ಬೇಗನೆ ಅವತರಿಸು (ಕವನ -28)
ಏನ ಕಾಣಲಿ ನಾನಿನ್ನೇನ ಕೇಳಲಿ
ದೇವ ನೀನಿಲ್ಲವೆಂದು ಹೇಳುವವರು
ಈ ಜಗದಲಿರುವಾಗ,
ಎನ್ನ ದೂಷಿಸೋರು ಏನು ಮಹಾ
ನಿನ್ನ ನೋವೆನಗೆಕೊಡು
ನಾನಿನ್ನವನು ಜಗದೊಡೆಯ
ನಿನ್ನೆಸರಲಿ ಮಾಡುವರು ಹಾಸ್ಯ
ನಿನ್ನ ರೂಪವ ವಿರೂಪಗೊಳಿಸಿ
ನೀನಿಲ್ಲವೆಂದೇ ಸಾರುತಿಹರು
ಜನರು ಈ ಜಗದಲಿ
ಕಲ್ಲಾಗಿರುವ ನಿನ್ನ ಕೊಲ್ಲುತಿಹರು
ನಿನ್ನ ಜೊತೆಗಿರಿಸು ಎನ್ನನು
ನೀನಿರಲು ನಾನಿರುವೆ
ನೀನಿಲ್ಲವೆಂದರೆ ನಾನಿರೆನು
ನಿನ್ನ ಪರೀಕ್ಷಿಸಿದವಗೆ
ಎನ್ನ ಕಣ್ಣಮುಂದೆ ತೋರಿಸು
ಸರ್ವ ಶಕ್ತಿ ನೀನೆಂದು
ನೀ ಬೇಗನೆ ಬಂದು ಅವತರಿಸು
✍️ಮಾಧವ ಅಂಜಾರು 🌷
Comments
Post a Comment