Posts

Showing posts from January, 2021

ಪ್ರತಿಜ್ಞೆ (ಕವನ -32)

ನನ್ನ ಮಾತಲ್ಲಿ ನಿನಗೆ ಬೇಸರವಾದರೂ ಪರವಾಗಿಲ್ಲ ನನ್ನೊಂದಿಗಿರುವ ನಿನ್ನನ್ನು ದೂಷಿಸಲು ಬಿಡೋದಿಲ್ಲ ನನ್ನ ಮಾತಲ್ಲಿ ನಿನ್ನ  ಬೈದರೂ ನಾನು ಚಿಂತಿಸೋದಿಲ್ಲ ನನ್ನೆದುರು ನಿನ್ನ ದೂರುವವರನು ಸಹಿಸೋದಿಲ್ಲ ನನ್ನ ಬಿಟ್ಟು ಬಿಡುವೆ ಎಂದು ಹೇಳಿದರೂ ತೊಂದರೆಯಿಲ್ಲ ನಿನ್ನನು ಕೆಟ್ಟವ(ಳ)ನೆಂದು ಹೇಳಲು ನಾನು ಬಿಡೋದಿಲ್ಲ            ✍️ಮಾಧವ ನಾಯ್ಕ್ ಅಂಜಾರು 🌷

ಕನಸಲೂ ನೀನೆ (ಕವನ -34)

ಕನಸಲೂ ನೀನೆ,ಮನಸಲೂ ನೀನೆ ರವಿಮೂಡಿ ಬರುವಾಗ ಅರಳೋ ಹೂವು ನೀನೆ ನನ್ನೆದೆಯಗೂಡಲಿ  ಹೃದಯಬಡಿತವು ನೀನೆ ನನ್ನುಸಿರ ಗಾಳಿಯು  ನಿನ್ನಲ್ಲವೇ ಜಾಣೆ? ಹಗಳಲೂ ನೀನೆ ಇರುಳಲೂ ನೀನೆ ನಿನ್ನ ಕಣ್ಣಲಿ ಕಣ್ಣನಿಟ್ಟು ನೋಡುವಾಸೆ ಎನ್ನಲಿ ಹೊನ್ನಾಗಿ ನಿನ್ನ ಕೊರಳ ಅಲಂಕರಿಸುವ ಆಸೆಗೆ ಒಲ್ಲೆಯನ್ನಬೇಡ ಪ್ರೀಯೆ ಸೇರೆನ್ನ ಬಾಳ ಪುಟಕೆ       ✍️ಮಾಧವ ನಾಯ್ಕ್ ಅಂಜಾರು 🌷

ಜೊತೆಯಲಿ (ಕವನ 33)

ನೇಸರಮೂಡುತ ನಿನ್ನ ಸುಂದರ ಮೊಗವ ಕಾಣಲು ಆತುರ ನಗುವಬೀರುತ ಹಾಕುವ ಹೆಜ್ಜೆಯ  ನೋಡುವ ತವಕವೆನಗೆ ಓ ಚೆಲುವೆ ನಿನಗೆ ಸಾಸಿರ ಮುತ್ತನಿಯುವಾಸೆ ಘಾಸಿ ಮಾಡದಿರೆನ್ನ ಆಸೆಗೆ ಮೀಸಲಾಗಿರುವೆ ನಿನಗೆ ಪ್ರೀತಿಸಿಬಿಡೋಮ್ಮೆ ನಾ ನಿನ್ನ ಜೊತೆಯಲಿರುವೆ ಕೊನೆಯುಸಿರಿರೋತನಕ,        ✍️ಮಾಧವ ನಾಯ್ಕ್ ಅಂಜಾರು🌷

ಸರದಾರ (ಕವನ -35)

ನೋಯದಿರು ಒಲವೇ ಸಾಲು ಕಟು ಮಾತಿಗೆ ಹೇಯ ವೃತ್ತಿಯ ಜನರು ಘೀಲಿಡುವರು ಸುಮಾರು ಸೋಲದಿರು ಒಲವೇ ನೂರಾರು ಅಲೆಯೇರಿದರೂ ಮಾರುದ್ಧಕೆ ಒಬ್ಬರಿಗೊಬ್ಬರು ಕೋಟೆ ಕಟ್ಟಿ ಶ್ರಮಿಸಿದರೂ ಯಾರ ಭಯಬೇಡ ನಿನಗೆ ಸಾರಿ ಸಾರಿ ಹೇಳುತಿರು ಸೋಲಿಲ್ಲದ ಸರದಾರ ನಾನು ಎದೆತಟ್ಟು ನನ್ನೊಲವೇ ಕಲಿಯುಗದ ಈ ದಿನಗಳು ಬಲಿಪಶು ಮಾಡಲು ಕಾಯ್ದರೂ ಅಭಿಮನ್ಯು ನೀನಾಗು ಏಳು ಕೋಟೆಯ ಸಿಗಿದು ಸಾಲು ಸಾಲಾಗಿ ನೆಲಕಚ್ಚಿಸು ಶೂರ ನೀ ಹೇಳು ನನ್ನೊಲವೇ       ✍️ಮಾಧವ ನಾಯ್ಕ್ ಅಂಜಾರು 🌷

ನಂಬಿಕೆ (ಕವನ -36)

ಹುಚ್ಚರನ್ನು ನಂಬಬಹುದು ಹುಚ್ಚರಂತೆ ವರ್ತಿಸುವವರನ್ನು ನಂಬಲಾಗದು  ಹೆಚ್ಚು ಮಾತಾಡುವವರನು ನಂಬಬಹುದು ಹೊಟ್ಟೆಕಿಚ್ಚು ಮಾತಾಡುವವರನು ನಂಬಲಾಗದು! ನೊಂದು ಕಣ್ಣೀರು ಸುರಿಸುವವರ ಕಣ್ಣೀರ ಒರೆಸಬಹುದು ಮೊಸಳೆ ಕಣ್ಣೀರು ಸುರಿಸುವವರು ನಿನಗೆ  ಕಣ್ಣೀರ ಬರಿಸಬಹುದು ನಿದ್ದೆ ಮಾಡಿದವರನು ಎಬ್ಬಿಸಬಹುದು ನಿದ್ದೆ ಮಾಡಿದಂತೆ ನಟಿಸುವವರನು ಎಬ್ಬಿಸಲಾಗದು          ✍️ಮಾಧವ ನಾಯ್ಕ್ ಅಂಜಾರು 🌷            

ಕಳೆದೋಯ್ತು 8 ವರುಷ (ಕವನ -38)

ಮರವಾಗಿರೋ ಎನಗೆ ಬಳ್ಳಿಯಾದೆ ನೀನು ಸುಗಂಧ ಕುಸುಮವೆ ನೀ ಜೊತೆಯಾಗಿದ್ದರೆ ಎನ  ಜೀವನ ಸಂಪನ್ನ, ತಾಯಿಯಾಗಿ ನೀನು ಗೆಳತಿಯಾಗಿಯು ನೀನು ಜೀವನದ ಪ್ರತಿಹೆಜ್ಜೆಗೆ  ಹೂವಾಗಿರುವ ನೀನು ಎನ ಭಾಗ್ಯ ಮತ್ತಿನ್ನೇನು ಕಳೆದೋಯ್ತೆಂಟು ವರುಷ ಬೆಳೆದುಬಿಟ್ಟಿದು ಸಂಸಾರ ವೃಕ್ಷ ಮುಂದುವರಿಯಲಿ ನಮ್ಮ ಹರುಷ ಜೊತೆಯಾಗಿರು ಪ್ರತಿನಿಮಿಷ ಬಾಳೋಣ ಸಾವಿರ ವರುಷ       ✍️ಮಾಧವ ಅಂಜಾರು 🙏

ಹೊಗಳುವವರು (ಕವನ -37)

ನಿನ್ನ ಬಣ್ಣಿಸುವರಯ್ಯ ಹೊನ್ನ ಸರಮಾಲೆಯು  ಕೊರಳಲಿ ಇರುವಾಗ, ನಿನ್ನ ಹೊಗಳುವರಯ್ಯ ಬಣ್ಣ ಬಣ್ಣದ ಉಡುಗೆ ತೊಡುತ್ತ ಹೊರಟಾಗ ನಿನ್ನ ಪೂಜಿಸುರಯ್ಯಾ ಜ್ಞಾನ ನಿನ್ನಲಿರುವಾಗ ದಾನ ಧರ್ಮವಿರುವಾಗ, ನಿನ್ನ ಹೀಯಾಳಿಸುವರಯ್ಯ ಎಲ್ಲವನ್ನು ಕಳೆದುಕೊಂಡಾಗ ಏನಿಲ್ಲವೆಂದು ತಿಳಿದಾಗ, ನಿನ್ನತನವ ಮಾರಬೇಡ ನಿನ್ನತನವ ಹೊಗಳಬೇಡ ನೂರು ವೈರಿಗಳು ಸುತ್ತಿದರೂ ನಿನ್ನತನವ ಬಿಡಬೇಡ ನೀನು ನೀನಾಗಿಯೇ ಬದುಕಿ ವೀರನಾಗಿರಲು ಮರೆಯಬೇಡ             ✍️ಮಾಧವ ನಾಯ್ಕ್ ಅಂಜಾರು 🌷

ಬೇಡ -ಬೇಡ (ಕವನ -39)

ಸಮಯವನ್ನು ಕೆಟ್ಟ ಕೆಲಸಕ್ಕಾಗಿ ಉಪಯೋಗಿಸಬೇಡ ಸಮಯವನ್ನು ದೂಷಿಸಲು ವ್ಯರ್ಥ ಮಾಡಲೇಬೇಡ ಸಿಕ್ಕಿರುವ ಅಧಿಕಾರವನ್ನು ದುರುಪಯೋಗ ಮಾಡಬೇಡ ದಕ್ಕಿರುವ ಭಾಗ್ಯಗಳಿಗೆ ಬೇಸರಿಸಲೂ ಬೇಡ ನಿಂತ ನೀರಾಗಿ ಆವಿಯಾಗುತ್ತಿರಬೇಡ ಹರಿವ ನೀರಾಗು  ಆದರೆ ಪ್ರವಾಹ ಸೃಸ್ಟಿಸ ಬೇಡ ಮನದ ಆಸೆಗಳ ಪೂರೈಸಲು ಶ್ರಮಪಡದಿರಬೇಡ ದುರಾಸೆಗಳ ಬೆನ್ನಹತ್ತಿ ನಾಶವಾಗಬೇಡ        ✍️ಮಾಧವ ನಾಯ್ಕ್ ಅಂಜಾರು 🌷