರ ದೃಷ್ಟಿಲಿ ನೋಡುತ್ತಾರೆ ನಗುನಗುತ್ತಾ ಇದ್ದರೆ ಚಿಂತೆ ಇರದವನು ಅನ್ನುತ್ತಾರೆ ಅಳುತ್ತಾ ಇದ್ದರೆ ಪುಕ್ಕಲನೆನ್ನುತ್ತಾರೆ.... -ಮಾಧವ ಅಂಜಾರು

ಅಲ್ಲಿ ಅಧಿಕಾರ ಉಳಿಸಿಕೊಳ್ಳಲು

ಅಲ್ಲಿ ಅಧಿಕಾರ ಉಳಿಸಿಕೊಳ್ಳಲು ರೆಸಾರ್ಟುಗಳಿಗೆ ಓಡಾಟ ಇಲ್ಲಿ ಸರಕಾರಿ ಕಛೆರಿಗೆ ಜನರರೆಲ್ಲರ ಓಡಾಟ ಕೆಲಸವೇ ಆಗದೇ ದಿನವೆಲ್ಲಾ ಪರದಾಟ ಅಲ್ಲಿ ಅಧಿಕಾರ ಗಳಿಸಿಕೊಳ್ಳಲು ಮಂತ್ರಿಗಳ ತಿಕ್ಕಾಟ ಇಲ್ಲಿ ಜನಸಾಮಾನ್ಯರಿಗೆ ಸಿಗುತ್ತಿಲ್ಲ ಒಂದು ಹೊತ್ತಿನೂಟ ಕೆಲಸವೇ ಸಿಗದೇ ದಿನಪೂರ್ತಿ ಕಷ್ಟ ನಷ್ಟ ಅಲ್ಲಿ ಅಧಿಕಾರ ಪಡೆದುಕೊಂಡು ನಡೆಯುತ್ತಿದೆ ರಂಪಾಟ ಇಲ್ಲಿ ವೋಟು ಕೊಟ್ಟವನಿಗೊಂದು ಪಾಠ ಮಂತ್ರಿಗಳ ಕೈಲಿ ದೊಡ್ಡ ಪೇಟ ಮತದಾರನ ಕೈಗೆ ಕೊಟ್ಟರು ಗೂಟ - ಮಾಧವ ಅಂಜಾರು

ಅನ್ಯರ ಉದ್ದಾರಕ್ಕೆ

ಅನ್ಯರ ಉದ್ದಾರಕ್ಕೆ ಕಾರಣರಾದರೆ ಪರವಾಗಿಲ್ಲ ಅನ್ಯರ ಅವನತಿಗೆ ಕಾರಣರಾಗಬೇಡಿ ಅನ್ಯರ ನಗುವಿಗೆ ಕಾರಣರಾದರೆ ಪರವಾಗಿಲ್ಲ ಅನ್ಯರ ಅಳುವಿಗೆ, ಕಾರಣರಾಗಬೇಡಿ ಅನ್ಯರ ಪ್ರೀತಿಗೆ ಕಾರಣರಾದರೆ ಪರವಾಗಿಲ್ಲ ಅನ್ಯರ ದ್ವೇಷಕ್ಕೆ ಕಾರಣರಾಗಬೇಡಿ ಅನ್ಯರ ಬದುಕಿಗೆ ಕಾರಣರಾದರೆ ಪರವಾಗಿಲ್ಲ ಅನ್ಯರ ಸಾವಿಗೆ ಕಾರಣರಾಗಬೇಡಿ -ಮಾಧವ ಅಂಜಾರು