(ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ, ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ
✍️Madhav. K. Anjar (ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ, ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ, ತುಳುನಾಡಿನ ಜನರಲ್ಲಿನ ಜೀವನ ಪದ್ಧತಿ, ಧೈರ್ಯ, ಬುದ್ದಿವಂತಿಕೆ, ಸೌಂದರ್ಯ ಎ ಭಾಷಾ ಗೌರವ, ವ್ಯಕ್ತಿ ಗೌರವ, ದೇಶ ಭಕ್ತಿ ಹಾಗೂ ಅನೇಕ ತರಹದ ವಿಶೇಷತೆ ತುಳುನಾಡಿನ ಜನರಲ್ಲಿ ನೋಡಬಹುದು. ಅದು ಹೇಗೆ, ತುಳುವರು ಯಾಕೆ ಅಷ್ಟು ಬುದ್ದಿವಂತರು ಅನ್ನುವ ಪ್ರಶ್ನೆ ಮೂಡ ಬಹದು. ತುಳು ಭಾಷೆ ಪುರಾತನ ಭಾಷೆ, ಶೇಕಡಾ 99 % ಜನರು ತುಳು ಬಲ್ಲವರು, ಇತ್ತೀಚಿನ ದಿನದ ಇಂಗ್ಲಿಷ್ ಪ್ರಭಾವದ ಕಾರಣಕ್ಕೂ ತುಳು ಭಾಷೆ ತಲೆಬಾಗುತ್ತಿಲ್ಲ ಯಾಕೆಂದರೆ ತುಳು ಭಾಷೆಗೆ ಯಾವ ಭಾಷೆಯೂ ಪೈಪೋಟಿ ನೀಡಲು ಸಾಧ್ಯವಿಲ್ಲ. ತುಳು ಭಾಷೆಯನ್ನು ಬಲ್ಲವರು ಮಾತ್ರ ಭಾಷೆಯ ವಿಶೇಷತೆಯ ಬಗ್ಗೆ ತಿಳಿದಿರುತ್ತಾರೆ. ಉದಾಹರಣೆಗೆ, " ನಮಸ್ಕಾರ ಈರ್ ಎಂಚ ಉಲ್ಲರ್ " ಇದರ ಅರ್ಥ ಕನ್ನಡದಲ್ಲಿ " ನಮಸ್ಕಾರ ನೀವು ಹೇಗಿದ್ದೀರಿ " ಇಲ್ಲಿ ಈ ವಾಕ್ಯವನ್ನು ಕನ್ನಡದಲ್ಲಿ ಕೇವಲ ಹಿರಿಯರಿಗೆ ಉಪಯೋಗಿಸುತ್ತಾರೆ, ಆದರೆ ತುಳು ಭಾಷೆಯಲ್ಲಿ ಹಿರಿಯರಿಗೂ, ಕಿರಿಯರಿಗೂ ಉಪಯೋಗಿಸುತ್ತಾರೆ ಯಾಕೆಂದರೆ ತುಳು ಭಾಷೆ ಕಿರಿಯರಿಂದ ಹಿರಿಯರವರೆಗೂ ಗೌರವವನ್ನು ಕೊಡುವ ಶಬ್ದ ಅತೀ ಹೆಚ್ಚಾಗಿ ಉಪಯೋಗಿಸುತ್ತಾರೆ. ಅದು ಕೂಡ ಒಬ್ಬರಿಗೆ ಬೈಗುಳ ಕೊಡುವ ಸಂಧರ್ಭದಲ್ಲೂ ಗೌರವ ಶಬ್ದದ ಉಪಯೋಗ ಮಾಡುತ್ತಾರೆ. ಬೇರೆ ಭಾಷೆಗಳಲ್ಲಿ ಉಪಯೋಗಿಸುವ ಅತೀ ಕ...