ಬಿಸಿ -ಮಸಿ (ಕವನ -31)

ಮುಖಕ್ಕೆ ಬಳಿದ ಮಸಿ
ಮನಸ್ಸಿಗೆ ಹಚ್ಚಿದ ಮಸಿ
ಏನಿದ್ದರೂ ತಲೆ ಬಿಸಿ
ಒಟ್ಟಾರೆ ಕಸಿ ವಿಸಿ,

ಹಚ್ಚಿಸಿಕೊಂಡವರು ಬಿಸಿ
ಹಚ್ಚಿದವರೂ ಬಿಸಿ ಬಿಸಿ
ಇಬ್ಬರ ಬಾಯಿ ತೆರೆದರು
ಮಾತೆಲ್ಲ ಬಹಳ ಬಿಸಿ

ಮನಸ್ಸು ಕಪ್ಪಗಿರುವವಗೆ
ನಾಟುವುದೇ ಮಸಿ
ಸಿಟ್ಟು ಜಾಸ್ತಿ ಇರುವವಗೆ 
ಸಾಕೆ ಬರೇ ಮಸಿ?

ಅವರ ಮುಖಕ್ಕೆ ಮಸಿ
ಇವರ  ಕೈಗೆ ಮಸಿ
ಮಸಿಯಾಯ್ತು ಇನ್ನಷ್ಟು ಬಿಸಿ
ನೋಡುವವರಿಗೆ ಖುಷಿ?
          ✍️ಮಾಧವ ನಾಯ್ಕ್ ಅಂಜಾರು 🌷

       ✍️ಮಾಧವ 










Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ