ನಿನ್ನೊಲವ ನೀನಾಗಿರು (ಕವನ -27)
ನಿನ್ನ ಹೆತ್ತವಳು ಶಪಿಸುವಷ್ಟು
ಕೆಟ್ಟವನಾಗಬೇಡ
ಪಿತನನ್ನು ಹೀಯಾಳಿಸುವಷ್ಟು
ಬೆಳೆದುನಿಲ ಬೇಡ
ನೀನು ತಾಳಿ ಕಟ್ಟಿದವಳ
ಮನೆಗೆ ಕನ್ನ ಹಾಕಬೇಡ
ನಿನ್ನ ನೋವನರಿವವಳ
ದೂರ ನಿಲಿಸಬೇಡ
ನಿನ್ನ ಜವಾಬ್ದಾರಿಯ ಮರೆತು
ಮಾಯವಾಗಬೇಡ
ಬೇಜವಾಬ್ದಾರಿ ತೋರುವ
ಮನುಷ್ಯನಾಗಲೇ ಬೇಡ
ನಿನ್ನವರಿಲ್ಲವೆಂದು ಅಳಬೇಡ
ನಿನ್ನವರಿರುವರೆಂದು ಹೊಗಳಬೇಡ
ನಿನ್ನೊಲವ ನೀನಾಗಿರು
ನಾನೆಂಬುದ ಬಿಟ್ಟು ಹಾಯಾಗಿರು
✍️ಮಾಧವ ನಾಯ್ಕ್ ಅಂಜಾರು 🌷
Comments
Post a Comment