ಅಮ್ಮಾ ನಿನ್ನ ಸೇವೆಯೋಳು
ಅಮ್ಮಾ ನಿನ್ನ ಸೇವೆಯೋಳು
ಸಂತೃಪ್ತನಾದೆ ನಾನು
ದಿನ ನಿನದೆ ರಕ್ಷೆಯೇನಗೆ
ಧನ್ಯನಾದೆ ನಾನು ॥
ನಿನ್ನ ಪಾದದ ನೆರಳಿನೊಳಗೆ
ನೆಮ್ಮದಿಯ ಕಂಡೆ ನಾನು
ನಿನ್ನ ನಾಮದ ಸ್ಮರಣೆಯೊಳಗೆ
ಪಾವನನಾದೆ ನಾನು ॥
ಅಮ್ಮಾ ನಿನ್ನ ಕರುಣೆಯೇ
ಜೀವನದ ಬೆಳಕು ನನಗೆ
ನಿನ್ನ ಪ್ರೀತಿಯ ಮಡಿಲಿನೊಳಗೆ
ಸ್ವರ್ಗವ ಕಂಡೆ ನಾನು ॥
ಕಷ್ಟ ಬಂದಾಗ ಕೈಯ ಹಿಡಿದೆ
ಕಣ್ಣೀರ ಒರೆಸಿದೆ ನೀನು
ದಾರಿಯ ಕಾಣದೆ ನಿಂತಾಗ
ದೀಪವಾಗಿ ಬಂದೆ ನೀನು ॥
ನಿನ್ನ ಕೃಪೆಯ ಬಲದಿಂದಲೇ
ಬದುಕನು ಸಾಗಿಸುವೆನು
ನಿನ್ನ ಸೇವೆಯ ಭಾಗ್ಯವೊಂದೆ
ಬೇಡುವೆ ಅಮ್ಮಾ ನಾನು ॥
ಕಣ್ಣೀರ ಒರೆಸಿದೆ ನೀನು
ದಾರಿಯ ಕಾಣದೆ ನಿಂತಾಗ
ದೀಪವಾಗಿ ಬಂದೆ ನೀನು ॥
ನಿನ್ನ ಕೃಪೆಯ ಬಲದಿಂದಲೇ
ಬದುಕನು ಸಾಗಿಸುವೆನು
ನಿನ್ನ ಸೇವೆಯ ಭಾಗ್ಯವೊಂದೆ
ಬೇಡುವೆ ಅಮ್ಮಾ ನಾನು ॥
-ಮಾಧವ. ಕೆ ಅಂಜಾರು
Comments
Post a Comment