Posts

Showing posts from March, 2022

How does The Passion of India work as a group ? What is the purpose of it? Why do we call it as a passion of India ?

Image
 How does The Passion of India work as a group ? What is the purpose of it?  Why do we call it as a passion of India ? Do we really need to implement it in our society?  How do we find the pros and cons? What all can we do to bring in the change ?  Does it even feel like an alien group?  All these questions flashes in my mind. But, my heart says. No, Passion of India is not a network that keeps specific  people in contact, but also gets connected with the valuable people from our country, state, city, town, village and over seas to be more responsible and peaceful while striving to promote positive thinking in the neighborhood and to bring in the change.   Now how is that supposed to happen is the question ? How do we bring in the change is the question ?  But, in my opinion social service is not only done with the help of money or association to association with specific people, but rather by self-serving people who selflessly puts efforts serving themselves or doing good deeds for th

(ಲೇಖನ -35)ಭಾರತದ ಅನುರಾಗ ಗುಂಪು ಹೇಗೆ ಕೆಲಸ ಮಾಡುತ್ತದೆ? ಉದ್ದೇಶ ಏನು? ಯಾಕೆ ಬೇಕು? ಅನ್ಯ ಗುಂಪಿನಂತೆಯೇ ಇದು ಕೂಡ ಅನಿಸುತ್ತದೆಯೇ?

Image
 ಭಾರತದ ಅನುರಾಗ ಗುಂಪು ಹೇಗೆ ಕೆಲಸ ಮಾಡುತ್ತದೆ? ಉದ್ದೇಶ ಏನು? ಯಾಕೆ ಬೇಕು? ಅನ್ಯ ಗುಂಪಿನಂತೆಯೇ ಇದು ಕೂಡ ಅನಿಸುತಿದೆಯೇ ? ಅಲ್ಲ, ಭಾರತದ ಅನುರಾಗ ನಿರ್ದಿಷ್ಟ ಜನರನ್ನು ಇಟ್ಟುಕೊಂಡು ನಡೆಯುವ ಜಾಲಬಂಧವಲ್ಲ, ಹಳ್ಳಿ, ಪಟ್ಟಣ, ರಾಜ್ಯ,ದೇಶ, ವಿದೇಶದಲ್ಲಿರುವ ಮೌಲ್ಯಯುತ ಜನರನ್ನು ಸಂಪರ್ಕಿಸಿ ಇನ್ನಷ್ಟು ಜವಾಬ್ದಾರಿಯುತ ಮತ್ತು ಶಾಂತಿಯುತ ಹಾಗೆಯೇ ಸುತ್ತಮುತ್ತಲಲ್ಲಿ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಲು ಶ್ರಮಿಸುವ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತದೆ. ಅದು ಹೇಗೆ? ಪ್ರಶ್ನೆಯೇ? ಹೌದು ಇದು ಸಹಜವಾಗಿ ಮೂಡುತ್ತದೆ, ನನ್ನ ಚಿಂತನೆಯ ಪ್ರಕಾರ ಸಮಾಜ ಸೇವೆ ಎಂದರೆ, ಹಣದ ಸಹಾಯ ಮಾತ್ರವಲ್ಲ ಅಥವಾ ನಿರ್ದಿಷ್ಟ ಜನರೊಂದಿಗೆ ನಡೆಸುವ ಸಂಘ, ಸಂಘಟನೆಗಳಿಗೆ ಸೀಮಿತವಾಗಿಲ್ಲ ಬದಲಾಗಿ ನಿಮ್ಮ ಸುತ್ತಲಿನ ಸಮಾಜದಲ್ಲಿ ಯಾವುದೇ ಪ್ರಚಾರ, ಆಸೆ, ಅಧಿಕಾರದ ದಾಹಗಳಿಲ್ಲದೆ ತನ್ನನ್ನು ತಾನು ಸಮಾಜ ಸೇವೆ ಅಥವಾ ಉತ್ತಮ ಚಿಂತನೆಯನ್ನು ಮಾಡುತ್ತ ತನ್ನಿಂದ ಆಗುವ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಜನರನ್ನು ಗುರುತಿಸಿ ಎಲ್ಲಿದ್ದರೂ ಕೈ ಹಿಡಿದು ನಡೆಸುವ ಜಾಲಬಂಧ.      ಇದರಲ್ಲಿ ಇನ್ನಷ್ಟು ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು, ಅದಕ್ಕೆಲ್ಲ ಉತ್ತರವೂ ಇದೆ, ಈ ಸಂದೇಶ ವನ್ನು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರು ಮಾಡಿ ತೋರಿಸಿ, ನಿಮ್ಮ ಬೆಂಬಲ ನಮಗಿರಲಿ, ಸ್ವಯಂ ಸೇವಕರಾಗಬೇಕಿದ್ದರೆ ಭಾರತದ ಅನುರಾಗ ಗುಂಪಿಗೆ ಕೈ ಜೋಡಿಸಿ, ನಾವೆಲ್ಲರೂ ಸೇರಿ ಜೊತ

(ಲೇಖನ -14)ಸೃಷ್ಟಿ ಎಂದರೆ ಹಾಗೆ... ವಿಚಿತ್ರ ಅನಿಸಬಹುದು.

Image
 ಸೃಷ್ಟಿ ಎಂದರೆ ಹಾಗೆ... ವಿಚಿತ್ರ ಅನಿಸಬಹುದು... ಜಗತ್ತು ಸೃಷ್ಟಿಯಾದಮೇಲೆ, ಜೀವಿಗಳು ಸೃಷ್ಟಿಯಾಗಿ, ಪ್ರಾಣಿ, ಪಕ್ಷಿ, ಮನುಜರು ಹುಟ್ಟಿ ಕಾಲಚಕ್ರಕ್ಕೆ ತಕ್ಕಂತೆ ಸಾಯುತ್ತಿರುವುದು ಸಹಜ. ಪ್ರಾಣಿ, ಪಕ್ಷಿ ತನ್ನ ಹೊಟ್ಟೆ ತುಂಬಿಸಲು ಅನ್ಯ ಜೀವಿಗಳನ್ನು ತಿಂದು ಬದುಕಿದರೆ, ಮನುಜರು ಕೂಡ ಪ್ರಕೃತಿ ಮತ್ತು ವನ್ಯ ಜೀವಿಗಳನ್ನು ಅವಲಂಬಿಸಿ ಬೇಕಾದನ್ನು ಮಾಡುವ ಸಾಮರ್ಥ್ಯ ಮಾಡಿಕೊಂಡಿದ್ದಾನೆ. ಇದೊಂದು ಪ್ರಕೃತಿಯ ನಿಯಮವೆಂದು ಮಾನವರಾದ ನಾವು ಹೇಳಿಕೊಳ್ಳುತ್ತೇವೆ.            ಮಾನವರು ವಿವಿಧ ಹೆಚ್ಚಾಗಿ ತನ್ನ ಬುದ್ದಿವಂತಿಕೆಯನ್ನು ಪ್ರಕೃತಿಯನ್ನು ನಾಶಮಾಡಲು ಉಪಯೋಗಿಸಿ, ಎಲ್ಲಾ ವಿಚಾರದಲ್ಲೂ ತನ್ನ ಮೇಲುಗೈ ಸಾಧಿಸಲು ಪ್ರಯತ್ನ ಮಾಡುತ್ತ ಇದ್ದಾನೆ ಮತ್ತು ಮಾನವನಿಗೆ ಮಾನವರೇ ಒಳಿತಾಗಿಯೂ, ಕೆಡುಕಾಗಿಯೂ ಹುಟ್ಟಿಕೊಳ್ಳುತಿದ್ದಾನೆ. ಹುಟ್ಟಿ ಬಂದ ಪ್ರತಿಯೊಂದು ಜೀವಿ ಸಾಯುತ್ತದೆ, ಅದರಲ್ಲಿ ಮಾನವನೂ ಸಾಯುತ್ತಾನೆ ಎಂಬ ಪರಿವೇ ಇಲ್ಲದೆ ಪ್ರಪಂಚದಲ್ಲಿ ಎಗ್ಗಿಲ್ಲದೇ ಮನ ತೋಚಿದಂತೆ ಜೀವಿಸುವ ಅಭ್ಯಾಸ ಮಾಡಿಕೊಂಡಿದ್ದಾನೆ.          ನನಗಿಂತ ಬೇರೆ ಯಾರು ದೊಡ್ಡವರಿಲ್ಲ, ನಾನೊಬ್ಬನೇ ಸತ್ಯವಂತ, ನಾನು ಏನು ಬೇಕಾದರೂ ಮಾಡಬಲ್ಲೆ, ನನ್ನಲ್ಲಿ ಅಧಿಕಾರವಿದೆ, ನನ್ನಲ್ಲಿ ಪ್ರಪಂಚದ ದೊಡ್ಡ ವ್ಯಕ್ತಿಗಳ ಪರಿಚಯವಿದೆ, ಅವನೇನು ಮಹಾ, ಅವನೇನು ಮಾಡಬಲ್ಲ, ಅವನೊಬ್ಬ ಅವಿವೇಕಿ, ಅವನು ಹಾಗೆ ಹೀಗೆ ಎಂಬ ಮಾತಿನೊಂದಿಗೆ ತನ್ನ ನಿಜವಾದ ಬಣ್ಣವನ್ನು ಆಗಾಗ ತೋರಿಸುತ್ತಾನೆ.

ಶ್ರೀ ಕೃಷ್ಣ ರವರಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ

Image
 *ದುಡಿಮೆಗಾಗಿ ಹೋಟೆಲ್ ಕೆಲಸ ಅಬಲಂಬಿಸಿ ಕುಟುಂಬಕ್ಕೆ ಆಸರೆಯಾಗುತ್ತಿದ್ದ 25 ವರ್ಷದ ಕೃಷ್ಣನ ಬಾಳು ಆರದಿರಲಿ...😭*  ಸಮಾಜ ಸೇವಕ, ಅಬ್ಬಾಸ್. C. P ರವರ ಮಾಹಿತಿಯಂತೆ, ಇನ್ನೂ ಸುಮಾರು 6 ತಿಂಗಳವರೆಗೆ ಯಾವುದೇ ಕೆಲಸಗಳನ್ನು ಮಾಡುವ ಸ್ಥಿತಿಗೆ ಬರುವಂತಿಲ್ಲ, ಎರಡೂ ಕೈಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ, ಕಡು ಬಡವರಾದ ಕೃಷ್ಣರವರು ಪ್ರಸ್ತುತ ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹಾಯ ಮಾಡಲು ಇಚ್ಚಿಸುವ ದಾನಿಗಳು ಈ ಕೆಳಗಿನ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಲುಪಿಸಿ, ಸಾಧ್ಯವಿದ್ದಷ್ಟು ಸಹಕರಿಸಿ, ಕೃಷ್ಣ ರವರು ಬೇಗ ಗುಣಮುಖರಾಗಿ ಬರಲೆಂದು "ಭಾರತದ ಅನುರಾಗ - ಕುಟುಂಬ " ಆಶಿಸುತ್ತದೆ. ಮಹನೀಯರೇ ಕುಂದಾಪುರದ ಕಡು ಬಡವ ಕುಟುಂಬದ ಮಗ ಕೃಷ್ಣ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಮಾಡುವ ಸಂಧರ್ಬ ಸಿಲಿಂಡರ್ ಸ್ಪೋಟಗೊಂಡು ದೇಹದ 18% ದಷ್ಟು ಭಾಗವು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈಗ ಕೃಷ್ಣ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾನೆ. ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ನಿಮ್ಮ ಕೈಲಾಗುವ ಸಹಾಯ ಮಾಡಿ ನಿಮ್ಮ ಶಕ್ತಿಗನುಸಾರ👏 ಕೈ ಬಿಡಬೇಡಿ ನಿಮ್ಮ ತಮ್ಮ ಅಥವಾ ನಿಮ್ಮ ಮನೆಯ ಮಗನೆಂದು ಭಾವಿಸಿ ಸಹಾಯ‌ಮಾಡಿ.. ಸಾಧ್ಯವಾದಷ್ಟು ಶೇರ್ ಮಾಡಿ 👏👏 😭😭 Name : M.r KRISHNA Ac/num :3973649718

(ಲೇಖನ -16)ಪಾಪ - ಪುಣ್ಯ - ಕರ್ಮ

Image
 ಪಾಪ - ಪುಣ್ಯ - ಕರ್ಮ       ತಿಳಿದು ಮಾಡುವ ತಪ್ಪು, ಮೋಸ, ವಂಚನೆ, ದ್ರೋಹ, ಅನಾಚಾರ, ಅತ್ಯಾಚಾರ, ಕೊಲೆ, ದರೋಡೆ, ಸುಳ್ಳು, ಹಿಂಸೆ ಅಧರ್ಮ ಮತ್ತು ವಿಕೃತಿಯ ಕೆಲಸಗಳು ಪಾಪದ ಪಟ್ಟಿಯಾದರೆ, ಈ ಪಾಪದ ಪಟ್ಟಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಸೇರಿಕೊಳ್ಳುತ್ತಿದ್ದಾರೆ. ಇದು ಬಹಳ ಆತಂಕಕಾರಿಯಾಗಿದ್ದರೂ, ವಾಸ್ತವ ಸ್ಥಿತಿ ಮತ್ತು  ಸಜ್ಜನರಾಗಿ ಬಾಳುವ ಜನರಿಗೆ ಸವಾಲು ಕೂಡ. ದಿನ ಕಳೆದಂತೆ ಗೌರವ, ಮಾನ, ಮರ್ಯಾದೆ, ಎಲ್ಲವನ್ನೂ ಮರೆತು ಬದುಕುವ ಜನರು ಹೆಚ್ಚುತಿದ್ದಂತೆ ಸಮಾಜದಲ್ಲಿ ಕಲಹ, ದ್ವೇಷ, ಹೊಡೆದಾಟ, ಎಲ್ಲವೂ ಹೆಚ್ಚಾಗುತ್ತಿದೆ. ಹೆಚ್ಚು ತಿಳಿಯಬೇಕಿದ್ದರೆ, ದಿನ ಬಿಡದೆ ದಿನಪತ್ರಿಕೆಯಲ್ಲಿ ಬರುತ್ತಿರುವ ವಿವಿಧ ಸುದ್ದಿಗಳು, ಅಥವಾ ನಿಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅದೆಷ್ಟೋ ನಿದರ್ಶನಗಳು.ಒಂದಲ್ಲ ಎರಡಲ್ಲ, ಒಂದೂವರೆ ವಯಸ್ಸಿನ ಕೂಸಿನಿಂದ ಹಿಡಿದು ವೃದ್ದೆಯನ್ನು ಕೂಡ ಬಿಡದೆ ನಡೆದಿರುವ ಅತ್ಯಾಚಾರಗಳು, ಆಸ್ತಿಗಾಗಿ ಅಣ್ಣನ ಕೊಲೆ, ತಮ್ಮನ ಕೊಲೆ, ತಾಯಿಯ ಕತ್ತು ಹಿಸುಕಿದ ಮಕ್ಕಳು, ಮಕ್ಕಳಿಗೆ ವಿಷ ಉಣಿಸಿ ಅನ್ಯ ಪುರುಷರೊಂದಿಗೆ ಓಡಾಟ, ತಂದೆಯೇ ಮಗಳನ್ನು ಅತ್ಯಾಚಾರಗೊಳಿಸಿದ ಘಟನೆಗಳು, ಮಕ್ಕಳನ್ನೇ ತಂದೆ ಮದುವೆಯಾದ ಘಟನೆ, ತಾಯಿಯೇ ಮಗಳನ್ನು ವೇಶ್ಯೆ ಯಾಗಿ ದುಡಿಯಲು ಸಹಕಾರ, ವಿಕೃತರಿಂದ ಪ್ರಾಣಿಗಳ ಮೇಲೆ ಅತ್ಯಾಚಾರ, ಮತಾಂಧರಿಂದ ಅಮಾಯಕರ ಕೊಲೆ, ವಿದ್ಯಾವಂತರಿಂದ ಅವಿದ್ಯಾವಂತ ಜನರಿಗೆ ಮೋಸ, ಆಸ್ತಿ, ಮನೆ,ಬಂಗಾರ, ಮೌಲ್ಯದ ಹಿಂದೆ ಬಿದ್

(ಲೇಖನ -15)ದೇವರು ಕೊಟ್ಟ ವರ...!

Image
ದೇವರು ಕೊಟ್ಟ ವರ,    ಮಾನವನಾಗಿ ಹುಟ್ಟುವುದೇ ದೇವರು ಕೊಟ್ಟ ವರ, ಸಕಲ ಜೀವ ರಾಶಿಗಳಲ್ಲಿ ಮಾನವ ಜೀವ  ಬುದ್ದಿವಂತನೆಂದು ಹೇಳಿಕೊಳ್ಳುತ್ತಿದ್ದರೂ, ಆತನ ಬುದ್ದಿವಂತಿಕೆ,ಉದ್ದಾರ, ಸರ್ವ ನಾಶಕ್ಕೂ ಕಾರಣವಾಗುತ್ತಿದೆ.  ದೇಶ ವಿದೇಶಗಳಲ್ಲಿ ಬೆಳೆದು ಅಂತ್ಯದಲ್ಲಿ ದುರ್ಜನರಾಗಿ ಅಥವಾ ಸಜ್ಜನರಾಗಿ ಸಾಯುತ್ತೇವೆ. ಬದುಕಿನ ಪ್ರತಿಯೊಂದು ಸಂಧರ್ಭದಲ್ಲಿ ಹೊಸ ಪಾಠವನ್ನು ಕಲಿಯುತ್ತೇವೆ. ಕೆಲವರು  ತಪ್ಪುಗಳನ್ನು ಮಾಡಿ ಶಿಕ್ಷೆ ಅನುಭವಿಸಿದರೆ, ಕೆಲವರು ತಪ್ಪುಗಳನ್ನೇ ಮಾಡದೇ ಶಿಕ್ಷೆಗೆ ಒಳಗಾಗುತ್ತಾರೆ. ಒಟ್ಟಾರೆ ದೇವರು ಕೊಡುವ ಶಿಕ್ಷೆಗಿಂತ ಜಾಸ್ತಿ ಜನರಿಂದ ಜನರೇ ತೊಂದರೆ, ಮತ್ಸರ, ಮೋಸ ಗಳನ್ನು ಮಾಡಿ ಸರಿಯಾಗಿ ಜೀವಿಸಲಾಗದಷ್ಟು ಕೆಟ್ಟದಾಗಿ ಬದುಕುತ್ತಾರೆ.         ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆ ಮುಂದಿನ ಜೀವನಕ್ಕೆ ಮತ್ತಷ್ಟು ಕಷ್ಟಗಳನ್ನು ತಂದೊಡ್ಡಬಹುದು, ಅಥವಾ ಸವಾಲಾಗಿ ಸ್ವೀಕರಿದವರು ಹೊಸ ಜೀವನ ಮಾಡಬಹುದು, ಅಥವಾ ಭಯ, ಉದ್ವೆಗ, ತಪ್ಪು ನಿರ್ಧಾರಕ್ಕೂ ದಾರಿ ತೋರಿಸಬಹುದು, ಯಾರ ಬದುಕು ಯಾವ ದಿಕ್ಕಿನಲ್ಲಿ ಹೋಗುತ್ತದೆ ಅನ್ನುವುದು ನಿಘುಡವಾಗಿರುತ್ತದೆ. ನಿಮ್ಮ ಕಣ್ಣಲ್ಲಿ ನೋಡುವ ಎಲ್ಲಾ ದೃಶ್ಯಗಳನ್ನು ನಂಬುವುದು ಕಷ್ಟ,  ಪ್ರತಿಯೊಂದು ಚಿತ್ರ, ಸಂದರ್ಭ, ದೃಶ್ಯಗಳಿಗೆ, ವಿವಿಧ ಕಾರಣಗಳು ಇರುತ್ತವೆ, ಆದರೆ ಆ ಕಾರಣಗಳು ಕೆಲವು ನ್ಯಾಯೋಚಿತ ಆಗಿದ್ದರೆ ಕೆಲವು ಉದ್ದೇಶಪೂರ್ವಕ ಅನ್ಯಾಯದಿಂದ ತುಂಬಿ ತುಳುಕುತಿರುತ್ತದೆ. ಮನುಷ್ಯನು ತನ್ನ ಆರೋ

"ಸಿಂಚನ"ಳಿಗೆ ಬೇಕಿದೆ ಸಹಾಯ ಹಸ್ತ -

Image
ಮೊನ್ನೆಯಷ್ಟೇ ತಿಳಿದುಬಂದ, ಬಂಟ್ವಾಳ ಕ್ಷೇತ್ರದಲ್ಲಿನ ಹೃದಯ ಕರಗುವ ಸುದ್ದಿ! ಹೆಸರು ಸಿಂಚನ, ಅವರ ಅಪ್ಪ ಅಮ್ಮನ ಮನೆ ನೋಡಿಯೇ ಕಣ್ಣು ಮತ್ತೊಮ್ಮೆ ನೋಡಲು ಒಪ್ಪುತ್ತಿಲ್ಲ. ಹಾವು ಕಡಿತದಿಂದ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿ, 9 ವರ್ಷ ಪ್ರಾಯದ ಸಿಂಚನಳಿಗೆ ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವಿರಾ? ಮನೆ ಪಕ್ಕದ ಚೇತನಾ ಎಂಬವರ ಮಾಹಿತಿಯ ಪ್ರಕಾರ, ಸರಸ್ವತಿ ಎಂಬ ಹೆಸರಿನ ತಾಯಿಯ ಮಗಳು ಸಿಂಚನ, ಮನೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದೇ ಜೀವನಕ್ಕೂ ಕಷ್ಟ ಪಡುತ್ತಿರುವ ಕಾಲದಲ್ಲಿ, ಹಾವು ಕಡಿತಕ್ಕೆ ಒಳಗಾದ ಮಗಳಿಗೆ ಚಿಕಿತ್ಸೆ ಕೊಡಿಸಲು ನಾವು ನೀವೆಲ್ಲರೂ ಜೊತೆ ಸೇರಿ ಸಹಾಯ ಮಾಡೋಣ ಅಲ್ಲವೇ, ಸಹೃದಯಿಗಳಾದ ತಾವೆಲ್ಲರೂ ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಕನಿಷ್ಟ 100 ರೂಪಾಯಿಯಾದರು ಸಹಾಯದ ರೂಪದಲ್ಲಿ ನೀಡುವಿರೆಂಬ ಭರವಸೆಯೊಂದಿಗೆ.                   - ✍️ಮಾಧವ. ಕೆ. ಅಂಜಾರು.

(ಲೇಖನ -17)ಜನನಾಯಕಿ ಎಂದರೆ ಹೀಗಿರಬೇಕು

Image
 ಜನನಾಯಕಿ ಎಂದರೆ ಹೀಗಿರಬೇಕು! ಜನನಾಯಕಿ ಎಂದರೆ " ಗೀತಾಂಜಲಿ ಎಂ. ಸುವರ್ಣ " ಕಟಪಾಡಿ ಇವರಂತಿರಬೇಕು . ಹೌದು, ಜನರ ಸೇವೆ ಎಂದರೆ ಸುಲಭದ ಮಾತಲ್ಲ, ರಾಜಕೀಯ ಜೀವನವೆಂದರೂ ಸುಲಭದ ಮಾತಲ್ಲ, ರಾತ್ರಿ, ಮುಂಜಾನೆ, ಸಂಜೆಯ ಹೊತ್ತು ಎಂಬ ನಿಗದಿತವಾಗಿರದೆ ನಿರಂತರ ಪ್ರರಿಶ್ರಮ, ಪ್ರತಿಕ್ರಿಯೆ, ಸ್ಪಂದನೆ, ಬೇಡಿಕೆ, ಮತ್ತು ವಿರಾಮವಿಲ್ಲದೆ ನಡೆಯುವ ಯಂತ್ರದಂತೆ.  ಊರಿನ, ಪರವೂರಿನ, ದೇಶ, ವಿದೇಶದಿಂದ ಬರುವ ಕರೆ, ವಿವಿಧ ತರದ ವಿನಂತಿ ಪತ್ರ , ಸಮಸ್ಯೆಗಳು, ಸಮಾಜದ ಪ್ರತೀ ಜನರ ಬೈಗುಳ, ಹೊಗಳಿಕೆ ಎಲ್ಲವನ್ನೂ ಸಹಿಸಿಕೊಂಡು ನಡೆಯುವ ಜೀವನ. ಒಂದು ದೃಷ್ಟಿಯಲ್ಲಿ ರಾಜಕೀಯಕ್ಕೆ ಪ್ರೆವೇಶ ಮಾಡುವುದು ಇಷ್ಟವಿದ್ದೇನಲ್ಲ ದೇವರುಗಳು ಜನರ ಸೇವೆಗಾಗಿ ಕಳುಹಿಸುವ ಜನರೆಂದು ಹೇಳಬಹುದು.      ನಮ್ಮಂತಯೇ ಅವರಿಗೂ, ಮರಿ ಮಕ್ಕಳು, ಸಂಸಾರ, ಅನ್ನೋದು ಇರುತ್ತದೆ, ಅದರಲ್ಲೂ ಅದ್ಯಾವ ಸಮಯದಲ್ಲಿ ತನ್ನ ಹತ್ತಿರದವರಿಗಾಗಿ ಸಮಯ ಕಳೆಯುತ್ತಾರೋ ಗೊತ್ತಾಗದು. ಎಲ್ಲವನ್ನು ತ್ಯಾಗ ಮಾಡಿ ಬದುಕುವ ಶೈಲಿ ಸಾಮಾನ್ಯ ಜನರಿಗೆ ತಿಳಿಯದು. ಒಂದು ಕರೆಗೆ ಅಥವಾ ಬೇಡಿಕೆಗೆ ಸ್ಪಂದಿಸದೆ ಇದ್ದರೆ ಸಾಮಾಜಿಕ ಜಾಲ ತಾಣ, ಟಿವಿ ಮಾಧ್ಯಮ, ಪತ್ರಿಕೋದ್ಯಮ ಇದರಲ್ಲಿ ಎಲ್ಲದರಲ್ಲೂ ಅವರ ಮಾನ ಹರಾಜು, ಅವಿವೇಕರು, ಜವಾಬ್ದಾರಿ ಇಲ್ಲದವರು ಅನ್ನುವ ಜನಗಳಿಗೇನು ಗೊತ್ತು ಅವರೂ ನಮ್ಮಂತಯೇ ಮನುಜರೆಂದು? ಅದೆಲ್ಲ ಒಂದು ವರ್ಗದ ಚಿಂತನೆಯಾದರೆ, ಮತ್ತೊಂದು ವರ್ಗದವರು ಕರುಣೆ, ಸಹಾಯ ಮನೋಭಾವನೆ ಹೊ

ಕೃಪೆಯಿರಲಿ ಈಶ್ವರ (ಕವನ 3)

ಬೋರ್ಘರೆವ ಸಾಗರದೊಳು ಸಿಲುಕಿದ ನೌಕೆಯು ನಾವಿಕನ ಹತೋಟಿಯೊಳು ಸಿಗಲಾರದೆ ಮುಳುಗೇಳುತಿದೆ ಆರ್ಭಟಿಸುವ ಸೆರೆಗಳಲಿ, ಪ್ರಶಾಂತತೆಯ ಪಯಣ ಬಯಸಿದ ನಾವಿಕನಿಗೆ  ಬಿರುಗಾಳಿಯ ಸೆಡ್ಡು ಬಿಡಲಾರದೆ ರಬಸವ ಹೆಚ್ಚಿಸುತಲಿದೆ ದಡ ಸೇರಿಸದಿರಲು, ಹರಸಾಹಸ ನಡುನೀರಲಿ ವೇಗವಿಲ್ಲದೆ ಮುನ್ನುಗ್ಗಲಿ, ನಿದಾನವಾಗಿಹ ಪಯಣಕೆ ಕೃಪೆಯಿರಲಿ ಈಶ್ವರ  ದಡ ಸೇರದಿರದು ನಿನ್ನ ಪವಾಡದಲಿ,         - ಮಾಧವ. ಕೆ. ಅಂಜಾರು.