(ಲೇಖನ -55)ಭಾರತವೆಂದರೆ ಸ್ವರ್ಗ, ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಸೌಭಾಗ್ಯ.... ಭಾರತದಲ್ಲಿ ಹುಟ್ಟಿ ಬದುಕಿರುವವರೆಲ್ಲರೂ ಭಾಗ್ಯವಂತರು!
ಭಾರತವೆಂದರೆ ಸ್ವರ್ಗ, ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಸೌಭಾಗ್ಯ.... ಭಾರತದಲ್ಲಿ ಹುಟ್ಟಿ ಬದುಕಿರುವವರೆಲ್ಲರೂ ಭಾಗ್ಯವಂತರು!
ಪ್ರಕೃತಿ ಸೌಂದರ್ಯ, ಸಂಸ್ಕಾರ, ಹಲವು ಭಾಷೆ, ವಿವಿಧ ಆಚರಣೆ, ಹಬ್ಬ ಹರಿದಿನ, ಪ್ರೀತಿ, ಗೌರವ, ಮಾನವೀಯತೆ ಹೊಂದಿರುವ ಏಕೈಕ ದೇಶವೆಂದು ಹೇಳಬಹುದು. ನೀಚ ರಾಜಕೀಯದ ಜನರನ್ನು ಹೊರತುಪಡಿಸಿ, ಸಾಮಾನ್ಯವಾಗಿ ಹೆಚ್ಚಿನ ಜನರು ತನ್ನ ಕೆಲಸಗಳನ್ನು ಮಾಡಿ ಯಾವುದೇ ತೊಂದರೆಗಳನ್ನು ಮಾಡಿಕೊಳ್ಳದೆ ಬದುಕಲು ಬಯಸುವ ಜನರು, ಹಾಗಾಗಿ ವಿದೇಶಗಳಲ್ಲಿ ಭಾರತೀಯರೆಂದರೆ ಗೌರವ, ಭಾರತೀಯತೆ ಎಂದರೆ ಪ್ರೀತಿ, ಭಾರತದ ಸಂಸ್ಕೃತಿಗೆ ಎಲ್ಲರೂ ತಲೆಬಾಗುತ್ತಾರೆ. ಅನೇಕ ಇತಿಹಾಸಗಳನ್ನು ಹೊಂದಿರುವ ಮತ್ತು ಅತ್ಯಧಿಕ ವಿಜ್ಞಾನಿಗಳನ್ನು , ವೈದ್ಯಕೀಯ ಮತ್ತು ತಂತ್ರಜ್ಞಾನದ ಜನರನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿ ತನ್ನ ಹೆಗ್ಗಳಿಕೆಯನ್ನು ಹೆಚ್ಚಿಸಿಕೊಂಡಿರುವ ಏಕೈಕ ದೇಶ. ಭಾರತ ದೇಶ ಇದುವರೆಗೂ ಅನ್ಯ ದೇಶಗಳಿಗೆ ಹಾನಿ ಮಾಡಿದ ಉದಾಹರಣೆಗಲಿಲ್ಲ, ಭಾರತವನ್ನು ಆಕ್ರಮಿಸಿ ಅದರ ಅಸ್ತಿತ್ವ ನಾಶಪಡಿಸಲು ಶ್ರಮಿಸಿದ ದೇಶಗಳು ಇರಬಹುದು, ಅದರಿಂದ ದೇಶದ ಕೆಲವು ಭಾಗವನ್ನು ಕಳೆದುಕೊಂಡ ಉದಾಹರಣೆ ನಮ್ಮ ಇತಿಹಾಸವನ್ನು ನೋಡಿದರೆ ಎಲ್ಲರಿಗೂ ತಿಳಿಯುತ್ತದೆ! ಒಂದಂತೂ ನಿಜ ಭಾರತಕ್ಕೆ ಅನ್ಯರ ತೊಂದರೆಗಳಿಗಿಂತ ಜಾಸ್ತಿ ಒಳಗಿನ ಜನರಿಂದಲೇ ಹೆಚ್ಚಿನ ತೊಂದರೆಗಳು! ಒಂದಷ್ಟು ಜನರ ವಿಕೃತ ಮನಸಿನಿಂದ ಭಾರತದ ಗೌರವಕ್ಕೆ ತೊಂದರೆ ಕೊಡುವ ಶ್ರಮಗಳು ಹಿಂದಿನಿಂದಲೂ ನಡೆದು ಬರುತ್ತಿದೆ, ಇಂದಿಗೂ ನಡೆಯುತ್ತಿದೆ. ಆದರೆ ಏನು ಮಾಡಿದರೂ, ಎಷ್ಟು ಪ್ರಯತ್ನ ಪಟ್ಟರೂ ಭಾರತದ ಐಕ್ಯತೆಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.
ಸಾವಿರಾರು ದಾಳಿಗೆ ಒಳಗಾಗಿ,ಜರ್ಜರಿತಗೊಂಡಿದ್ದರು ಭಾರತ ಮತ್ತೆ ಮತ್ತೆ ಮೇಲೆದ್ದು ಬಂದು ತನ್ನ ಪರಾಕ್ರಮವನ್ನು ಜಗವೆಲ್ಲ ತಿಳಿಸಿಬಿಡುತ್ತದೆ. ಎಂತಹ ಕಠಿಣ ಪರಿಸ್ಥಿತಿ ಬಂದರೂ ಅತೀ ಜಾಗ್ರತೆಯಿಂದ ನಿರ್ವಹಿಸಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತದೆ. ಕೆಲವು ದುರ್ಬಲ ನಾಯಕರ ಸಮಯದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ತಮಾಷೆಗೆ ಒಳಗಾಗಿದ್ದರೂ, ಬುದ್ದಿವಂತರ ದೇಶ ಮತ್ತು ಸಹನೆ ಚಾಣಕ್ಯ ನೀತಿಯಿಂದ ಮತ್ತೆ ಮತ್ತೆ ಮೇಲೆದ್ದು ನಿಲ್ಲುತ್ತದೆ. ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ವರ್ಣ ಬೇಧ, ಧರ್ಮ ಬೇಧಕ್ಕೆ ಮಾರಣಹೋಮಗಳು ನಡೆದು ದೇಶ ದೇಶವೇ ಸರ್ವನಾಶವಾದ ಉದಾಹರಣೆಗಳು ಒಂದಸ್ಟಿವೆ.
ಹಲವು ಅಕ್ರಮಣಗಳಿಗೆ ಮುಂಚೆ ಭಾರತವು ಸಂಪತ್ತಿನ ದೇಶವಾಗಿತ್ತು, ಭಾರತದ ಆಸ್ತಿಯನ್ನು ಕಬಳಿಸಿ, ದೋಚಿ ತಿಂದವರೇ ಜಾಸ್ತಿ, ಆದರೆ ಭಾರತದ ಜನರು ಸಹನೆಕೆಟ್ಟು ಪ್ರತಿದಾಳಿ ಮಾಡಿ ಸೇಡು ತೀರಿಸಿಕೊಂಡವರಲ್ಲ, ಅದಕ್ಕೆ ಕಾರಣ ನಮ್ಮ ಭಾರತೀಯ ಸಂಸ್ಕೃತಿ. ತಾಯಿ, ತಂದೆ, ಗುರು, ಮಕ್ಕಳನ್ನು ಹೆಣ್ಣನ್ನು ಗೌರವ ಸ್ಥಾನದಿಂದ ನೋಡುವ ದೇಶ. ಒಂದಷ್ಟು ಕೆಟ್ಟ ಜನರನ್ನು ಹೊರತುಪಡಿಸಿ ಭಾರತವನ್ನು ನಾಶಪಡಿಸಲು ಯಾರಿಗೂ ಆಗಲಿಲ್ಲ ಇನ್ನು ಮುಂದೆಯೂ ಆಗುವುದಿಲ್ಲ.
ಕಾಲ ಕಾಲಕ್ಕೆ ತಕ್ಕಂತೆ ವೀರ ಪುರುಷರು ಹುಟ್ಟುವ ನಮ್ಮ ನೆಲ, ಕಾಲ ಕಾಲಕ್ಕೆ ತಕ್ಕಂತೆ ವೀರ ನಾಯಕರು ಶೃಷ್ಟಿಯಾಗುವ ನಮ್ಮ ನೆಲ, ಹಲವು ದೇವರು, ಧರ್ಮ, ಜಾತಿಯನ್ನು ಹೊಂದಿರುವ ದೇಶ ನಮ್ಮ ನೆಲ. ಭಾರತದ ಐಕ್ಯತೆಗೆ ಸವಾಲು ಹಾಕಿದವರೆಲ್ಲರೂ ನಾಶವಾದ ನಮ್ಮ ನೆಲ. ಭಾರತವೆಂದರೆ ಸೌಭಾಗ್ಯ, ಭಾರತವೆಂದರೆ ನಮ್ಮ ನಿಮ್ಮೆಲ್ಲರ ಭಾಗ್ಯ.
ಸಾಧ್ಯವಾದಷ್ಟು ನಿಮ್ಮ ಮಕ್ಕಳಿಗೆ ಭಾರತೀಯತೆಯ ರುಚಿಯನ್ನು ತೋರಿಸಿ, ಭಾರತದ ಇತಿಹಾಸ, ವೀರ ಪುರುಷರ ಕಥೆಗಳನ್ನು ತಿಳಿಸಿ, ರಾಮಾಯಣ, ಮಹಾಭಾರತ, ಮತ್ತು ಹಲವಾರು ವೀರ ರಾಜರುಗಳ ಚರಿತ್ರೆಯನ್ನು ತಿಳಿಸಿ. ತಮ್ಮ ದೇಶದ ಉಳಿವಿಗಾಗಿ ಹೋರಾಡಿದ ಸ್ವಾತಂತ್ರ್ಯ ಚಳುವಳಿಗಾರರು, ಸೈನಿಕರು, ರೈತರ ಕಾಳಜಿಯನ್ನು ಹೆಚ್ಚಿಸಿ. ದೇಶದ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗುವ ಕೆಲಸವನ್ನು ಅಲ್ಪವಾದರೂ ಮಾಡಿ. ಮುಂದಿನ ದಿನಗಳಲ್ಲಿ ಭಾರತ ಪ್ರಪಂಚದ ಶಕ್ತಿಯುತ ದೇಶವಾಗಿ ಮಾರ್ಪಡಲು ನಿಜವಾದ ಪ್ರಯತ್ನ ಮಾಡಿದರೆ ಭಾರತದ ಮಣ್ಣಿಗೆ ಬೆಲೆ ಕೊಟ್ಟಂತಾಗುತ್ತದೆ.
ಭಾರತದ ಅನುರಾಗ, ಭಾರತದಲ್ಲಿ ಹೆಚ್ಚಿನ ದೇಶ ಭಕ್ತರು ಹುಟ್ಟಲಿ ಎಂಬ ಆಶಯದೊಂದಿಗೆ.
ಬರಹ : ಮಾಧವ. ಕೆ. ಅಂಜಾರು
Comments
Post a Comment