ಎಲ್ಲರಂತೆ ಮದ್ವೆಯಾದ ಸ್ವಲ್ಪ ದಿನ ಚಂದಿರನಾದ ಅಮಾವಾಸ್ಯ ಬರುತ್ತಿದ್ದಂತೆ ಚಂದಿರನೇ ಮಾಯವಾದ ನೀನೇ ನನ್ನ ಬಾಳು ಅಂದ ನಿನ್ನನೆಂದೂ ಬಿಡೆನು ಅಂದ ಭೂಮಿಯಲ್ಲೂ ಆಕಾಶದಲ್ಲೂ ನಿನಗಿಂತ ಸುಂದರಿ ಇಲ್ಲವೆಂದ ಸ್ವಲ್ಪ ವರುಷ ಕಳೆದು ಹೇಳಿದ ಮದ್ವೆ ಯಾಕೆ ಬೇಕಿತೆಂದ ನಿನಗೆ ಮದುವೆ ಬೇಡ ಅಂದ ಆರಂಭ ಮಾತ್ರ ಚೆಂದ ವೆಂದ ಒಂದೊಂದೇ ಆರಂಭಿಸಿದ ನಾನು ರಾಜನಂತಿದ್ದೆ ಅಂದ ನಿನ್ನ ವರಿಸಿ ಬೆವರು ಸುರಿಸಿ ಪ್ರಯೋಜನವೇ ಇಲ್ಲವೆಂದ ತಂದೆ ತಾಯಿಯ ಕಡೆಗೆ ಬಂದ ಹೆಂಡತಿಯೆನಗೆ ಬೇಡವೆಂದ ತಾಯಿ ಮಮತೆ ತೋರಿದರು ತಂದೆ, ಕೆನ್ನೆಗೆ ಕೊಡುವೆನೆಂದ ಚಿನ್ನಾ ನಿನ್ನ ಬಿಡೆನು ಅಂದ ನೀನೇ ಮುದ್ದು ಕಂದಾ ಅಂದ ನೀನಿಲ್ಲದಿದ್ದರೆ, ನಾನೆ ಇಲ್ಲವೆಂದ ಇಂದಿನಿಂದ ಇರಲಿ ಬಂಧವೆಂದ -ಮಾಧವ ಅಂಜಾರು