(ಲೇಖನ -53)ಚಿನ್ನದಂತಹ ಗೆಳೆಯ, ಗೆಳೆಯರಿದ್ದರೆ ಹೀಗಿರಬೇಕು, ನಮ್ಮ ಜೀವನದಲ್ಲಿ ಹೇಳು ಹೆಚ್ಚು ಮಹತ್ವದ ಜಾಗವನ್ನು ತೆಗೆದುಕೊಳ್ಳುವ ಜನರೆಂದರೆ ನಮ್ಮ ಗೆಳೆಯರು

ಚಿನ್ನದಂತಹ ಗೆಳೆಯ, ಗೆಳೆಯರಿದ್ದರೆ ಹೀಗಿರಬೇಕು, ನಮ್ಮ ಜೀವನದಲ್ಲಿ  ಹೆಚ್ಚು ಮಹತ್ವದ ಜಾಗವನ್ನು ತೆಗೆದುಕೊಳ್ಳುವ ಜನರೆಂದರೆ ನಮ್ಮ ಗೆಳೆಯರು. ಗೆಳೆಯರೆಂದರೆ ನಮ್ಮ ಉಸಿರು, ಗೆಳೆಯರೆಂದರೆ ನಮ್ಮ ಜೀವನ, ಗೆಳೆಯರೆಂದರೆ ನಮ್ಮ ಬದುಕು, ಗೆಳೆಯರೆಂದರೆ ನಮ್ಮ ಸಂಪತ್ತು. ಗೆಳೆಯರನ್ನು ಸಂಪಾದಿಸುವುದು ಅಷ್ಟು ಸುಲಭವಲ್ಲ. ನಮ್ಮ ಜೀವನದಲ್ಲಿ ತಾತ್ಕಾಲಿಕ ಗೆಳೆಯರಿಗೂ ಜೀವನ ಪೂರ್ತಿ ಸಿಗುವ ಗೆಳೆಯರಿಗೂ ಬಹಳ ವ್ಯತ್ಯಾಸವಿದೆ. ನಿಜವಾದ ಗೆಳೆಯರು ಯಾವುದೇ ಸಂಧರ್ಭದಲ್ಲಿ ನಿಮ್ಮ ಸಹಾಯ ಬಯಸುವುದಿಲ್ಲ, ಸಹಾಯ ಬಯಸಿದರೂ, ಸಮಯಕ್ಕೆ ತಕ್ಕಂತೆ ನೀವು ಯಾವುದೇ ತೊಂದರೆಯಲ್ಲಿದ್ದರೂ ಧಾವಿಸುವ ನಿಸ್ಕಲ್ಮಷ ಹೃದಯಗಳು. ಗೆಳೆಯರೆಂದರೆ ನಿಮ್ಮಲ್ಲಿ ಸಿಗುವ ಲಾಭವನ್ನು ಮಾತ್ರವಲ್ಲ, ನಿಮ್ಮ ಜೀವನದಲ್ಲಿ ನಡೆಯು


ವ ಪ್ರತೀ ಸಂತೋಷ ಮತ್ತು ದುಃಖದಲ್ಲಿ ಪಾಲ್ಗೊಳುವವರು.


      ನಿಮ್ಮ ಜೀವನದಲ್ಲಿ, ಗೆಳೆಯರು ಅತೀ ಎತ್ತರದ ಜಾಗವನ್ನು ಪಡೆದುಕೊಂಡಿರುತ್ತಾರೆ. ನಿಮ್ಮ ತಂಗಿಯ ಮದುವೆಯೋ, ನಿಮ್ಮ ಅಮ್ಮನ ಆರೋಗ್ಯ ವಿಚಾರದಲ್ಲಿ, ತುರ್ತುಪರಿಸ್ಥಿತಿಯಲ್ಲಿ, ಹಗಲು, ರಾತ್ರಿ, ವೈರಿಗಳು, ಸಂಬಂದಿಕರಿಗಿಂತ ಜೀವ ಕೊಡುವ ಜನರೆಂದರೆ ನಮ್ಮ ಮೌಲ್ಯಯುತ ಗೆಳೆಯರು. ಸಾವಿರರು ಜಗಳ ಮಾಡಲಿ, ಸಾವಿರಾರು ಮಾತುಕತೆಗಳಾಗಲಿ ಕೊನೆಗೆ ನೀನು ಎನ್ನ ಜೀವ ಎಂದು ತಬ್ಬಿಕೊಳ್ಳುವ ಜೀವ ಎಂದರೆ ಗೆಳೆಯ.

     ಗೆಳೆಯರೆಂದರೆ ನಿನ್ನ ಪ್ರತಿಯೊಂದು ಸಮಸ್ಯೆಗಳು, ಆಸೆಗಳು, ಕನಸುಗಳನ್ನು ಸಮಾನ ರೀತಿಯಲ್ಲಿ ಪ್ರೋತ್ಸಾಹಿಸಿ ನಿನ್ನ ಉದ್ದಾರಕ್ಕೆ ಶ್ರಮಿಸುವ ಜೀವಗಳು, ಯಾವುದೇ ಆಸೆಗೆ ಒಳಗಾಗದೆ, ಸರ್ವಸ್ವ ತ್ಯಜಿಸಲು ತಯಾಗಿರುವ ಮೌಲ್ಯಯುತ ಜೀವಗಳು.  ನಿಜವಾದ ಸ್ನೇಹಿತರು ನಿನ್ನ ಉದ್ದಾರವನ್ನು ಬಯಸುತ್ತಾರೆ ನಿಜವಾದ ಸ್ನೇಹಿತರು ನಿನ್ನ ಸಂತೋಷವನ್ನು ಬಯಸುತ್ತಾರೆ, ನಿಜವಾದ ಸ್ನೇಹಿತರು ನಿನ್ನ ನಗುವನ್ನು ಬಯಸುತ್ತಾರೆ. ನಿಜವಾದ ಸ್ನೇಹಿತರು ನಿನ್ನ ಪ್ರೀತಿಯನ್ನು ಬಯಸುತ್ತಾರೆ. ಯಾರು ನಿನ್ನ ಅಂತರಾಳದ ಮನಸ್ಸನ್ನು ಅರ್ಥ ಮಾಡಿಕೊಂಡಿರುವುದಿಲ್ಲವೋ ಅವರು ತಾತ್ಕಾಲಿಕ ಗೆಳೆಯರಾಗಿ ನಿರ್ಗಮಿಸುತ್ತಾರೆ.

    ನಿನ್ನ ಜೀವನದಲ್ಲಿ ಗೆಳೆಯರನ್ನು ನೋಡಬೇಕಾದರೆ ಇಂತವರನ್ನು ಗಮನಿಸು, ಯಾವುದೇ ಬೇಡಿಕೆ ಇಟ್ಟಿರುವುದಿಲ್ಲ, ಯಾವುದೇ ಕಷ್ಟದಲ್ಲಿದ್ದರೂ ನಿನ್ನಲ್ಲಿ ಹೇಳುವುದಿಲ್ಲ, ನಿನ್ನ ಜೊತೆಯಲ್ಲಿ ಇರುವಾಗ ನಗು ನಗುತಾ ಇರುತ್ತಾನೆ, ನಿನಗೆ ಸದಾ ಧೈರ್ಯ ಹೇಳುತ್ತಾನೆ,ತಾನು ಸಮಸ್ಯೆಗೆ ತುತ್ತಾಗಿದ್ದರು ನಿನ್ನ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಹುಡುಕಲು ಶ್ರಮಿಸುತ್ತಾನೆ. ನಿನಗೆ ಒಂದು ರೂಪಾಯಿ ಕೂಡ ವಂಚಿಸಿರುವುದಿಲ್ಲ, ಎಸ್ಟು ಕಷ್ಟದಲ್ಲಿದ್ದರೂ ನಗುತ್ತಾ ಬದುಕುವ ಜೀವ ಎಂದರೆ ನಿನ್ನ ನಿಜವಾದ ಗೆಳೆಯ.

      ನಿನ್ನ ಜೀವನದಲ್ಲಿ ಅದೆಷ್ಟೋ ಜನರ ಪರಿಚಯವಾಗಿ ಗೆಳೆತನಕ್ಕೆ ಬದಲಾಗಬಹುದು, ಅವರು ನಿಮ್ಮನ್ನು ಉಪಯೋಗಿಸಿ ಬಿಟ್ಟು ಬಿಡಲುಬಹುದು, ಬರೇ ನಿಮ್ಮಲ್ಲಿ ಸಿಗುವ ಲಾಭಕ್ಕಾಗಿ ಶ್ರಮಿಸಬಹುದು, ದುಡ್ಡು, ಸಹಾಯಕ್ಕಾಗಿ ಮಾತ್ರ ನಿಮ್ಮನ್ನು ಉಪಯೋಗಿಸಿ ಬಿಟ್ಟುಬಿಡಬಹುದು. ಗೆಳೆಯರ ಸಂಪಾದನೆ ಅಷ್ಟು ಸುಲಭವಲ್ಲ, ಗೆಳೆಯರ ಸಂಪಾದನೆ ಅಷ್ಟು ವಿಶ್ವಾಸಗಳಿಸಲು ತೆಗೆದುಕೊಳ್ಳುವ ಸಮಯ, ನಿನ್ನ ಜೀವನದಲ್ಲಿ ಮಾಡುವ ಬಹಳ ದೊಡ್ಡ ಸಾಧನೆ.

     ನಿನ್ನ ಗೆಳೆಯರು, ಒಬ್ಬರಾಗಿರಲಿ, ಇಬ್ಬರಾಗಿರಲಿ ಅಷ್ಟು ಸಾಕು ನಿನ್ನ ಜೀವನ ಸಾರ್ಥಕ. ಒಬ್ಬ ನಿಜವಾದ ಗೆಳೆಯ ಸಾವಿರಾರು ಜನರಿಗೆ ಸಮಾನ. ಒಬ್ಬ ಪ್ರೀತಿಯ ಗೆಳೆಯ ನಿನ್ನ ಉಸಿರಾಗಿದ್ದರೆ ಸಾಕು, ನಿನ್ನ ಜೀವನ ಸಾರ್ಥಕ, ಒಬ್ಬ ಗೆಳೆಯ ನಿನ್ನ ಕಷ್ಟದಲ್ಲಿ ಭಾಗಿಯಾಗಿ ನಿನ್ನ ಜೊತೆಯಲ್ಲಿ ಇದ್ದರೆ ಸಾಕು ನಿನ್ನ ಜೀವನ ಪಾವನ.

   ಸಾವಿರಾರು ವೈರಿಗಳಿದ್ದರು, ಒಬ್ಬ ನಿಜವಾದ ಗೆಳೆಯ ನಿನ್ನನ್ನು ಉಳಿಸಬಹುದು, ಸಾವಿರಾರು ಸಮಸ್ಯೆಗಳಿದ್ದರೂ ನಿನ್ನ ಪ್ರೀತಿಯ ಗೆಳೆಯ ನಿನ್ನನ್ನು ಎಲ್ಲಾ ಸಮಸ್ಯೆಯಿಂದ ಹೊರಗೆ ತರಲುಬಹುದು. ಗೆಳೆಯ ನಿಮ್ಮ ಆಸ್ತಿ, ಗೆಳೆಯ ನಿಮ್ಮ ಉಸಿರು, ಗೆಳೆಯ ನಿಮ್ಮ ಜೀವ.

" ಭಾರತದ ಅನುರಾಗ " ಗುಂಪಿನ ಪ್ರತಿಯೊಂದು ಸದಸ್ಯರಿಗೆ ಮೌಲ್ಯಯುತ ಒಂದು ಗೆಳೆಯರು ಸಿಗಲೆಂಬ ಹಾರೈಕೆ.


ಬರಹ : ಮಾಧವ. ಕೆ. ಅಂಜಾರು 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ