(ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ
(ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ. ಪ್ರಾಣಿ, ಪಕ್ಷಿ ಸಂಕುಲ, ಮನುಜ ಎಲ್ಲವೂ ಹಸಿವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಲು ಸಾಧ್ಯವಿಲ್ಲ. ಹಸಿದ ಹೊಟ್ಟೆ, ಖಾಲಿ ಕೈ ಕಲಿಸುವ ಪಾಠ ಜೀವನದಲ್ಲಿ ಮನುಷ್ಯರು ಮರೆಯುವುದು ವಿರಳ. ಹಸಿವು ಮನುಷ್ಯನನ್ನು ಹೆಚ್ಚು ಹದ್ದುಬಸ್ತಿನಲ್ಲಿಡುತ್ತದೆ, ಹಸಿವನ್ನು ತಿಳಿದವನು ಹೆಚ್ಚಿನ ಗುಣಗಳನ್ನು ಹೊಂದಿರುತ್ತಾನೆ, ಹಸಿವನ್ನು ನೀಗಿಸಲು ಪ್ರಯತ್ನ ಪಡುತ್ತಾ ಇನ್ನೊಂದು ಜೀವಿಯ ಹಸಿವನ್ನು ನೀಗಿಸಲು ಪ್ರಯತ್ನ ಮಾಡುತ್ತಾನೆ. ಇಂದಿನ ದಿನದಲ್ಲೂ ಹಸಿವಿನಿಂದ ಬಳಲುವ ಮತ್ತು ದಿನದ ಒಂದು ತುತ್ತಿಗಾಗಿ ಹಂಬಲಿಸುವ, ಬೇಡುತ್ತಿರುವ, ಮತ್ತು ಕೆಲಸ ಮಾಡಿಯೂ ದಕ್ಕದೇ ಇರುವ ಹಣದ ಕೊರತೆ, ಇವೆಲ್ಲವೂ ಮನುಜನನ್ನು ಊಹಿಸಲಾಗದ ಕಷ್ಟಕ್ಕೆ ತಳ್ಳುತ್ತ ಇರುತ್ತದೆ. ಹಸಿವನ್ನು ತಿಳಿದವನು ಅಹಂಕಾರವನ್ನು ಹೊಂದಿರುವುದಿಲ್ಲ, ಕಷ್ಟವನ್ನು ತಿಳಿದವನು ಕಷ್ಟವನ್ನು ಕೊಡುವುದೂ ಇಲ್ಲ, ಎಲ್ಲರೂ ಸುಖವಾಗಿ ಇರಲಿ ಇರುವುದರಲ್ಲಿಯೇ ಹಂಚಿ ತಿನ್ನುವ ಅನ್ನುವ ಮನೋಭಾವನೆ ಹೊಂದಿರುತ್ತಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಅದೆಷ್ಟೋ ಜನರು ಬರೇ ನೀರು ಕುಡಿದು, ಅಥವಾ ಹಸಿವನ್ನು ತಾಳಲಾರದೆ ಒದ್ದಾಡುವ ಅನೇಕ ಜನರನ್ನು ನಾವೆಲ್ಲರೂ ನೋಡುತ್ತೇವೆ. ಆ...